HomeFresh Newsಜೂನ್ 11 ರಂದು : ವಿಧಾನಸಭೆಯ ಸ್ಪೀಕರ್ ಖಾದರ್ ಅವರಿಗೆ ಪೌರ ಸನ್ಮಾನ

ಜೂನ್ 11 ರಂದು : ವಿಧಾನಸಭೆಯ ಸ್ಪೀಕರ್ ಖಾದರ್ ಅವರಿಗೆ ಪೌರ ಸನ್ಮಾನ

ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್ ಅವರಿಗೆ ಉಳ್ಳಾಲ ನಗರ ಪೌರ ಸನ್ಮಾನ ಸಮಿತಿ ಆಶ್ರಯದಲ್ಲಿ ಪೌರ ಸನ್ಮಾನ ಕಾರ್ಯಕ್ರಮ ಜೂನ್ 11 ರಂದು ಸಂಜೆ 6 ಗಂಟೆಗೆ ಉಳ್ಳಾಲ ನಗರ ಸಭೆ ಮೈದಾನದಲ್ಲಿ ನಡೆಯಲಿದೆ ಎಂದು ಪೌರ ಸನ್ಮಾನ ಸಮಿತಿ ಸಮಿತಿ ಅಧ್ಯಕ್ಷ ಈಶ್ವರ್ ಉಳ್ಳಾಲ ಹೇಳಿದರು.

ಉಳ್ಳಾಲ ಪ್ರೆಸ್‍ಕ್ಲಬ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಐದು ಬಾರಿ ಶಾಸಕರಾಗಿ, ಸಚಿವರಾಗಿ ಕಾರ್ಯನಿರ್ವಹಿಸಿದ್ದ ಯು.ಟಿ.ಖಾದರ್ ಅವರು ವಿಧಾನಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿರುವುದು ಅವರ ರಾಜಕೀಯ ಜೀವನದ ಮೈಲಿಗಲ್ಲು. ಈ ನಿಟ್ಟಿನಲ್ಲಿ ಉಳ್ಳಾಲದ ಶ್ರೀ ಸೋಮನಾಥ ದೇವಸ್ಥಾನ, ಸೆಯ್ಯದ್ ಮದನಿ ದರ್ಗಾ ಮತ್ತು ಸಂತ ಸೆಬಾಸ್ಟಿಯನ್ ಚರ್ಚ್ ಸಹಿತ ಸರ್ವ ಧರ್ಮಗಳ ಮೂಲ ನೆಲದಲ್ಲಿ ಎಲ್ಲಾ ಜಾತಿ ವರ್ಗಗಳ ಮುಂದಾಳತ್ವದಲ್ಲಿ ಈ ಪೌರ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಸರ್ವಧರ್ಮದ ಧಾರ್ಮಿಕ ಮುಖಂಡರು, ಗಣ್ಯ ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಕಾಂಗ್ರೆಸ್ ಮುಖಂಡರಾದ ಮುಸ್ತಫಾ ಉಳ್ಳಾಲ, ಡೆನ್ನಿಸ್ ಡಿಸೋಜ, ಯೂಸುಫ್ ಉಳ್ಳಾಲ, ಅಯ್ಯೂಬ್ ಮಂಚಿಲ, ಮನ್ಸೂರ್ ಉಳ್ಳಾಲ, ಉಸ್ಮಾನ್ ಕಲ್ಲಾಪು, ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments