Home Posts tagged #v4news (Page 2)

ಭಾಜೋನ್ಯಾಯಾ ಅಸ್ಸಾಂ ಯಾತ್ರೆ ರಾಹುಲ್‍ ಗಾಂಧಿಯಿಂದ ಮತ್ತೆ ಬಿಜೆಪಿ ಖಂಡನೆ

ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ್ದಾರೆ ಎಂದು ಗೌಹತಿಯಲ್ಲಿ ಪೋಲೀಸರು ರಾಹುಲ್ ಗಾಂಧಿಯವರ ವಿರುದ್ಧ ಪ್ರಕರಣ ದಾಖಲಿಸಿದ್ದರೂ, ಅದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಭಾರತ್ ಜೋಡೋ ನ್ಯಾಯ ಯಾತ್ರೆಯು ಬುಧವಾರ ಬಾರ್‍ಪೇಟ್‍ನತ್ತ ಮುನ್ನಡೆಯಿತು. ರಾಹುಲ್ ಗಾಂಧಿ ಅವರಲ್ಲದೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಮೊದಲಾದವರ ವಿರುದ್ಧ

ಅಯೋಧ್ಯೆ:ಶ್ರೀರಾಮ ಮಂದಿರದಲ್ಲಿ ಮಂಡಲೋತ್ಸವ ಆರಂಭ

ಅಯೋಧ್ಯೆಯ ನೂತನ ಮಂದಿರದಲ್ಲಿ ಶ್ರೀರಾಮನ ವಿಧ್ಯುಕ್ತ ಪ್ರತಿಷ್ಠಾಪನೆಯ ನಂತರ ಮಂಗಳವಾರದಿಂದ 48 ದಿನಗಳ ಪೇಜಾವರ ಶ್ರೀಗಳ ನೇತೃತ್ವದಲ್ಲಿ ನಡೆಯಲಿರುವ ಮಂಡಲೋತ್ಸವ ಆರಂಭಗೊಂಡಿದೆ. ಪೇಜಾವರ ಶ್ರೀಗಳು ಮಂಗಳವಾರವೂ ವಿವಿಧ ಮಂತ್ರಗಳಿಂದ ಪ್ರತಿಮೆಗೆ ತತ್ವನ್ಯಾಸಾದಿಗಳನ್ನು ನೆರವೇರಿಸಿ ಕಲಶಪೂಜೆ ಚಾಮರಸೇವೆ ಮಂಗಳಾರತಿಗಳನ್ನು ನೆರವೇರಿಸಿ ಪೂಜೆ ಸಲ್ಲಿಸಿದರು.ಇದಕ್ಕೂ ಮೊದಲು ಪಿಲೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಚಾರ್ಯ ವಿದ್ವಾನ್ ಸತ್ಯನಾರಾಯಣಾಚಾರ್ಯ ,ವಿಷ್ಣುಮೂರ್ತಿ

ಕಾರ್ಕಳ: ಅತ್ತೂರು ಬಸಿಲಿಕದ ವಾರ್ಷಿಕೋತ್ಸವ ಕ್ಷೇತ್ರಕ್ಕೆ ಭೇಟಿ ನೀಡಿದ ಸ್ಪೀಕರ್ ಯು.ಟಿ. ಖಾದರ್

ಕಾರ್ಕಳದ ಅತ್ತೂರು ಬಸಿಲಕದ ವಾರ್ಷಿಕೋತ್ಸವ ಸಂಭ್ರಮದಿಂದ ನಡೆಯುತ್ತಿದೆ. ಕ್ಷೇತ್ರಕ್ಕೆ ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಅವರು ಭೇಟಿ ನೀಡಿ ಮೊಂಬತ್ತಿ ಬೆಳಗಿದರು. ಮಂಗಳೂರು ಧರ್ಮ ಪ್ರಾಂತ್ಯದ ಗುರುಗಳಾದ ವಂದನೀಯ ವಾಲ್ಟರ್ ಡಿ ಮೇಲ್ಲೋರವರು ಜನರು ಪ್ರಭೇದನೆಗಳಿಗೆ ಒಳಗಾಗದಂತೆ ಪ್ರಾರ್ಥಿಸೋಣ ಎಂಬ ವಿಷಯದ ಬಗ್ಗೆ ಭಕ್ತಾದಿಗಳಿಗೆ ದೇವರ ವಿಶೇಷ ಸಂದೇಶ ನೀಡಿದರು. ಪ್ರಭೇದನಿಗೆ ಒಳಗಾಗದಂತೆ ಒಂದು ದಿನದ ವಿಷಯವನ್ನು ಧ್ಯಾನಿಸಿ ಅವರು ಗಾಯನ ಬಲಿ ಪೂಜೆ ನೆರವೇರಿಸಿ

ಗುಜರಾತ್ ಪೋಲೀಸರಿಗೆ ಜೈಲೇ ಗತಿ

ಜನರನ್ನು ಕಂಬಕ್ಕೆ ಕಟ್ಟಿ ಹೊಡೆಯಲು ನಿಮಗೆ ಅಧಿಕಾರ ಇದೆಯೇ? ಹೋಗಿ ಜೈಲು ಸಿಕ್ಷೆ ಅನುಭವಿಸಿ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಗವಾಯಿಯವರು ಕೋಪದಿಂದ ಹೇಳಿದರು. ಅಲ್ಲದೆ ಸರ್ವೋಚ್ಚ ನ್ಯಾಯಾಲಯವು ಶಿಕ್ಷಿತ ಪೋಲೀಸರಿಗೆ ಛೀಮಾರಿ ಹಾಕಿತು. ಇನ್ಸ್‍ಪೆಕ್ಟರ್ ಎ. ವಿ. ಪರ್ಮಾರ್, ಸಬ್ ಇನ್ಸ್‍ಪೆಕ್ಟರ್ ಡಿ. ಬಿ. ಕುಮಾವತ್ ಮತ್ತು ಇಬ್ಬರು ಕಾನ್‍ಸ್ಟೇಬಲ್‍ಗಳು ಶಿಕ್ಷಿತ ಪೋಲೀಸರು. ನ್ಯಾಯಮೂರ್ತಿಗಳಾದ ಬಿ. ಆರ್. ಗವಾಯಿ, ಸಂದೀಪ್

ಮಿಜೋರಾಂನ ಲೆಂಗ್‍ಪುಯಿಯಲ್ಲಿ ಬಿದ್ದ ವಿಮಾನ

ಮ್ಯಾನ್ಮಾರ್ ಮಿಲಿಟರಿ ವಿಮಾನವೊಂದು ಭಾರತದ ಮಿಜೋರಾಂನ ಲೆಂಗ್‍ಪುಯಿಯಲ್ಲಿ ನೆಲಕ್ಕೆ ವೇಗವಾಗಿ ಒರೆಸಿದ್ದು ಅದರಲ್ಲಿದ್ದ ಗಾಯಗೊಂಡ 14 ಜನರನ್ನು ಲೆಂಗ್‍ಪುಯಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಸ್ಥಳೀಯ ಡಿಜಿಪಿ ಹೇಳಿದ್ದಾರೆ. ಮಂಗಳವಾರ ಮ್ಯಾನ್ಮಾರ್ ವಿಮಾನವು ಲೆಂಗ್‍ಪುಯಿ ವಿಮಾನ ನಿಲ್ದಾಣಕ್ಕೆ ಬಡಿದು ಕೆಳಗಿಳಿದಿದೆ. ಪೈಲಟ್ ಸಹಿತ ಅದರಲ್ಲಿದ್ದ 14 ಮಂದಿ ಗಾಯಗೊಂಡಿದ್ದಾರೆ. ಕೂಡಲೆ ಎಲ್ಲರನ್ನೂ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.

ಅಯೋಧ್ಯೆ ವಿಚಾರದಲ್ಲಿ ನಾವು ಅಂತರ ಕಾಯ್ದುಕೊಂಡಿಲ್ಲ ಸಚಿವ ಶಿವರಾಜ್ ತಂಗಡಗಿ ವಾಗ್ದಾಳಿ

ಅಯೋಧ್ಯೆ ವಿಚಾರದಲ್ಲಿ ನಾವು ಅಂತರ ಕಾಯ್ದುಕೊಂಡಿಲ್ಲ, ನಾವು ಕೂಡ ರಾಮ ಮತ್ತು ಆಂಜನೇಯನ ಭಕ್ತರೇ.. ಬಿಜೆಪಿ ರಾಮನನ್ನು ರಾಜಕೀಯಕರಣ ಮಾಡುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹೇಳಿದರು. ಉಡುಪಿಯಲ್ಲಿ ಬಿಜೆಪಿ ವಿರುದ್ದ ಅಕ್ರೋಶ ವ್ಯಕ್ತಪಡಿಸಿದ ಸಚಿವರು.ಧರ್ಮ ಇದ್ದರೆ ಮಾತ್ರ ಬಿಜೆಪಿಗೆ ರಾಜಕಾರಣ ಮಾಡಲು ಸಾಧ್ಯ, ಬಿಜೆಪಿಗೆ ಅಭಿವೃದ್ಧಿ ಮತ್ತು ಬಡವರ ಚಿಂತನೆ ಬೇಕಾಗಿಲ್ಲ. ಎಷ್ಟು ಜನರಿಗೆ ನೀರಾವರಿ ವ್ಯವಸ್ಥೆ ಮಾಡಿದ್ದೀರಿ ಉದ್ಯೋಗ

ಅಖಿಲ ಭಾರತ ವಕೀಲೆಯರ ರಾಜ್ಯ ಸಮಾವೇಶ

ಭ್ರಷ್ಟಾಚಾರದ ಕಾರಣಕ್ಕೆ ಭಾರತದ ಶಾಸಕಾಂಗ, ಕಾರ್ಯಾಂಗಗಳು ಜನರ ವಿಶ್ವಾಸ ಕಳೆದುಕೊಂಡಿದ್ದರೂ ನ್ಯಾಯಾಂಗವು ಜನರ ನಂಬಿಕೆ ಉಳಿಸಿಕೊಂಡಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಂ. ಜಿ. ಉಮಾ ಹೇಳಿದರು. ಅವರು ರಾಯಚೂರು ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯದ ಹಾಲ್‍ನಲ್ಲಿ ನಡೆದ ಮಹಿಳಾ ವಕೀಲರ ರಾಜ್ಯ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ನ್ಯಾಯಾಂಗವು ಬಲವಾಗಿದ್ದರೆ ಪ್ರಜಾಪ್ರಭುತ್ವವೂ ಗಟ್ಟಿ. ಭಾರತದ ನ್ಯಾಯಾಂಗ ಅಚಲವಾಗಿದೆ. ಆದರೆ ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ

ಲೋಕ ಸಭಾ ಚುನಾವಣೆಗೆ ಉಡುಪಿ ಜಿಲ್ಲೆಯ ಮತದಾರರ ಪಟ್ಟಿ ಪ್ರಕಟ

ಲೋಕ ಸಭಾ ಚುನಾವಣೆ ಸಂಬಂಧ ಚುನಾವಣಾ ಆಯೋಗದ ಕೋರಿಕೆಯಂತೆ ಉಡುಪಿ ಜಿಲ್ಲೆಯ ಸದ್ಯದ ಅಂತಿಮ ಅರ್ಹ ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಪ್ರಕಟಿಸಿದರು. ಜಿಲ್ಲೆಯ ಐದೂ ವಿಧಾನ ಸಭಾ ಕ್ಷೇತ್ರಗಳು ಸೇರಿ 10,45,296 ಅರ್ಹ ಮತದಾರರು ಇದ್ದಾರೆ. ಇವರಲ್ಲಿ 5,40,833 ಮಹಿಳೆಯರು, 5,04,448 ಗಂಡಸರು ಹಾಗೂ 15 ಮಂದಿ ತೃತೀಯ ಲಿಂಗಿಗಳಾಗಿದ್ದಾರೆ. ಹೊಸದಾಗಿ ಮತದಾರ ಪಟ್ಟಿಗೆ ಸೇರಿದ ಯುವ ಸಮುದಾಯದ ಸಂಖ್ಯೆ 10,245 ಆಗಿದೆ. ಯಥಾಪ್ರಕಾರ ಮತದಾರರ

ಮಾಜೀ ಮಂತ್ರಿಗೆ ಮಾಜೀ ಮಂತ್ರಿಯ ನುಡಿ ಛಡಿಯೇಟು

ನನ್ನನ್ನು ಗಡಿಪಾರು ಮಾಡುವುದಕ್ಕೆ ಮೊದಲು ನೀನು ಗಡಿಪಾರು ಆಗುವುದರಿಂದ ರಕ್ಷಿಸಿಕೋ ಎಂದು ಮಾಜೀ ಸಚಿವ ಬಿ. ಕೆ. ಹರಿಪ್ರಸಾದ್ ಅವರು ಮತ್ತೊಬ್ಬ ಮಾಜೀ ಮಂತ್ರಿ ಶ್ರೀರಾಮುಲುಗೆ ಎಚ್ಚರಿಕೆ ನೀಡಿದ್ದಾರೆ. ರಾಮುಲು ಅವರೆ ನೀವು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವರದಿಯಲ್ಲಿ ಹಲವು ಗಂಭೀರ ಪ್ರಕರಣಗಳನ್ನು ಎದುರಿಸುತ್ತಿರುವುದಾಗಿ ಬರೆದು ಹೇಳಿದ್ದೀರಿ. ಕಳ್ಳ ಗಣಿಗಾರಿಕೆ ಮಾಡಿ, ತೆರಿಗೆ ವಂಚಿಸಿ ದೇಶದ್ರೋಹ ಮಾಡಿದ್ದೀರಿ. ನಿಮ್ಮ ಗೃಹ ಮಂತ್ರಿ ಅಮಿತ್ ಶಾರನ್ನು ಕೋರ್ಟು

ಮಂಗನಿಂದ ಸೇತುವೆ ಕಟ್ಟಲು ಕಲಿತ ಮಾನವ

ಮಹಾರಾಷ್ಟ್ರದ ಸಚಿವ ಸಂಪುಟ ಸಭೆ ಸೇರಿ ಹೊಸ ಉದ್ಘಾಟನೆ ಆಗಲಿರುವ ಸಮುದ್ರ ಸೇತುವೆಗೆ 250 ರೂಪಾಯಿ ಸುಂಕ ನಿರ್ಧಾರ ಮಾಡಿತು. ವಾಹನಗಳಿಗೆ 250 ರೂಪಾಯಿ ಸುಂಕವನ್ನು ಹಲವು ಸಮಾಜ ಸೇವಕರು ಖಂಡಿಸಿದರು. ಚುನಾವಣೆ ಬರುವಾಗ ಇಷ್ಟು ಸುಂಕವಾದರೆ ಚುನಾವಣೆ ಮುಗಿದ ಮೇಲೆ ಸುಂಕ ದುಪ್ಪಟ್ಟು ಮಾಡುವ ದುರಾಲೋಚನೆ ನಿಮ್ಮದು ಎಂದು ಕೆಲವರು ಕೀಟಲೆ ಮಾಡಿದ್ದೂ ಆಯಿತು. ಭಾರತದ ಅತಿ ಉದ್ದದ ಸೇತುವೆಯಾದ ಇದನ್ನು ಪ್ರಧಾನಿ ಮೋದಿಯವರು ಮುಂದಿನ ವಾರ ಉದ್ಘಾಟನೆ ಮಾಡಲಿರುವರು. ಮುಂಬಯಿ