Home Posts tagged V4News (Page 86)

ಯುಎಇ: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಘಟಕ ದುಬೈ ವತಿಯಿಂದ ದುಬೈ 10ರಂದು ಗಡಿನಾಡ ಉತ್ಸವ

ದುಬೈ : ದುಬೈನಲ್ಲಿ ಡಿ.10 ರಂದು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ಯು.ಎ.ಇ. ದುಬೈ ಘಟಕದ ವತಿಯಿಂದ ಅದ್ದೂರಿಯಾಗಿ “ದುಬೈ ಗಡಿನಾಡ ಉತ್ಸವ-2023″ಕಾರ್ಯಕ್ರಮ ನಡೆಯಲಿದೆ. ಆಮಂತ್ರಣ ಪತ್ರಿಕಾ ಬಿಡುಗಡೆ ಮಾಡಿದ ಕನ್ನಡ ಚಿತ್ರರಂಗದ ಹಾಸ್ಯ ನಟ ಸಂಗೀತ ನಿರ್ದೇಶಕ ಸಾದುಕೋಕಿಲರವರು ಕನ್ನಡ ಭಾಷೆ ಮತ್ತು ಕನ್ನಡ ಸಂಸ್ಕೃತಿಗಳನ್ನು ಉಳಿಸುವಲ್ಲಿ

ಅಟೋ ರಿಕ್ಷಾಕ್ಕೂ ಹೆಲ್ಮೆಟ್ ಕಡ್ಡಾಯ..!

ಅಟೋ ರಿಕ್ಷಾವೊಂದರ ಮಾಲಿಕರಿಗೆ ಶ್ವಾಕ್…ಅಟೋ ಚಲಾಯಿಸುವ ಸಂದರ್ಭ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಶಿವಮೊಗ್ಗ ದಿಂದ ಎರ್ಮಾಳಿನ ಅಟೋ ಚಾಲಕರೊರ್ವರಿಗೆ 500 ರೂಪಾಯಿ ದಂಡ ಪಾವತಿಸುವಂತೆ ನೋಟಿಸು ಜಾರಿಯಾಗಿದೆ. ಅಟೋ ರಿಕ್ಷಾದ ನೋಂದಾವಣೆ ಸಂಖ್ಯೆ, ಫೋಟೋ ದ್ವಿಚಕ್ರವಾಹನದ್ದಾಗಿದ್ದು, ಹೆಲ್ಮೆಟ್ ಧರಿಸದೆ ಸಂಚಾರ ನಿಯಮ ಉಲ್ಕಘಿಸಿದ ನೀವು ದಂಡ ಕಟ್ಟುವಂತೆ ಮೊಬೈಲ್ ಗೆ ಮ್ಯಾಸೇಜ್ ಬಂದಾಗ ಅಟೋ ಚಾಲಕ ತಬ್ಬಿಬ್ಬು ನಾನು ಶಿವಮೊಗ್ಗ ಕಡೆ ಹೋಗಿಯೇ ಇಲ್ಲ, ಅಲ್ಲದೆ ಎಲ್ಲಿಯೂ

ನೆಲ್ಯಾಡಿ: ರಸ್ತೆಯ ಡಿವೈಡರ್ ಗೆ ಡಿಕ್ಕಿ ಹೊಡೆದ ಕಾರು

ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು-ಮಂಗಳೂರು ಮಧ್ಯೆ ಉದನೆ ಸಮೀಪ ಗಣಪತಿ ಕಟ್ಟೆಯ ಬಳಿ ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಇನೋವಾ ಕಾರು ರಸ್ತೆಯ ಮಧ್ಯದ ಡಿವೈಡರ್ ಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಕಾರಿನಲ್ಲಿ ಮೂರು ಮಂದಿ ಪ್ರಯಾಣಿಸುತ್ತಿದ್ದು ಇವರ ಪೈಕಿ ವಾಸನಿ ಹಾಗೂ ಅವರ ಪತ್ನಿ ವೀಣಾ ಗಾಯಗೊಂಡು ಅವರನ್ನು ಶಿರಾಡಿ 108 ಆಂಬುಲೆನ್ಸ್ ನಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಮೂಡುಬಿದರೆ: ಬೈಕ್-ಕಾರು ಢಿಕ್ಕಿ : ಯುವಕ ಸಾವು

ಮೂಡುಬಿದಿರೆ: ಕಳೆದ ಮೂರು ದಿನಗಳ ಹಿಂದೆ ವಿದೇಶದಿಂದ ಊರಿಗೆ ಬಂದಿದ್ದ ಯುವಕನ ಬೈಕ್ ಗೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮವಾಗಿ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ಮೂಡುಬಿದಿರೆ ಪೆÇಲೀಸ್ ಠಾಣಾ ವ್ಯಾಪ್ತಿಯ ಕಲ್ಲಬೆಟ್ಟುವಿನಲ್ಲಿ ನಡೆದಿದೆ. ಮಹಾವೀರ ಕಾಲೇಜು ಬಳಿಯ ನಿವಾಸಿ ಪ್ರದೀಪ್ ಶೆಟ್ಟಿ (38) ದುರ್ಘಟನೆಯಲ್ಲಿ ಮೃತಪಟ್ಟ ಯುವಕ. ಪ್ರದೀಪ್ ಅವರು ತನ್ನ ಮನೆಯಲ್ಲಿ ರಾತ್ರಿ ಊಟ ಮುಗಿಸಿ ಬೈಕ್ ನಲ್ಲಿ ಮೂಡುಬಿದಿರೆಯಿಂದ ಗಂಟಲ್ ಕಟ್ಟೆಗೆ ಬರುತ್ತಿದ್ದ ಸಂದರ್ಭದಲ್ಲಿ

ತಿರುವನಂತಪುರ – ಮದುವೆಗೆ ಬಿಎಂಡಬ್ಲ್ಯು ಕಾರು ಚಿನ್ನ ಕೇಳಿದ ವರ ; ವಧು ಆತ್ಮಹತ್ಯೆ

ತಿರುವನಂತಪುರ ವೈದ್ಯಕೀಯ ಕಾಲೇಜಿನಲ್ಲಿ ಪೋಸ್ಟ್ ಗ್ರಾಜುಯೇಶನ್ ಮಾಡುತ್ತಿದ್ದ ವೈದ್ಯೆ ಮದುವೆಗೆ ವರ ಬಿಎಂಡಬ್ಲ್ಯು ಕಾರು ಮತ್ತು ಚಿನ್ನ ಕೇಳಿದನೆಂದು 26ರ ಪ್ರಾಯದ ಶಹನಾ ಅವರು ತಾಕೊಲೆ ಮಾಡಿಕೊಂಡಿದ್ದಾರೆ. ಅಸಹಜ ಸಾವು ಪ್ರಕರಣ ದಾಖಲಾಗಿದೆ. ಅವರು ತಮ್ಮ ವಸತಿ ಸಮುಚ್ಚಯದ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ರವ್ಸಿ ಜೊತೆಗೆ  ಶಹನಾ ಮದುವೆ ಗೊತ್ತಾಗಿತ್ತು. ಆದರೆ ಕೊನೆಗೆ ರವ್ಸಿ ಕುಟುಂಬದವರು 150 ಸವರನ್ ಚಿನ್ನ, 15 ಎಕರೆ ಭೂಮಿ ಮತ್ತು ಒಂದು ಬಿಎಂಡಬ್ಲ್ಯು

ತೆಲಂಗಾಣದ ಎರಡನೆಯ ಮುಖ್ಯಮಂತ್ರಿ ಎನುಮುಲ ರೇವಂತ್ ರೆಡ್ಡಿ ಅಧಿಕಾರ ಸ್ವೀಕಾರ

ತೆಲಂಗಾಣ ರಾಜ್ಯವಾದ ಬಳಿಕ ಕಾಂಗ್ರೆಸ್ ಪಕ್ಷದ ಮೊದಲ ಮತ್ತು ಆ ರಾಜ್ಯದ ಎರಡನೆಯ ಮುಖ್ಯಮಂತ್ರಿಯಾಗಿ ಎನುಮುಲ ರೇವಂತ್ ರೆಡ್ಡಿಯವರು ಉಪ ಮುಖ್ಯಮಂತ್ರಿ ಮತ್ತು 11 ಮಂತ್ರಿಗಳ ಜೊತೆಗೆ ಪ್ರಮಾಣವಚನ ಸ್ವೀಕರಿಸಿದರು. ಲಾಲ್ ಬಹದೂರ್ ಶಾಸ್ತ್ರಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲೆ ತಮಿಳಿಸೈ ಸೌಂದರರಾಜನ್ ಪ್ರಮಾಣ ವಚನ ಬೋಧಿಸಿದರು. ತೆಲಂಗಾಣದ ಉಪ ಮುಖ್ಯಮಂತ್ರಿಯಾಗಿ ಮಲ್ಲು ಭಟ್ಟಿ ವಿಕ್ರಮಾರ್ಕ ಅವರು ಅಧಿಕಾರದ ದೀಕ್ಷೆ ತೆಗೆದುಕೊಂಡರು. ಎನ್. ಉತ್ತಮ ಕುಮಾರ್

ಮೂಲ್ಕಿ: ಲಾರಿ ಚಾಲಕನ ಮಹಾ ಯಡವಟ್ಟು..!!

ಚಾಲಕನ ನಿಯಂತ್ರಣ ತಪ್ಪಿ ಲಾರಿಯೊಂದು ಹೆದ್ದಾರಿ ಡಿವೈಡರ್ ಮೇಲೆ ಹತ್ತಿ ಪಾದಚಾರಿ ಮಾರ್ಗದ ಪಕ್ಕದಲ್ಲಿದ್ದ ವಾಹನಗಳಿಗೆ ಡಿಕ್ಕಿಯಾದ ಘಟನೆ ರಾ. ಹೆದ್ದಾರಿ 66 ರ ಮೂಲ್ಕಿ ಜಂಕ್ಷನ್ ಬಳಿ ನಡೆದಿದೆ.ಲಾರಿ ಚಾಲಕನ ನಿರ್ಲಕ್ಷ್ಯವೇ ಈ ಅವಘಡಕ್ಕೆ ಕಾರಣ ಎನ್ನಲಾಗುತ್ತಿದ್ದು, ಈ ಘಟನೆಯ ಪರಿಣಾಮ ಸಂಚಾರ ಪೆÇಲೀಸ್ ಸಿಬ್ಬಂದಿ ಸೇರಿ ಮೂವರು ಗಾಯಗೊಂಡಿದ್ದಾರೆ. ಸ್ಕೂಟರ್ ಸವಾರ, ಬಪ್ಪನಾಡು ಬಳಿಯ ರೆಸಿಡೆನ್ಸಿಯೊಂದರ ವಾಚ್ ಮ್ಯಾನ್, ಉತ್ತರ ಕರ್ನಾಟಕ ಮೂಲದ ಗಂಭೀರ ಗಾಯಗೊಂಡು

ಕಾಸರಗೋಡು: ನೀರ್ಚಾಲು ಪೆರಡಾಲ ಮಹಾಜನ ಸಂಸ್ಕೃತ ಕಾಲೇಜಿನಲ್ಲಿ ತುಲು ಲಿಪಿ ಕಲಿಕಾ ತರಗತಿಯ ಉದ್ಘಾಟನೆ

ಕಾಸರಗೋಡಿನ ನೀರ್ಚಾಲು ಪೆರಡಾಲದ ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯಲ್ಲಿ ತುಲು ಲಿಪಿ ಕಲಿಕಾ ತರಗತಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಜೈ ತುಲುನಾಡ್ ಸಂಘಟನೆ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಜೊತೆ ಸೇರಿಕೊಂಡು ಮಹಾಜನ ಸಂಸ್ಕೃತ ಕಾಲೇಜ್ ನೀರ್ಚಾಲುವಿನ ಆಶ್ರಯದಲ್ಲಿ ‘ಬಲೆ ತುಲು ಲಿಪಿ ಕಲ್ಪುಗ’ ತರಗತಿಯು ಉದ್ಘಾಟನೆಗೊಂಡಿತ್ತು. ಹಿರಿಯರೂ, ಶಾಲಾ ಮೆನೇಜರ್ ಜಯದೇವ ಖಂಡಿಗೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಮಂಗಳೂರು: ಡಿ.10 ರಂದು ಕೀರ್ತಿಶೇಷ ಕುಂಬ್ಳೆ ಸುಂದರರಾವ್ ಸಂಸ್ಮರಣಾ ಕಾರ್ಯಕ್ರಮ

ಯಕ್ಷಲೋಕ ವಿಖ್ಯಾತ, ಮಾತಿನ ರಂಗದ ಮಹಾರಥಿ, ಹಿರಿಯ ಯಕ್ಷಗಾನ ಕಲಾವಿದರು, ಸುರತ್ಕಲ್ ಕ್ಷೇತ್ರದ ಶಾಸಕರು, ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರು, ಸಂಸ್ಕಾರ ಭಾರತೀಯ ರಾಜ್ಯಾಧ್ಯಕ್ಷರು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವಾರು ಪ್ರತಿಷ್ಟಿತ ಪುರಸ್ಕಾರವನ್ನು ಪಡೆದ ಕುಂಬ್ಳೆ ಸುಂದರರಾವ್‌ರವರ ಸಂಸ್ಮರಣಾ ಕಾರ್ಯಕ್ರಮವನ್ನು ಆಯೋಜಿಸಿದ್ದು, ಡಿಸೆಂಬರ್ ೧೦, ೨೦೨೩ನೇ ಆದಿತ್ಯವಾರ ಸಾಯಂಕಾಲ ೪.೦೦ರಿಂದ ದೇವಾಂಗ ಸಭಾಭವನ, ಉರ್ವಸ್ಟೋರ್, ಮಂಗಳೂರಿನಲ್ಲಿ ನಡೆಯಲಿರುವುದು.

ದೇಶದೊಳಗಿನ ಸೈನಿಕರೇ ಗೃಹರಕ್ಷಕರು

ಗೃಹರಕ್ಷಕ ದಳ ಎನ್ನುವುದು ದೇಶದ ಕಾನೂನು ಮತ್ತು ಶಿಸ್ತು ಪಾಲನೆಯಲ್ಲಿ ಪೊಲೀಸ್ ಇಲಾಖೆಗೆ ಪೂರಕವಾಗಿ ಕೆಲಸ ಮಾಡುವ ಸರ್ಕಾರದ ಅಧೀನದಲ್ಲಿರುವ ಸ್ವತಂತ್ರವಾದ ಶಿಸ್ತುಬದ್ಧವಾದ ಸಮವಸ್ರದಾರಿ ಸ್ವಯಂಸೇವಕರ ಸೇವಾ ಸಂಸ್ಥೆ ಆಗಿರುತ್ತದೆ. ‘ನಿಷ್ಕಾಮ ಸೇವೆ’ ಎಂಬ ಧ್ಯೇಯ ವಾಕ್ಯದೊಂದಿಗೆ ದೇಶದ ಆಸ್ತಿಪಾಸ್ತಿ ರಕ್ಷಣೆ ಮತ್ತು ಜನರ ಜೀವದ ರಕ್ಷಣೆ ಮಾಡುವ ದೇಶದೊಳಗಿನ ಸೈನಿಕರೇ ನಮ್ಮ ಗೃಹರಕ್ಷಕರು. ಹೇಗೆ ದೇಶದ ಗಡಿಗಳಲ್ಲಿ ಸೈನಿಕರು ನಮ್ಮ ದೇಶವನ್ನು ವೈರಿಗಳಿಂದ ಮತ್ತು