Home Posts tagged V4News (Page 85)

ಕೇರಳ ಮುಖ್ಯಮಂತ್ರಿಯಿಂದ ಹಲ್ಲೆಗೆ ಸಂಚು:ರಾಜ್ಯಪಾಲ ಆರಿಫ್ ಮೊಹಮದ್ ಖಾನ್

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನನ್ನ ಮೇಲೆ ಹಲ್ಲೆಗೆ ಸಂಚು ನಡೆಸಿದ್ದಾರೆ ಎಂದು ಕೇರಳದ ರಾಜ್ಯಪಾಲರಾದ ಆರಿಫ್ ಮೊಹಮದ್ ಖಾನ್ ಆರೋಪ ಮಾಡಿದ್ದಾರೆ. ದಿಲ್ಲಿಗೆ ಹೊರಟಿದ್ದ ರಾಜ್ಯಪಾಲರನ್ನು ವಿಮಾನ ನಿಲ್ದಾಣದ ಬಳಿ ತಡೆದ ಸಿಪಿಎಂ ಪಕ್ಷದ ವಿದ್ಯಾರ್ಥಿ ಘಟಕವಾದ ಎಸ್‍ಎಫ್‍ಐನವರು ರಾಜ್ಯಪಾಲರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಾರೆ. ಕೂಡಲೆ ರಾಜ್ಯಪಾಲ

ರಾಜಭವನಕ್ಕೆ ಬಾಂಬ್ ಕರೆ: ಪರಿಶೀಲಿಸಿ ಸುಳ್ಳು ಎಂದ ಪೋಲೀಸರು

ದೊಮ್ಮಲೂರು ಎನ್‍ಐಎ ಕೊಠಡಿಗೆ ಕರೆ ಮಾಡಿ ಬೆಂಗಳೂರಿನಲ್ಲಿರುವ ರಾಜ ಭವನಕ್ಕೆ ಬಾಂಬ್ ಇಡಲಾಗಿದೆ ಎಂದು ಹೇಳಿರುವುದು ಹುಸಿ ಕರೆ ಎಂದು ಪೋಲೀಸರು ತಿಳಿಸಿದರು.ಕರೆಯ ಸತ್ಯಾಸತ್ಯತೆ ಅರಿಯಲು ಬಾಂಬ್ ನಿಷ್ಕ್ರಿಯ ಪಡೆಯೊಂದಿಗೆ ರಾಜ ಭವನಕ್ಕೆ ಧಾವಿಸಿದರು. ಪರಿಶೀಲಿಸಿ ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪುತ್ತೂರು: ಅಯೋಧ್ಯೆಯ ಅಕ್ಷತೆ, ಉಪವಸತಿ ಕೇಂದ್ರದಲ್ಲಿ ವಿತರಣೆ

ಪುತ್ತೂರು: ಶ್ರೀ ರಾಮಜನ್ಮಭೂಮಿ ಆಯೋಧ್ಯೆಯಿಂದ ಆಗಮಿಸಿದ ಪವಿತ್ರ ಮಂತ್ರಾಕ್ಷತೆಯನ್ನು ಪುತ್ತೂರು ನಗರದಿಂದ ಉಪವಸತಿ ಕೇಂದ್ರಕ್ಕೆ ವಿತರಿಸುವ ಕಾರ್ಯಕ್ರಮ ಪುತ್ತೂರಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆವರಣದಲ್ಲಿ ನಡೆಯಿತು. ಪುತ್ತೂರಿನ 45 ಉಪವಸತಿ ಕೇಂದ್ರದ ಪ್ರಮುಖರಿಗೆ ಪವಿತ್ರ ಅಕ್ಷತೆಯನ್ನು ಗುರುಪುರ ವಜ್ರದೇಹಿ ಮಠದ ರಾಜಶೇಖರನಂದ ಸ್ವಾಮಿಜೀಯವರು ವಿತರಿಸಿದರು.ಪುತ್ತೂರು ನಗರದಿಂದ 45 ಉಪವಸತಿ ಕೇಂದ್ರಗಳ ಪ್ರಮುಖರಿಗೆ ರಾಜಶೇಖರಾನಂದ ಸ್ವಾಮಿಜಿಯವರು ಅಕ್ಷತೆ

ಕುಂಬ್ಳೆ ಸೋಲಾರ್ ಎನರ್ಜಿ ಸೊಲ್ಯೂಷನ್‍ನಲ್ಲಿ ಜಾಬ್ ವೇಕೆನ್ಸಿ

ಮಂಗಳೂರಿನ ಪ್ರತಿಷ್ಠಿತ ಕಂಪೆನಿಯಾದ ಕುಂಬ್ಳೆ ಸೋಲಾರ್ ಎನರ್ಜಿ ಸೊಲ್ಯೂಷನ್ ಪ್ರೈವೆಟ್ ಲಿಮಿಟೆಡ್‍ನಲ್ಲಿ ಇಲೆಕ್ಟ್ರಿಷನ್, ಪಿಟ್ಟರ್ಸ್, ಇಲೆಕ್ಟ್ರಿಕಲ್ ಇಂಜಿನಿಯರ್ ಮತ್ತು ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಖಾಲಿ ಹುದ್ದೆಗಳಿದ್ದು, ಡಿ.16ರಂದು ನೇಮಕಾತಿ ಪ್ರಕ್ರಿಯೆ ನಡೆಯಲಿದೆ.ಡಿಸೆಂಬರ್ 16ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ನೇಮಕಾತಿ ನಡೆಯಲಿದ್ದು, Mail id. [email protected] ಅಥವಾ 0824 4251019 / 4261019 ಗೆ ಸಂಪರ್ಕಿಸಬಹುದು.

ಮಂಗಳೂರು: ಡಿ.15ರಂದು ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆ ಮತ್ತು ಫಾರ್ಮಸಿ ವತಿಯಿಂದ ಉಚಿತ ವೈದ್ಯಕೀಯ ಮೂಳೆ ಸಾಂದ್ರತೆ ಪರೀಕ್ಷಾ ಶಿಬಿರ

ಮಂಗಳೂರಿನ ವೆಲೆನ್ಸಿಯದಲ್ಲಿ ಕಾರ್ಯಾಚರಿಸುತ್ತಿರುವ ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆ ಮತ್ತು ಫಾರ್ಮಸಿ ವತಿಯಿಂದ ಉಚಿತ ವೈದ್ಯಕೀಯ ಮೂಳೆ ಸಾಂದ್ರತೆ ಪರೀಕ್ಷಾ ಶಿಬಿರವನ್ನು ಡಿ.15 ರಂದು ಹಮ್ಮಿಕೊಂಡಿದ್ದಾರೆ.ಉಚಿತ ವೈದ್ಯಕೀಯ ಮೂಳೆ ಸಾಂದ್ರತೆ ಪರೀಕ್ಷಾ ಶಿಬಿರವು ವೆಲೆನ್ಸಿಯಾದ ವೇದಂ ಆರೋಗ್ಯ ಆಸ್ಪತ್ರೆಯಲ್ಲಿ ಡಿ.15 ರ ಬೆಳಿಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ನಡೆಯಲಿದ್ದು, ವಯಸ್ಸಾದ 35 ವರ್ಷಗಳಿಗೂ ಮೇಲ್ಪಟ್ಟವರಿಗೆ ಎಲ್ಲಾ ರೀತಿಯ ಸಂಧಿವಾತಗಳಿಗೆ

ಬ್ರಹ್ಮಾವರ: ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಇಶಾ ಹಠ ಯೋಗ ಫೌಂಡೇಶನ್ ವತಿಯಿಂದ ಉಪನ್ಯಾಸ ಹಾಗೂ ತರಬೇತಿ

ಉತ್ತಮ ಆರೋಗ್ಯಕ್ಕಾಗಿ ದಿನನಿತ್ಯದ ಜೀವನದಲ್ಲಿ ಯೋಗ ಒಂದು ಆರೋಗ್ಯ ಪೂರ್ಣವಾದ ಅಭ್ಯಾಸ ಮಾರ್ಗವಾಗಿದೆ. ವಿದ್ಯಾರ್ಥಿಗಳಿಗೆ ಉತ್ತಮ ಮನಸ್ಥಿತಿ ಹೊಂದುವ ಉದ್ದೇಶದಿಂದ ಕಾಲೇಜಿನಲ್ಲಿ  ಉಪನ್ಯಾಸ, ತರಬೇತಿ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರವೀಣ್ ಕುಮಾರ್ ಈಶ ಫೌಂಡೇಶನ್ ಶಿಕ್ಷಕರು ಮಂಗಳೂರು, ಸುಬ್ರಹ್ಮಣ್ಯ ಕಾರ್ಯಕರ್ತರು ಇಶಾ ಫೌಂಡೇಶನ್ ಉಡುಪಿ, ಕಾಲೇಜಿನ ಸಂಸ್ಥಾಪಕರಾದ ಸುಬ್ರಹ್ಮಣ್ಯ, ನಿರ್ದೇಶಕಿಯಾದ ಮಮತಾ, ಕಾಲೇಜಿನ ಪ್ರಾಂಶುಪಾಲರಾದ ಡಾ. ಸೀಮಾ ಜಿ ಭಟ್

ಓಡುವ ರೈಲಿನಲ್ಲಿ ನಡೆದ ಅತ್ಯಾಚಾರ : ಆರೋಪಿ ಸೆರೆ

ಮಧ್ಯ ಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ಓಡುತ್ತಿರುವ ರೈಲಿನಲ್ಲಿ 30ರ ಮಹಿಳೆಯ ಅತ್ಯಾಚಾರ ನಡೆದಿದ್ದು, ಆರೋಪಿಯನ್ನು ಸಿಆರ್‍ಪಿ ಪಡೆಯವರು ಬಂಧಿಸಿ ಸಾತ್ನಾ ಪೆÇೀಲೀಸರಿಗೆ ಒಪ್ಪಿಸಿದರು. ಬಂಧಿತ ಆರೋಪಿ ಉತ್ತರ ಪ್ರದೇಶ ಮೂಲದ ಸದ್ಯ ಕಟ್ನಿ ನಿವಾಸಿ ಆಗಿರುವ 23ರ ಪಂಕಜ್ ಕುಶ್ವಾಹ. ಮೂತ್ರಾಲಯದ ಬಳಿ ಈ ಅತ್ಯಾಚಾರ ನಡೆದಿದೆ. ಸಾತ್ನಾದಲ್ಲಿ ರೈಲು ನಿಲ್ಲುತ್ತಲೇ ಮಹಿಳೆ ಕಂಡ ಸಿಆರ್‍ಪಿ ಪೇದೆಗಳನ್ನು ಕೂಗಿ ಕರೆದು ಆರೋಪಿಯನ್ನು ತೋರಿಸಿದ್ದಾಳೆ. ಓಡತೊಡಗಿದ

ವಂಚಕ ಕಂಪೆನಿಗಳು ಜನರನ್ನು ದೋಚಲು ಸರಕಾರಗಳ ನೀತಿಗಳೇ ಕಾರಣ – ಮುನೀರ್ ಕಾಟಿಪಳ್ಳ

ಜನಸಾಮಾನ್ಯರ ಮುಗ್ದತೆ, ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಂಡು ವಂಚಿಸುವ ಹಣಕಾಸು, ಮಾರ್ಕೆಟಿಂಗ್, ಚೈನ್ ಲಿಂಕ್, ಸ್ಕೀಮ್ ಕಂಪೆನಿಗಳು ಕಾನೂನಿನ ಭಯವಿಲ್ಲದೆ ದಿನಕ್ಕೊಂದರಂತೆ ಮಂಗಳೂರು ನಗರದಲ್ಲಿ ತಲೆ ಎತ್ತುತ್ತಿವೆ. ಇಂತಹ ಕಂಪೆನಿಗಳ ವೈಭವೋಪೇತ ಕಾರ್ಯಕ್ರಮಗಳಲ್ಲಿ ರಾಜಕೀಯ ನೇತಾರರು, ಧಾರ್ಮಿಕ ಕ್ಷೇತ್ರದ ಗಣ್ಯರು ಮುಂದಾಲೋಚನೆ ಇಲ್ಲದೆ ಕಾಣಿಸಿಕೊಳ್ಳುವುದು ವಂಚಕ ಕಂಪೆನಿಗಳಿಗೆ ಜನಸಾಮಾನ್ಯರ ನಡುವೆ ವಿಶ್ವಾಸಾರ್ಹತೆಯನ್ನು ಗಳಿಸಲು ಸಹಾಯ ಮಾಡುತ್ತದೆ‌. ಇಂತಹ

ಮೂಡುಬಿದಿರೆ: ಹಿರಿಯ ಆಟೋ ಚಾಲಕ ಗುರುವಪ್ಪ ಪೂಜಾರಿ ನಿಧನ

ಮೂಡುಬಿದಿರೆ: ಕಳೆದ ಹಲವಾರು ವರ್ಷಗಳಿಂದ ಮೂಡುಬಿದಿರೆಯಲ್ಲಿ ಹಿರಿಯ ಅಟೋ ಚಾಲಕರಾಗಿ, ರಂಗಕಲಾವಿದರಾಗಿ ಗುರುತಿಸಿಕೊಂಡಿದ್ದ ಒಂಟಿಕಟ್ಟೆಯ ಗುರುವಪ್ಪ ಪೂಜಾರಿ ಗುರುವಪ್ಪ ಪೂಜಾರಿಒಂಟಿಕಟ್ಟೆಯ ಗುರುವಪ್ಪ ಪೂಜಾರಿ(68)ಅಲ್ಪ ಕಾಲದ ಅನಾರೋಗ್ಯದಿಂದ ಸೋಮವಾರ ಸ್ವಗೃಹದಲ್ಲಿ ನಿಧನರಾದರು.ಮೂಡುಬಿದಿರೆಯಲ್ಲಿ ಸುಮಾರು 45 ವರ್ಷಗಳಿಂದ ರಿಕ್ಷಾ ಚಾಲಕರಾಗಿ ಸೇವೆ ಸಲ್ಲಿಸಿ ಜನಪ್ರಿಯರಾಗಿದ್ದರು. ಹಲವು ತುಳು ನಾಟಕಗಳಲ್ಲಿ ಅಭಿನಯಿಸಿದ್ದ ಅವರು ಸಾಂಸ್ಕೃತಿಕ, ಧಾರ್ಮಿಕ

ಉಳ್ಳಾಲ: ಅಸೈಗೋಳಿಯಲ್ಲಿ ಕ್ರಿಸ್ಮಸ್ ಕ್ರೀಡಾಕೂಟ ಉದ್ಘಾಟನೆ

ಅಸೈಗೋಳಿ ಮೆರ್ಸಿ ಫ್ರೆಂಡ್ಸ್ ವತಿಯಿಂದ ‘ಕ್ರಿಸ್ಮಸ್ ಟ್ರೋಫಿ-2023′ ಕ್ರೀಡಾಕೂಟ ಅಸೈಗೋಳಿ ಐಟಿಐ ಕಾಲೇಜು ಮೈದಾನದಲ್ಲಿ ನಡೆಯಿತು. ಕೊಣಾಜೆ ಮಂಗಳ ಗ್ರಾಮೀಣ ಯುವಕ ಸಂಘದ ಮಾಜಿ ಅಧ್ಯಕ್ಷ ಅಬ್ದುಲ್ ನಾಸೀರ್ ಕೆ.ಕೆ. ಕ್ರಿಸ್ಮಸ್ ಟ್ರೋಫಿ-2023’ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಏಸು ಕ್ರಿಸ್ತನ ಜನ್ಮದಿನ ಪ್ರಯುಕ್ತ ಶಾಂತಿ, ಸೌಹಾರ್ದತೆ ಉದ್ದೇಶದಿಂದ ಕ್ರೀಡಾಕೂಟ ಅಯೋಜಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.