HomeFresh Newsನ್ಯಾಶನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ಸುಳ್ಯ ಶಾಖೆಯ ಪದಗ್ರಹಣ ಕಾರ್ಯಕ್ರಮ

ನ್ಯಾಶನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ ಸುಳ್ಯ ಶಾಖೆಯ ಪದಗ್ರಹಣ ಕಾರ್ಯಕ್ರಮ

ಸುಳ್ಯದಲ್ಲಿ ಡಿ. 14 ರಂದು ನ್ಯಾಶನಲ್ ಇಂಟಿಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್ (ರಿ.) ಇದರ ನೂತನವಾಗಿ ಪ್ರಾರಂಭವಾದ ಸುಳ್ಯ ಶಾಖೆಯ ಪದಗ್ರಹಣ ಕಾರ್ಯಕ್ರಮವು ಕೆ ವಿ ಜಿ ಆಯುರ್ವೇದ ಫಾರ್ಮಾ ಹಾಗೂ ರಿಸರ್ಚ್ ಸೆಂಟರಿನ ಎ/ಸಿ ಆಡಿಟೋರಿಯಂನಲ್ಲಿ ನೆರವೇರಿತು.

ಈ ಕಾರ್ಯಕ್ರಮದ ಪದಗ್ರಹಣ ಅಧಿಕಾರಿ ಆಗಿ ಜಿಲ್ಲಾ ಆಯುಷ್ ಆಫೀಸರ್ ಡಾ. ಮೊಹಮ್ಮದ್ ಇಕ್ಬಾಲ್ ರವರು ಸರಕಾರಿ ಕಾರ್ಯಕ್ರಮ ಹಾಗೂ ಇನ್ನಿತೀರ ಎಲ್ಲಾ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಇಂತಹ ಅಸೋಸಿಯೇಷನ್ ಅತ್ಯಮೂಲ್ಯ ಎಂದು ತಿಳಿಸುತ್ತಾ ಪದಪ್ರಧಾನವನ್ನು ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ರಿ. ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ ವಿ ಚಿದಾನಂದ ಇವರು ದೀಪ ಬೆಳಗಿಸುವುದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಲೋಪಥಿ ಹಾಗೂ ಆಯುಷ್ ವೈದ್ಯರುಗಳು ಒಂದೇ ಧ್ಯೇಯದೊಂದಿಗೆ ಸಾರ್ವಜನಿಕರ ಆರೋಗ್ಯ ಕಾಪಾಡುವ ಹಿತದೃಷ್ಟಿಯಲ್ಲಿ ಕಾರ್ಯ ವೈಖರಿಯನ್ನು ನಡೆಸೋಣ ಎಂದು ತಿಳಿಸುತ್ತಾ ಶುಭ ಹಾರೈಸಿದರು.

ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ NIMA ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾದ ಡಾ. ಸಿದ್ದಪ್ಪ ಮಗರಿ, ಪ್ರಧಾನ ಕಾರ್ಯದರ್ಶಿಯಾದ ಡಾ. ರಾಧಿಕಾ ಎ ಖಟವಟೆ, ಉಪಾಧ್ಯಕ್ಷರಾದ ಡಾ ಅನಿತ್ ಕುಮಾರ್, NIMA ಮೈಸೂರು ವಿಭಾಗದ ಕಾರ್ಯದರ್ಶಿಗಳಾದ ಡಾ. ಜಗದೀಶ್ ನಾಯಕ ಎಂ ಆರ್ ಹಾಗೂ NIMA ಕೊಡಗು ವಿಭಾಗದ ಅಧ್ಯಕ್ಷರಾಗಿರುವ ಡಾ. ರಾಜಾರಾಮ್ ಎ ಆರ್ ಇವರು ಉಪಸ್ಥಿತರಿದ್ದು ಸುಳ್ಯದಲ್ಲಿ 60 ಕ್ಕೂ ಅಧಿಕ ವೈದ್ಯರುಗಳನ್ನು ಒಳಗೊಂಡು NIMA ಶಾಖೆಯನ್ನು ರಚಿಸಿರುವ ಕುರಿತು ಪದಾಧಿಕಾರಿಗಳನ್ನು ಹಾಗೂ ಸರ್ವ ಸದಸ್ಯರುಗಳನ್ನು ಶ್ಲಾಘಿಸಿದರು.

NIMA ಸುಳ್ಯ ವಿಭಾಗದ ಗೌರವಾಧ್ಯಕ್ಷರಾದ ಡಾ. ಲೀಲಾಧರ್ ಡಿ ವಿ ಅವರು ಇಂತಹ ಕಾರ್ಯಕ್ರಮವನ್ನು ನಡೆಸಲು ತಮ್ಮ ಗುರುಗಳು ಹಾಗೂ ಹಿರಿಯರುಗಳ ಆಶೀರ್ವಾದವು ಅತಿ ಅವಶ್ಯಕ ಎಂದು ತಿಳಿಸುತ್ತಾ ಶುಭ ಹಾರೈಸಿದರು.
NIMA ಸುಳ್ಯ ವಿಭಾಗದ ಅಧ್ಯಕ್ಷರಾದ ಡಾ. ಲಕ್ಷ್ಮೀಶ ಕೆ ಎಸ್ ರವರು ಮುಂದಿನ ದಿನಗಳಲ್ಲಿ NIMA ಸುಳ್ಯ ವಿಭಾಗವು ಇನ್ನೂ ಎತ್ತರಕ್ಕೆ ಬೆಳೆಯುವಂತೆ ಪರಿಶ್ರಮಿಸುತ್ತೇವೆ ಎಂದು ತಿಳಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ NIMA ಸುಳ್ಯ ವಿಭಾಗದ ಸಂಚಾಲಕರು ಡಾ. ವೆಂಕಟೇಶ್ ಎಂ ಉಪಸ್ತಿತರಿದ್ದರು.

ಕಾರ್ಯಕ್ರಮವನ್ನು NIMA ಸುಳ್ಯ ವಿಭಾಗದ ಕೋಶಾಧಿಕಾರಿಯಾದ ಡಾ. ವಿನಯ್ ಶಂಕರ್ ಭಾರಧ್ವಾಜ್ ಬಿ ಸ್ವಾಗತಿಸಿ, ಡಾ ಹರ್ಷಿತಾ ಎಂ ಹಾಗೂ ಡಾ ಅನುಷಾ ಎಂ ನಿರೂಪಿಸಿ, ಡಾ. ಪ್ರಮೋದ ಪಿ ಎ ಪ್ರಾರ್ಥಿಸಿ, NIMA ಸುಳ್ಯ ವಿಭಾಗದ ಕಾರ್ಯದರ್ಶಿಯಾದ ಡಾ ನಿತೀಶ್ ಕೆ ವಂದಿಸಿದರು.
ಈ ಕಾರ್ಯಕ್ರಮದಲ್ಲಿ NIMA ಸುಳ್ಯ ವಿಭಾಗದ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ತಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments