Home Posts tagged V4News (Page 87)

ಸುರತ್ಕಲ್ ಠಾಣೆಗೆ ಹಾಜರಾಗಿ ಆಯಿಷಾ ಅಲ್ಲ ಅಕ್ಷತಾ ಎಂದು ಹೇಳಿಕೆ

ವಾರದ ಹಿಂದೆ ಓಡಿ ಹೋಗಿದ್ದ, ಆಮೇಲೆ ಮದುವೆಯ ಸುದ್ದಿಯನ್ನು ಹಂಚಿಕೊಂಡ ಆಯಿಷಾ ಮತ್ತು ಅಕ್ಷತಾ ದಂಪತಿ ಇಂದು ಸುರತ್ಕಲ್ ಪೋಲೀಸು ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದರು. ಆಯಿಷಾಳ ಹೆತ್ತವರು ಆಕೆ ಡಿಸೆಂಬರ್ 1ರಿಂದ ನಾಪತ್ತೆಯಾಗಿದ್ದುದರ ಬಗೆಗೆ ಸುರತ್ಕಲ್ ಪೋಲೀಸು ಠಾಣೆಯಲ್ಲಿ ದೂರು ನೀಡಿದ್ದರು. ಆದ್ದರಿಂದ ಅವರು ಸದರಿ ಠಾಣೆಗೆ ಭೇಟಿ ನೀಡುವುದು ಅನಿವಾರ್ಯವಾಗಿತ್ತು.

ತೆಲಂಗಾಣ – ಅಕ್ಬುರುದ್ದೀನ್ ಒವೈಸಿ ಹಂಗಾಮಿ ಸಭಾಪತಿ ; ಪ್ರಮಾಣವಚನ ಬಹಿಷ್ಕರಿಸಿದ ಬಿಜೆಪಿ

ತೆಲಂಗಾಣ ರಾಜ್ಯ ವಿಧಾನ ಸಭೆಗೆ ಹೊಸದಾಗಿ ಆಯ್ಕೆಯಾಗಿರುವ ಶಾಸಕರ ಪ್ರಮಾಣವಚನ ಸ್ವೀಕಾರವನ್ನು ಡಿಸೆಂಬರ್ 9ರ ಶನಿವಾರ ಇಟ್ಟುಕೊಳ್ಳಲಾಗಿದ್ದು, ಅಕ್ಬರುದ್ದಿನ್ ಒವೈಸಿ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಲಾಗಿದೆ. ಇದನ್ನು ವಿರೋಧಿಸಿ ಬಿಜೆಪಿಯ ಶಾಸಕರು ಪ್ರಮಾಣವಚನ ಸಮಾವೇಶವನ್ನೇ ಬಹಿಷ್ಕರಿಸಿದರು. ಘೋಷಾಮಹಲಿನಿಂದ ಆಯ್ಕೆಯಾಗಿರುವ ಬಿಜೆಪಿ ಶಾಸಕ ಟಿ. ರಾಜಾಸಿಂಗ್ ಅವರು ನಾನು ಬದುಕಿರುವವರೆಗೆ ಪ್ರಮಾಣವಚನ ಸ್ವೀಕರಿಸುವುದಿಲ್ಲ ಎಂದು ಆವೇಶದಿಂದ ಘೋಷಣೆ ಮಾಡಿದರು.

ಐಸಿಸ್ ಸಂಚು ಪ್ರಕರಣ, ಎನ್‍ಐಎ ದಾಳಿ

ಎನ್‍ಐಎ- ರಾಷ್ಟ್ರೀಯ ತನಿಖಾ ಏಜೆನ್ಸಿಯವರು ಐಎಸ್‍ಐಎಸ್ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರದ 44 ಕಡೆ ದಾಳಿ ನಡೆಸಿ, ಹಲವರನ್ನು ಪ್ರಶ್ನಿಸಿ, 13 ಜನರನ್ನು ಡಿಸೆಂಬರ್ 9ರ ಶನಿವಾರ ಬೆಳಿಗ್ಗೆ ಬಂಧಿಸಿದ್ದಾರೆ.ಪೂನಾದ ಎರಡು ಕಡೆ, ಮುಂಬಯಿ ಹೊರ ವಲಯದ ಥಾಣೆಯ 9 ಕಡೆ, ಥಾಣೆ ಹೊರ ವಲಯದ 31 ಕಡೆ, ಬಾಯಂದರ್‍ನ ಒಂದು ಕಡೆ ಮತ್ತು ಕರ್ನಾಟಕದ ಬಡಗಣ ಭಾಗದ ಕೆಲವೆಡೆ ಶನಿವಾರ ಏಕ ಕಾಲಕ್ಕೆ ದಾಳಿ ಮಾಡಿದರು. ಅಲ್ ಕೈದಾ

ಯತ್ನಾಳರಿಂದ ದೂರ ತಂತ್ರ ; ಪ್ರಧಾನಿ ಬಾಯಿ ತೆರೆಸಲು ಕೆರಳಿಸುವ ಹೇಳಿಕೆಗಳು

ಮಾಜೀ ಬಿಜಾಪುರ ಬದಲಾದ ವಿಜಯಪುರದ ಮೌಲ್ವಿ ಹಾಶ್ಮಿ ಅವರು ಪ್ರಧಾನಿ ಮೋದಿಯವರ ಜೊತೆಗೆ ಇರುವ ಫೆÇೀಟೋ ಹೊರ ಬೀಳುವುದರೊಂದಿಗೆ ಶಾಸಕ ಯತ್ನಾಳರ ಐಸಿಸ್ ಆರೋಪ ನೆಲನಡುಕ ತರುತ್ತಿದೆ. ಕೆಲವರ ಪ್ರಕಾರ ಬಿಜೆಪಿ ಶಾಸಕ ಯತ್ನಾಳರ ಮೂಲಕವೇ ಹಾಶ್ಮಿಯವರು ಪ್ರಧಾನಿ ಮೋದಿಯವರನ್ನು ಭೇಟಿ ಆಗಿದ್ದಾರೆ. ಹಾಶ್ಮಿಯವರ ಕುಟುಂಬ ಮತ್ತು ಯತ್ನಾಳರ ಕುಟುಂಬಗಳು ವಿಜಯಪುರದಲ್ಲಿ ಬಿಡದಿ ಹೋಟೆಲಿನಿಂದ ಹಿಡಿದು ನಾನಾ ಉದ್ಯಮ ಪಾಲುದಾರಿಕೆ ಹೊಂದಿವೆ. ಅಧಿಕಾರದಲ್ಲಿ ಯಾರು ಇದ್ದರೂ ಹೋಗುವ

ದಶಕದಲ್ಲಿ ದಲಿತರ ವಿರುದ್ಧ ದೌರ್ಜನ್ಯ 48%ದಷ್ಟು ಹೆಚ್ಚಳ

ಕಳೆದೊಂದು ದಶಕದಲ್ಲಿ ದಲಿತರ ಮೇಲಿನ ಅಪರಾಧಗಳು ಭಾರತದಲ್ಲಿ 48 ಶೇಕಡಾದಷ್ಟು ಹೆಚ್ಚಾಗಿರುವುದನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಗ್ರಾಫ್ ಪೋಸ್ಟ್ ಮಾಡುವ ಮೂಲಕ ಬಿಜೆಪಿಯ ಸಬ್ ಕ ಸಾಥ್ ಹೇಳಿಕೆಯನ್ನು ಲೇವಡಿ ಮಾಡಿದ್ದಾರೆ.ಎನ್‍ಸಿಆರ್‍ಬಿ- ರಾಷ್ಟ್ರೀಯ ಅಪರಾಧ ವರದಿಯ ಆಧಾರದ ಮೇಲೆ ಈ ಗ್ರಾಫ್ ತಯಾರಾಗಿದೆ. ದಲಿತರ ಮೇಲೆ 46.12% ಮತ್ತು ಬುಡಕಟ್ಟು ಜನರ ಮೇಲೆ 48.15% ದೌರ್ಜನ್ಯ ಅಧಿಕವಾಗಿರುವುದು ಅಂಕಿಅಂಶದಲ್ಲಿದೆ.ಚುನಾವಣೆ ಮುಗಿದ

ಮಾಸ್ಟರ್ ಚೆಫ್ ಇಂಡಿಯಾ-2023 ವಿಜೇತರಾಗಿ ಮಂಗಳೂರಿನ ಮೊಹಮ್ಮದ್ ಆಶಿಕ್

ಮಂಗಳೂರಿನ ಮೊಹಮ್ಮದ್ ಆಶಿಕ್ ಮಾಸ್ಟರ್ ಚೆಫ್ ಇಂಡಿಯಾ-2023 ವಿಜೇತರಾಗಿ ಹೊರಹೊಮ್ಮಿದರು. ನಂಬಿ ಜೆಸ್ಸಿಕಾ ಮರಕ್ ಮತ್ತು ರುಖ್ಸಾರ್ ಸಯೀದ್, ಸೂರಜ್ ಅವರೊಂದಿಗೆ ಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್ ಅಪ್ ಸ್ಥಾನಗಳನ್ನು ಪಡೆದರು. ಮೊಹಮ್ಮದ್ ಆಶಿಕ್ ಇದಿಗ ಮಂಗಳೂರಿನಲ್ಲಿ ಚಿರಪರಿಚಿತ ಹೆಸರು ಮಂಗಳೂರಿನ ಕುಲುಕಿ ಹಬ್ ಎನ್ನುವ ಸಣ್ಣ ಜ್ಯೂಸ್ ಮಳಿಗೆಯಿಂದ ಸಾಗಿ ಇಂದು ಭಾರತದ ದೊಡ್ಡ ರಿಯಾಲಿಟಿ ಶೋ ಸೋನಿ ಟಿವಿಯ ಮಾಸ್ಟರ್ ಚೆಫ್ ಇಂಡಿಯಾದಲ್ಲಿ ವಿಜೆತರಾದವರು.ಹೋಟೆಲ್

ಮುಸ್ಲಿಂ ಯುವತಿ ವರಿಸಿದ ಬಜರಂಗದಳ ದ ಯುವಕ

ಡಿಸೆಂಬರ್ 1ರಿಂದ ನಾಪತ್ತೆಯಾಗಿದ್ದ ಸುರತ್ಕಲ್‍ನ 19ರ ಆಯಿಶಾ ಮತ್ತು 31ರ ಬಜರಂಗ ದಳದ ಪ್ರಶಾಂತ್ ಭಂಡಾರಿ ಮದುವೆ ಆಗಿರುವುದು ಶರಣ್ ಪಂಪ್‍ವೆಲ್ ಅವರ ಶುಭಾಶಯಪೋಸ್ಟ್ ನಿಂದ ಸ್ಪಷ್ಟಗೊಂಡಿದೆ. ಆಯಿಷಾಳು ಅಕ್ಷತಾ ಆಗಿ ನಮ್ಮ ಪ್ರಶಾಂತರನ್ನು ಹಿಂದೂ ರೀತ್ಯಾ ಮದುವೆ ಆಗಿದ್ದಾರೆ. ಶುಭಾಶಯ ಹೇಳಿ ಈ ಮತಾಂತರ ಸಮರ್ಥಿಸಿದ್ದಾರೆ. ಆಯಿಷಾ ಅಲಿಯಾಸ್ ಅಕ್ಷತಾಳ ಹೆತ್ತವರು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದವರು. ಆಯಿಷಾ ತಂದೆ ಸುರತ್ಕಲ್‍ನಲ್ಲಿ

ಪಡುಬಿದ್ರಿ: ಕೃಷಿ ಬದುಕು ಹತ್ತಿರವಾಗಲು ಇಂಥಹ ಕೃಷಿ ಮೇಳಗಳು ಪೂರಕ: ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ

ಬದುಕಿನ ಬಂಡಿ ಸಾಗಿಸುವ ನಿಟ್ಟಿನಲ್ಲಿ ಜೊಳಿಗೆ ಹಾಕಿಕೊಂಡು ಉದ್ಯೋಗ ಹರಸಿ ಹೊರ ದೇಶ ಹೊರ ರಾಜ್ಯಕ್ಕೆ ವಲಸೆ ಹೋದವರು ಅದೆಷ್ಟೋ ಮಂದಿ… ಆದರೆ ಕೊರೋನ ಎಂಬ ರೋಗ ನಮ್ಮನ್ನು ತಾತ್ಕಾಲಿಕವಾಗಿ ಹತ್ತಿರ ತಂದರೂ ಮತ್ತೆ ಅದೇ ಸ್ಥಿತಿ, ಇದೀಗ ಇಂಥಹ ಕೃಷಿ ಮೇಳಗಳನ್ನು ಆಯೋಜಿಸುವ ಮೂಲಕ ಕೃಷಿ ಬದುಕು ಮತ್ತೆ ಹತ್ತಿರವಾಗಲು ಸಾಧ್ಯ ಎಂಬುದಾಗಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ. ಅವರು ಪಡುಬಿದ್ರಿಯಲ್ಲಿ ಕೃಷಿ ಮೇಳ ಉದ್ಘಾಟಿಸಿ ಮಾತನಾಡಿದರು. ಇದೇ

ರಾಜಸ್ತಾನ – ಹಾಸ್ಟೆಲ್ಲಿನ ಹುಡುಗಿಯರನ್ನು ನೋಡಲು ಬಂದ ಚಿರತೆ

ಶನಿವಾರ ಬೆಳ್ಳಂಬೆಳಿಗ್ಗೆ ಉದಯಪುರದ ಬಾಲಕಿಯರ ಹಾಸ್ಟೆಲ್ಲಿಗೆ ಚಿರತೆಯೊಂದು ಮೆಲ್ಲನೆ ಬಂದು ಅಲ್ಲಿದ್ದ ಎಲ್ಲರೂ ಗಡಗಡ ನಡುಗುವಂತೆ ಮಾಡಿತು.ರಾಜಸ್ತಾನದ ಉದಯಪುರದಲ್ಲಿ ಈ ಚಿರತೆ ಇಣುಕುವಿಕೆ ನೋಡುತ್ತಲೇ ಹುಡುಗಿಯರು ಮತ್ತು ವಾರ್ಡನ್ ಎಲ್ಲರೂ ಬಾಗಿಲು ಹಾಕಿಕೊಂಡು ಒಳಗೆ ಕುಳಿತುಕೊಂಡರು. ಭಯದಿಂದ ಹೊರಗೆ ಇಣುಕಿ ನೋಡುತ್ತಲಿದ್ದರು. ಒಂದು ಸುತ್ತು ಆಚೀಚೆ ಹಾಕಿದ ಚಿರತೆಯು ಮೆಲ್ಲನೆ ಬೆಳಗಾಗುವಾಗ ಬಂದ ದಾರಿಯಲ್ಲಿಯೇ ಹಿಂದಕ್ಕೆ ಹೋಯಿತು

ಬೆಂಗಳೂರು : ಹಿರಿಯ ನಟಿ ಲೀಲಾವತಿ ವಿಧಿವಶ

ಕಳೆದ ಕೆಲ ದಿನಗಳಿಂದ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಖ್ಯಾತ ಹಿರಿಯ ನಟಿ ಲೀಲಾವತಿ ಬೆಂಗಳೂರಿನ ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ನೆಲಮಂಗಲದ ಸೋಲದೇವನ ಹಳ್ಳಿಯ ನಿವಾಸದಲ್ಲೇ ಅವರಿಗೆ ಆರೈಕೆ ಮಾಡಲಾಗುತ್ತಿತ್ತು. ಪುತ್ರ ವಿನೋದ್ ರಾಜ್ ಅವರು ನೋಡಿ ಕೊಳ್ಳುತ್ತಿದ್ದರು. ದಕ್ಷಿಣ ಕನ್ನಡ ದ ಬೆಳ್ತಂಗಡಿ ಮೂಲದ ಲೀಲಾವತಿ ಅವರು, ಕನ್ನಡ, ತಮಿಳು ಮತ್ತು ತೆಲುಗು ಚಲನಚಿತ್ರಗಳಲ್ಲಿ ನಟಿಸಿದ್ದ ಹಿರಿಯ