Home Posts tagged #v4stream (Page 65)

ಯುಪಿಸಿಎಲ್ ದೇಶೀಯ ಕಲ್ಲಿದ್ದಲು ಬಳಸುವ ಹುನ್ನಾರ : ಎಲ್ಲೂರು ಗ್ರಾಮ ಸಭೆಯಲ್ಲಿ ವಿರೋಧ

ಪಡುಬಿದ್ರಿ: ಎಲ್ಲೂರು ಗ್ರಾಮದಲ್ಲಿ ಜನವಿರೋಧಿ ಯುಪಿಸಿಎಲ್ ಕಂಪನಿ ವಿದೇಶಿ ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದನೆ ನಡೆಸುವ ಒಡಂಬಡಿಕೆ ಇದ್ದರೂ ಇದೀಗ ಅದು ಜನರಿಗೆ ಸಮಸ್ಯೆಯೊಡ್ಡುವ ದೇಶೀ ಕಲ್ಲಿದ್ದಲು ಬಳಸುವ ಹುನ್ನಾರ ನಡೆಸುತ್ತಿದೆ ಎಂಬುದಾಗಿ ಎಲ್ಲೂರು ಗ್ರಾಮಸಭೆಯಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಅದರ ವಿರುದ್ಧ ನಿರ್ಣಯ ಕೈಗೊಳ್ಳಲಾಗಿದೆ. ಈ ಬಗ್ಗೆ

ಕಾರು ಢಿಕ್ಕಿ ಅಡ್ಯಾರ್ ಸೆಲೂನ್ ಮಾಲೀಕ ಮೃತ್ಯು

ಮಂಗಳೂರು : ಕಾರು ಅಪಘಾತಕ್ಕೀಡಾಗಿ ಅಡ್ಯಾರ್ ಬಾಳಿಕೆ ಮನೆ ನಿವಾಸಿ ಕೊರಗಪ್ಪ ಸಾಲ್ಯಾನ್ (65) ಎಂಬವರು ಮೃತಪಟ್ಟಿರುವ ಘಟನೆ ಅಡ್ಯಾರ್ ಸಹ್ಯಾದ್ರಿ ಕಾಲೇಜು ಮುಂಭಾಗ ಸಂಭವಿಸಿದೆ. ಅಡ್ಯಾರ್ ಗಾರ್ಡನ್ ಎದುರುಗಡೆಯ ಸಂತೋಷ್ ಹೇರ್ ಡ್ರೆಸ್ಸಸ್೯ ಎಂಬ ಸೆಲೂನಿನ ಮಾಲಕರಾಗಿದ್ದ ಇವರು ಸೈಕಲ್ ಮೂಲಕ ರಸ್ತೆ ದಾಟುವಾಗ ಬಿ.ಸಿ.ರೋಡ್ ಕಡೆಯಿಂದ ಅಮಿತ ವೇಗದಲ್ಲಿ ಬಂದ ಸ್ವಿಫ್ಟ್ ಕಾರು ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ದೂರಕ್ಕೆ ಎಸೆಯಲ್ಪಟ್ಟು, ತಲೆಗೆ ಗಂಭೀರ ರೀತಿಯಲ್ಲಿ

ಸಿಂಗಿಂಗ್ ಟಿವಿ ರಿಯಾಲಿಟಿ ಶೋ “ಹಾಡು ನೀ ಹಾಡು” ಸೀಸನ್ 1 ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಸಮಾರಂಭ

ಕರಾವಳಿ ಕರ್ನಾಟಕದ ಪುಟಾಣಿ ಹಾಡುಗಾರರಿಗಾಗಿ ಸಜ್ಜಾಗಿರುವ ಹೊಚ್ಚ ಹೊಸ ಸಿಂಗಿಂಗ್ ಟಿವಿ ರಿಯಾಲಿಟಿ ಶೋ “ಹಾಡು ನೀ ಹಾಡು” ಸೀಸನ್ 1 ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಸಮಾರಂಭ ಉಡುಪಿ ಇಂದ್ರಾಳಿಯ ರಿದ್ಧಿ ಕ್ರಿಯೇಷನ್ಸ್ ಸಿನಿ ಸ್ಟುಡಿಯೋದಲ್ಲಿ ಜರುಗಿತು. ಈ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ಸಂಪಾದಕಿ, ಪತ್ರಕರ್ತೆ, ಖ್ಯಾತ ಚಿಂತಕಿ ಡಾ. ಸಂಧ್ಯಾ ಪೈ ಅವರು ಪೋಸ್ಟರ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಿರಿಯ ವಯಸ್ಸಿನಲ್ಲಿ ಮಕ್ಕಳ

“ಹರೇಕಳ ಗ್ರಾಮ ಸೌಧ” ಉದ್ಘಾಟನೆ

ಉಳ್ಳಾಲದ ಹರೇಕಳ ಗ್ರಾಮ ಪಂಚಾಯಿತಿ ನೂತನ ಕಚೇರಿ ಕಟ್ಟಡ “ಹರೇಕಳ ಗ್ರಾಮ ಸೌಧ ಉದ್ಘಾಟನೆ ನಡೆಯಿತು. ರಾಜ್ಯ ವಿಧಾನಸಭೆಯ ಪ್ರತಿಪಕ್ಷ ಉಪ ನಾಯಕ, ಶಾಸಕ ಯು.ಟಿ. ಖಾದರ್ ಹರೇಕಳ ಗ್ರಾಮ ಪಂಚಾಯಿತಿ ನೂತನ ಕಚೇರಿ ಕಟ್ಟಡ “ಹರೇಕಳ ಗ್ರಾಮ ಸೌಧ ಉದ್ಘಾಟಿಸಿದರು. ನಂತರ ಮಾತನಡಿದ ಅವರು ಗ್ರಾಮ ಪಂಚಾಯಿತಿ ಕಚೇರಿ ಎಂಬುವುದು ಗ್ರಾಮದ ಆತ್ಮ.ಹರೇಕಳ ಗ್ರಾಮ ವಿವಿಧ ಅಭಿವೃದ್ಧಿ ಕಾಮಗಾರಿ ಮೂಲಕ ಮಾದರಿಯಾಗಿ ರೂಪುಗೊಳ್ಳುತ್ತಿದ್ದು ಇನ್ನೂ ಅಭಿವೃದ್ಧಿ ಆಗಬೇಕೆನ್ನುವ

ಕೊರೆಯುವ ಚಳಿಯಲ್ಲಿ ದೇಶದ ವೀರ ಯೋಧರ ನಿತ್ಯದ ಬದುಕು

ಬಂಟ್ವಾಳ: ಚಳಿಗಾಲದಲ್ಲಿ ತಣ್ಣೀರ ಸ್ನಾನ ಮಾಡಲು ನಾವು ಹಿಂದೆಟ್ಟು ಹಾಕುತ್ತೇವೆ. ಅಂತಹುದರಲ್ಲಿ ಮೈ ಕೊರೆಯುವ ಚಳಿ, ಮೈನಸ್ 18 ಡಿಗ್ರೆ ಸೆಲ್ಸಿಯಸ್ ವಾತವರಣವಿರುವ ಅರುಣಾಚಲ ಪ್ರದೇಶದ ಕೊರೆಯುವ ಚಳಿಯಲ್ಲಿ ಗಡಿ ಕಾಯುವ ನಮ್ಮ ದೇಶದ ವೀರಯೋಧರ ನಿತ್ಯದ ಬದುಕು ಹೇಗಿರಬಹುದು? ಇದಕ್ಕೊಂದು ತಾಜಾ ಉದಾಹರಣೆ ಈ ವಿಡಿಯೋವೊಂದು ಇಲ್ಲಿದೆ. ಭಾರತ ಚೀನಾ ಗಡಿಭಾಗವಾಗಿರುವ ಅರುಣಚಲಪ್ರದೇಶದ ಎತ್ತರದ ಪರ್ವತ ಭಾಗದಲ್ಲಿ ನಮ್ಮ ವೀರ ಯೋಧರು ಗಡಿಕಾಯುತ್ತಿದ್ದಾರೆ. ಕೊರೆಯುವ ಚಳಿಗೆ

ಸುರತ್ಕಲ್ ಟೋಲ್ ಗೇಟ್ ರದ್ದು: ಬಸ್ಸು ಪ್ರಯಾಣ ದರ ಇಳಿಕೆಗೆ ಹೋರಾಟ ಸಮಿತಿ ಆಗ್ರಹ

ಸುರತ್ಕಲ್ ಟೋಲ್ ಗೇಟ್ ದಾಟಿ ಮುಲ್ಕಿ, ಕಿನ್ನಿಗೋಳಿ, ಮುಕ್ಕ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಖಾಸಗಿ ಬಸ್ಸುಗಳು ಪ್ರಯಾಣಿಕರ ಟಿಕೆಟ್ ಮೇಲೆ ಹಾಕಿದ್ದ ಟೋಲ್ ತೆರಿಗೆಯನ್ನು ತಕ್ಷಣವೇ ಕೈಬಿಟ್ಟು ಪ್ರಯಾಣ ದರವನ್ನು ಇಳಿಸಬೇಕು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ. ಏಳು ವರ್ಷಗಳ ಹಿಂದೆ ಸುರತ್ಕಲ್ ಟೋಲ್ ಗೇಟ್ ನಲ್ಲಿ ಸುಂಕ ಸಂಗ್ರಹ ಆರಂಭಗೊಂಡಾಗ ಮುಲ್ಕಿ, ಹಳೆಯಂಗಡಿ, ಕಿನ್ನಿಗೋಳಿ ಮುಂತಾದ ಮಂಗಳೂರು ಗ್ರಾಮೀಣ ಭಾಗಗಳಿಗೆ ಸಂಚರಿಸುತ್ತಿದ್ದ ಖಾಸಗಿ

ಮಂಜೇಶ್ವರದಲ್ಲಿ ಸಂಭ್ರಮದ ಬೀಚ್ ಪೆಸ್ಟ್ ಗೆ ಚಾಲನೆ

ಮಂಜೇಶ್ವರ: ಉದ್ಯಾವರ ಎಎಚ್‍ಎಸ್ ತಂಡದ ಪ್ರಾಯೋಜಕತ್ವದಲ್ಲಿ ಮಂಜೇಶ್ವರ ಗ್ರಾಮ ಪಂಚಾಯತಿನ ಸಹಕಾರದೊಂದಿಗೆ ಸಪ್ತ ಭಾಷಾ ಸಂಗಮ ಭೂಮಿಯಾದ ಮಂಜೇಶ್ವರದ ಕುಂಡು ಕೊಳಕೆ ಬೀಚ್ ನಲ್ಲಿ ಸಂಭ್ರಮದ ಬೀಚ್ ಫೆಸ್ಟ್ ಗೆ ಚಾಲನೆ ದೊರಕಿತು. ಇನ್ನು ಮುಂದಿನ ಒಂದು ತಿಂಗಳಿನಲ್ಲಿ ನಡೆಯಲಿರುವ ಬೀಚ್ ಫೆಸ್ಟ್ ಮಂಜೇಶ್ವರದ ಬೀಚ್‍ನಲ್ಲಿ ಉತ್ಸವದ ಸಂಭ್ರಮವಾಗಲಿದೆ. ಈ ಸಲದ ಮಂಜೇಶ್ವರ ಕಂಡು ಕೊಳಕೆ ಬೀಚ್ ಫೆಸ್ಟ್ ವಿವಿಧ ವಿನ್ಯಾಸಗಳನ್ನು ಹೊಂದಿದ್ದು, ಮಕ್ಕಳಿಗೆ ಹಾಗೂ

ಪುತ್ತೂರು : ಮತದಾರರ ಗುರುತಿನ ಚೀಟಿ ಅನಧಿಕೃತ ವಿತರಣೆ ಆರೋಪ

ಪುತ್ತೂರು: ಮತದಾರನ ಗುರುತಿನ ಚೀಟಿಯನ್ನು ಅನಧಿಕೃತವಾಗಿ ವಿತರಣೆ ಮಾಡಿದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪುತ್ತೂರಿನ ಜನಸೇವಾ ಕೇಂದ್ರವೊಂದರ ಮೇಲೆ ಅಧಿಕಾರಿಗಳ ತಂಡ ದಾಳಿ ಮಾಡಿ ಅಂಗಡಿಗೆ ಬೀಗ ಹಾಕಿದ ಘಟನೆ ನಡೆದಿದೆ. ಪುತ್ತೂರು ಸಹಾಯಕ ಆಯುಕ್ತರಾದ ಗಿರೀಶ್ ನಂದನ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ನಗರದ ಹಳೆ ತಾಲೂಕು ಕಚೇರಿ ರಸ್ತೆಯಲ್ಲಿರುವ ಜನಸೇವಾ ಕೇಂದ್ರದ ಮೇಲೆ ದಾಳಿ ಮಾಡಿದೆ. ತಹಸೀಲ್ದಾರ್ ನಿಸರ್ಗ ಪ್ರಿಯ ಮತ್ತು ತಾಲೂಕು ಕಚೇರಿಯ ಚುನಾವಣಾ ಶಾಖೆಗೆ

ಕೊರೊನಾಕ್ಕೆ ರಮ್ ಮದ್ದು ಎಂದಿದ್ದ ಕೌನ್ಸಿಲರ್ ರವಿಚಂದ್ರ ಗಟ್ಟಿ ಪಕ್ಷದಿಂದ ಅಮಾನತು

ಉಳ್ಳಾಲ: `ರಮ್ ಕುಡಿದು ಪೆಪ್ಪರ್ ಹಾಕಿ ಮೊಟ್ಟೆ ತಿಂದರೆ ಕೊರೊನಾ ದೂರವಾಗುತ್ತದೆ’ ಎಂದು ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗಿ ದೇಶಾದ್ಯಂತ ಸುದ್ಧಿಯಾದ ಉಳ್ಳಾಲ ನಗರಸಭೆ ಕಾಂಗ್ರೆಸ್ ಕೌನ್ಸಿಲರ್ ರವಿಚಂದ್ರ ಗಟ್ಟಿ ಇವರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಮುಂದಿನ ಆದೇಶದವರೆಗೆ ಅಮಾನತುಗೊಳಿಸಲಾಗಿದೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಮಿಟಿ ಆದೇಶ ಹೊರಡಿಸಿದೆ. ಮೊನ್ನೆ ನಡೆದ

ಗುರುಪುರ ಕೈಕಂಬ ಇಳಿಜಾರು ಪ್ರದೇಶದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ!!

ಮಂಗಳೂರು:ಲಾರಿಗಳ ನಡುವೆ ಭೀಕರ ಅಪಘಾತ ಸಂಭವಿಸಿ,ಚಾಲಕರಿಬ್ಬರು ಮೃತಪಟ್ಟ ಘಟನೆಯೊಂದು ನಗರದ ಹೊರವಲಯದ ಗುರುಪುರ-ಕೈಕಂಬ ಬಳಿಯ ಇಳಿಜಾರು ಪ್ರದೇಶದಲ್ಲಿ ನಡೆದಿದೆ. ಮೂಡುಬಿದ್ರೆ ಕಡೆಯಿಂದ ಮಣ್ಣು ಹೊತ್ತು ಬರುತ್ತಿದ್ದ ಬೃಹತ್ ಲಾರಿ ಹಾಗೂ ಗುರುಪುರ ಕಡೆಯಿಂದ ಹೋಗುತ್ತಿದ್ದ ಲಾರಿ ನಡುವೆ ಇಳಿಜಾರು ಪ್ರದೇಶದಲ್ಲಿ ಅಪಘಾತ ಸಂಭವಿಸಿದ್ದು, ಅಪಘಾತದ ತೀವ್ರತೆಗೆ ಎರಡೂ ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದು, ರಸ್ತೆ ಬದಿಯ ಹೊಂಡಕ್ಕೆ ಇಳಿದು ನಿಂತ ಪರಿಣಾಮ ಚಾಲಕರನ್ನು