ಪತ್ರಕರ್ತ ನವೀನ್ ಸೂರಿಂಜೆ ಕೃತಿ ‘ಕುತ್ಲೂರು ಕಥನ’ ಬಿಡುಗಡೆ

ಮಂಗಳೂರು: ಪತ್ರಕರ್ತ ನವೀನ್ ಸೂರಿಂಜೆ ಬರೆದ ಕೃತಿ ಕುತ್ಲೂರು ಕಥನವನ್ನು ಖ್ಯಾತ ಚಿಂತಕ ಹರ್ಷ ಮಂದರ್ ಬಿಡುಗಡೆಗೊಳಿಸಿದರು. ಬಿಜ್ಜೋಡಿಯ ಶಾಂತಿ ಕಿರಣ ಸಭಾಂಗಣದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಕೃತಿಯ ಅನವಾರಣಗೊಳಿಸಿದ ಹರ್ಷ ಮಂದರ್ ಅವರು ಈ ಕೃತಿಯನ್ನು ಭಾಷಾ ಸಮಸ್ಯೆ ಕಾರಣದಿಂದಾಗಿ ಓದಲು ಸಾಧ್ಯವಾಗದೆ ಇರುವುದಕ್ಕೆ ಬೇಸರ ಇದೆ. ಆದರೆ ಇದರಲ್ಲಿರುವ ವಿಷಯಗಳನ್ನು ಅರಿತುಕೊಂಡಿದ್ದೇನೆ. ಈ ಕೃತಿ  ಸಂವಿಧಾನ ರಕ್ಷಣೆಗೆ ಸಹಾಯಕವಾಗಿದೆ ಎಂದು ಹೇಳಿದರು. ಒಂದು ಊರಿನ ನೈಜ ಇತಿಹಾಸ ಈ ಪುಸ್ತಕದಲ್ಲಿ ದಾಖಲಾಗಿದೆ. ಕೃತಿಯಲ್ಲಿರುವ ವಿಠಲ ಮಲೆಕುಡಿಯ, ನವೀನ್ ಸೂರಿಂಜೆ, ದಿನೇಶ್ ಉಳಿಪಾಡಿ, ಮುನೀರ್ ಕಾಟಿಪಳ್ಳ ಇವರೆಲ್ಲ ನಿಜವಾದ ಹೀರೊಗಳು  ಎಂದು ಬಣ್ಣಿಸಿದರು.

ಹಿರಿಯ ವಕೀಲರಾದ  ದಿನೇಶ್ ಹೆಗ್ಡೆ ಉಳೆಪಾಡಿ ಮಾತನಾಡಿ, ‘ಕುತ್ಲೂರು ಕಥನ’ ಕೇವಲ ಕುತ್ಲೂರು ಊರಿನ ಕಥನವಲ್ಲ, ಬೇರೆ ಊರುಗಳ ಹಕ್ಕುಗಳ ಹೋರಾಟಕ್ಕೆ ಮತ್ತು ಪ್ರಜಾಸತ್ತಾತ್ಮಕವಾಗಿ ಹೋರಾಡಲು ಬಯಸುವ ಎಲ್ಲರಿಗೂ ಪರಿಹಾರ ಪುಸ್ತಕವಾಗಿದೆ ಎಂದರು.

ಒಂದೊಮ್ಮೆ ನಕ್ಸಲ್ ಪೀಡಿತ ಪ್ರದೇಶ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡಿದ್ದ ಕುತ್ಲೂರು ಪ್ರದೇಶಕ್ಕೆ ಹೋಗಬೇಕಾದರೆ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯಬೇಕಾದ ಸ್ಥಿತಿ ಮತ್ತು ಮನೆಯಲ್ಲಿ ಹೆಚ್ಚು ದವಸಧಾನ್ಯಗಳನ್ನು ಇಟ್ಟುಕೊಳ್ಳುವಂತಿರಲಿಲ್ಲ. ಹಕ್ಕುಗಳಿಗಾಗಿ ಧ್ವನಿ ಎತ್ತಿದಾಗ ಅವರ ಮೇಲೆ  ಕೇಸ್ ದಾಖಲಾದರೆ ವಕೀಲರಿಗೂ ನಿಭಾಯಿಸಲು ಕಷ್ಟ ಇತ್ತು ಎಂದು ಹೇಳಿದರು.

ವಿಠಲ ಮಲಕುಡಿಯ ಅವರ ತಾಯಿ ಹೊನ್ನಮ್ಮ, ಮಲೆಕುಡಿಯ ಸಮುದಾಯದ ಮುಖಂಡ ಪೂವಪ್ಪ ಮಲೆಕುಡಿಯ, ಕಾರ್ಮಿಕ ಮುಖಂಡ ವಸಂತ ಆಚಾರ್ಯ, ಪತ್ರಕರ್ತ  ವಿಲ್ಫ್ರೇಡ್ ಡಿ ಸೋಜ,  ಮಂಗಳೂರು ನಗರದ ಮಾಜಿ ಮೇಯರ್ ಅಶ್ರಫ್, ವಿಠಲ ಮಲೆಕುಡಿಯ ಅವರಿಗೆ ಉಪನ್ಯಾಸಕರಾಗಿದ್ದ ಡಾ.ಸಫಿಯಾ ಅವರನ್ನು ಕುತ್ಲೂರು ಕಥನ  ಕೃತಿ ನೀಡಿ ಹರ್ಷ ಮಂದರ್ ಗೌರವಿಸಿದರು. ದಲಿತ ನಾಯಕ ಎಂ. ದೇವದಾಸ ಅಧ್ಯಕ್ಷತೆ ವಹಿಸಿದ್ದರು.

ಪತ್ರಕರ್ತ ವಿಠಲ ಮಲೆಕುಡಿಯ ಮಾತನಾಡಿ, ಕುತ್ಲೂರು ಗ್ರಾಮದಲ್ಲಿರುವ 30 ಮನೆಗಳ  ಪೈಕಿ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದಕ್ಕಾಗಿ ಪ್ರತಿಯೊಂದು ಮನೆಯ  ಕನಿಷ್ಠ ಒಬ್ಬನ ಮೇಲೆ ಕೇಸ್ ಇದೆ. ತಾನು ತೊಂದರೆಗೊಳಗಾದ  ಕಟ್ಟಕಡೆಯ ವ್ಯಕ್ತಿ. ತನ್ನ ಮೇಲೆ ದಾಖಲಾದ ಪ್ರಕರಣದ  ಬಳಿಕ  ಎಎನ್‌ಎಫ್‌ನ ದೌರ್ಜನ್ಯ ಪ್ರಕರಣಗಳು ಕಡಿಮೆಯಾಯಿತು. ಪ್ರಜಾಪ್ರಭುತ್ವ ಮಾದರಿ ಹೋರಾಟಗಳಿಂದ ಕುತ್ಲೂರಿನಲ್ಲಿ ಇವತ್ತು ನೆಮ್ಮದಿ ಇದೆ  ಎಂದು ಹೇಳಿದರು. ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಅವರು ಮಾತನಾಡಿ, ಕುತ್ಲೂರು ಕಥನ ಮನೆ ಮನೆಗೆ ತಲುಪಬೇಕಾಗಿದೆ. ಮುಂದಿನ ವಿಧಾನ ಸಭಾ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳು  ಕುತ್ಲೂರು ಕಥನವನ್ನು ಓದಬೇಕಾಗಿದೆ  ಎಂದು ಹೇಳಿದರು. ಪತ್ರಕರ್ತ ಸಂವರ್ತ ಸಾಹಿಲ್  ಅವರು  ಹರ್ಷ ಮಂದರ್‌ರ ಆಂಗ್ಲ ಭಾಷಣವನ್ನು ಕನ್ನಡಕ್ಕೆ ಅನುವಾದಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಲೇಖಕ ನವೀನ್ ಸೂರಿಂಜೆ ಅವರು ಕುತ್ಲೂರು ಕಥನ ಸಿನೆಮಾ ಅಗಿ ಮೂಡಿಬರಲಿದೆ ಎಂದು ಮಾಹಿತಿ ನೀಡಿದರು.  ಪ್ರಕಾಶಕಿ  ಅಕ್ಷತಾ ಹುಂಚದಕಟ್ಟೆ ಸ್ವಾಗತಿಸಿದರು. ಡಾ. ಜೀವನ್‌ರಾಜ್ ಕುತ್ತಾರ್ ಕಾರ್ಯಕ್ರಮ

Related Posts

Leave a Reply

Your email address will not be published.