HomeFresh Newsಸಹಜ ಹೆರಿಗೆ ಬಯಸಿದ ಕುಟುಂಬ;ಮನೆಯಲ್ಲೇ ಹೆರಿಗೆ ಆಗುವ ವ್ಯವಸ್ಥೆ;ತಮಿಳುನಾಡಿನಲ್ಲಿ ಮಹಿಳೆಯ ಮರಣ

ಸಹಜ ಹೆರಿಗೆ ಬಯಸಿದ ಕುಟುಂಬ;ಮನೆಯಲ್ಲೇ ಹೆರಿಗೆ ಆಗುವ ವ್ಯವಸ್ಥೆ;ತಮಿಳುನಾಡಿನಲ್ಲಿ ಮಹಿಳೆಯ ಮರಣ

ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯ ಹಳ್ಳಿಯೊಂದರ ಮಹಿಳೆ ಶಶಿಕಲಾರು ಮನೆಯವರ ಇಷ್ಟದಂತೆ ಮನೆಯಲ್ಲೇ ಹೆರಿಗೆಗೆ ಒಪ್ಪಿ, ಕೊನೆಗೆ ಹೆರಿಗೆ ವೇಳೆ ಮರಣವನ್ನಪ್ಪಿದ್ದಾರೆ.
ತಿರುಪ್ಪೂರ್ ಜಿಲ್ಲೆಯ 32ರ ಮಹಿಳೆ ಶಶಿಕಲಾರಿಗೆ ಮೊದಲ ಹೆರಿಗೆ ಆಸ್ಪತ್ರೆಯಲ್ಲಿ ಸಿಸೇರಿಯನ್ ಮೂಲಕ ಆಗಿತ್ತು. ಮನೆಯವರ ಆಶಯ ಮನೆಯಲ್ಲೇ ಹೆರಿಗೆ ಆಗಬೇಕು, ನಾವೆಲ್ಲ ಹೆತ್ತಿಲ್ಲವಾ ಎನ್ನುವುದಾಗಿತ್ತು. ಅದರಂತೆ ಮನೆಯಲ್ಲೇ ಸುಖ ಪ್ರಸವ ಆಗಲಿ ಎಂದು ಮನೆಯವರೆಲ್ಲ ಕೆಲವು ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಶಶಿಕಲಾ ಕೂಡ ಬೇರೆ ದಾರಿಯಿಲ್ಲದೆ ಸಹಜ ಹೆರಿಗೆಗೆ ಸಿದ್ಧವಾಗಿದ್ದರು.


ಮನೆಯವರು ಯೂ ಟ್ಯೂಬ್ ನೋಡಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ಮಹಿಳೆಯು ಆರೋಗ್ಯವಂತ ಮಗುವೊಂದನ್ನು ಹೆತ್ತರು; ಎಲ್ಲರೂ ಸಂತೋಷಗೊಂಡರು. ಆದರೆ ಹೆರಿಗೆಯ ಬೆನ್ನಿಗೆ ಶಶಿಕಲಾ ಅವರ ದೇಹ ಸ್ಥಿತಿ ಸಂಪೂರ್ಣ ಹದಗೆಟ್ಟಿತು; ಹಾಗಾಗಿ ನಿರ್ವಾಹವಿಲ್ಲದೆ ಆಸ್ಪತ್ರೆಗೆ ಕರೆದೊಯ್ದರು. ಮೊದಲ ಸಿಸೇರಿಯನ್ ಹೆರಿಗೆ ಆದಾಗಿನಿಂದ ಶಶಿಕಲಾರು ಆಲೋಪತಿ ಮದ್ದುಗಳಿಗೆ ಒಗ್ಗಿಕೊಂಡಿದ್ದರು. ಅದಿಲ್ಲದೆ ಏನೂ ಮಾಡಲಾಗದವರಾಗಿದ್ದರು. ಸಹಜ ಹೆರಿಗೆ ಎಂದು ಎಲ್ಲವನ್ನೂ ನಿಲ್ಲಿಸಿದ್ದರಿಂದ ಹೆರಿಗೆ ಆದರೂ ಆರೋಗ್ಯ ಕೈಕೊಟ್ಟಿತ್ತು.

ಆಕೆಯನ್ನು ಈರೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಒಯ್ಯಲಾಯಿತು; ಶೀಘ್ರ ಚಿಕಿತ್ಸೆ ಎಂದು ಮನೆಯವರು ಬೆನ್ನಿಗೇ ಕಾಸಗಿ ಆಸ್ಪತ್ರೆಗೆ ಒಯ್ದರು. ಆದರೆ ಶಶಿಕಲಾ ಕೊನೆಯುಸಿರೆಳೆದರು. ದೂರು ಇಲ್ಲವಾದರೂ ಗಂಡ ಕುಳಂದೈಸಾಮಿಯನ್ನು ಪೋಲೀಸರು ವಿಚಾರಣೆ ನಡೆಸಿ ಬಿಟ್ಟಿದ್ದಾರೆ. ಆದರೆ ಪ್ರಕರಣ ಮುನ್ನಡೆದಿದೆ. ಆರೋಗ್ಯ ಇಲಾಖೆಯೂ ತನಿಖೆ ನಡೆಸಿದೆ. ಮಗುವಿಗೆ ತಾಯಿ, ತಾಯಿ ಹಾಲು ಇಲ್ಲವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments