HomeFresh Newsದಿಲ್ಲಿ ಮನುಷ್ಯನ ಕೆಟ್ಟ ಕೈಸನ್ನೆ, ಬಾಯ್ಸನ್ನೆ; ಚಿತ್ರೀಕರಿಸಿ ಉಗಿದ ಹೆಣ್ಣು

ದಿಲ್ಲಿ ಮನುಷ್ಯನ ಕೆಟ್ಟ ಕೈಸನ್ನೆ, ಬಾಯ್ಸನ್ನೆ; ಚಿತ್ರೀಕರಿಸಿ ಉಗಿದ ಹೆಣ್ಣು


ದಿಲ್ಲಿಯಲ್ಲಿ ವ್ಯಕ್ತಿಯೊಬ್ಬ ಹೆಣ್ಣೊಬ್ಬಳತ್ತ ಕೆಟ್ಟ ಕೈ ಭಾಷೆ, ದೇಹ ಭಾಷೆ ತೋರಿಸಿದ್ದಾನೆ; ಆ ಕಿಲಾಡಿ ಹೆಣ್ಣು ಅದನ್ನು ಚಿತ್ರೀಕರಿಸಿ ತೋರಿಸಿ ಉಗಿದಿದ್ದಾ


ಚಲಿಸುವ ಕಾರಿನಲ್ಲಿ ಆ ವ್ಯಕ್ತಿ ಕೆಟ್ಟದಾಗಿ ಹೆಣ್ಣೊಬ್ಬಳಲ್ಲಿ ಕೆಟ್ಟ ಸಂಜ್ಞೆಗಳ ಮೂಲಕ ಬೇಡದ ಬೇಡಿಕೆಗಳನ್ನು ಮುಂದಿಟ್ಟಿದ್ದಾನೆ. ಆತ ನನ್ನನ್ನು ಕೀಟಲೆ ಮಾಡಿ ಸತಾಯಿಸಿದ ಎಂದು ಆಕೆ ದೂರಿದ್ದಾಳೆ. ಅದಕ್ಕೆ ಸಾಕ್ಷಿಯಾಗಿ ಆತನ ಎರಡು ನಿಮಿಷಗಳ ಕೆಟ್ಟ ದೇಹ ಭಾಷೆಯನ್ನು ಆಕೆ ಚಿತ್ರೀಕರಿಸಿಟ್ಟು ತೋರಿಸಿದ್ದಾಳೆ.


ಆಕೆ ನೀಡಿರುವ ದೂರಿನಂತೆ ವ್ಯಕ್ತಿ ಆಕೆಗೆ ಸ್ವಲ್ಪ ತಿಳಿದವನೇ ಆಗಿದ್ದು, ನಾನಾ ರೀತಿಯಲ್ಲಿ ಪೀಡಿಸುತ್ತಿದ್ದಾನಂತೆ. ಮೋಮೋ ತಿನ್ನುವ ನೆಪದಲ್ಲಿ ನಿಲ್ಲಿಸಿ, ಮತ್ತು ತಿರುವಿನಲ್ಲಿ ಪಕ್ಕಕ್ಕೆ ಸರಿದು ಬೇಡದ ಕೈಸನ್ನೆ ಮಾಡಿರುವುದು ವೀಡಿಯೋದಲ್ಲಿ ಕಂಡುಬರುತ್ತಿದೆ. ಕೊನೆಗೆ ಧೈರ್ಯದಿಂದ ನೀನೇನಾದರೂ ಮಾಡಿದರೆ ಕಾರಿನ ಎದುರಿಗೆ ಹಾರುತ್ತೇನೆ ಎಂದ ಮಹಿಳೆ ಕಾರಿನ ಕಿಟಕಿಯಿಂದ ಹೊರಗೆ ಹಾರಿದ್ದಾಳೆ.


ಆಕೆಯ ದೂರಿನ ಮೇಲೆ ಪೂರ್ವ ದೆಹಲಿಯ ಮಂಡವಲಿ ಪೋಲೀಸು ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ. ತನಿಖೆ ಆರಂಭವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments