ಸೋತವರೂ ಮುಖ್ಯಮಂತ್ರಿ ಪದವಿ ಆಕಾಂಕ್ಷಿಗಳಾಗಿದ್ದಾರೆ : ಅಭಯಚಂದ್ರ ಜೈನ್

ಮೂಡುಬಿದಿರೆ: ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿ ಹಲವು ಬಾರಿ ಸೋತವರೂ ತಾವು ಮುಖ್ಯಮಂತ್ರಿ ಪದವಿಗೆ ಆಕಾಂಕ್ಷಿ ಎಂದು ಹೇಳಿಕೆ ನೀಡುತ್ತಿರುವುದರಿಂದ ರಾಜಕೀಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಸಾಕ್ಷಿ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅವರು ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.’ಪ್ರಾಸಿಕ್ಯೂಷನ್ ಆದೇಶದ ಸಂದರ್ಭದಲ್ಲಿ ಸಿದ್ಧರಾಮಯ್ಯ ಅವರ ಬೆಂಬಲಕ್ಕೆ ನಿಂತವರು, ಎಲ್ಲರೂ ಒಟ್ಟಿಗಿದ್ದೇವೆ ಎಂದ ಕೆಲ ಸಚಿವರು, ಸಿದ್ದರಾಮಯ್ಯರಿಂದಾಗಿಯೇ ಶಾಸಕರಾಗಿ ಆಯ್ಕೆ ಯಾದವರು, ಅವರ ಹೆಸರು ಹೇಳಿಕೊಂಡೇ ಮೊದಲಸಲ ಶಾಸಕರಾದವರು ಕೂಡಾ ಈ ರೀತಿಯ ಹೇಳಿಕೆ ನೀಡುತ್ತಿರುವುದು ಬೇಸರ ತಂದಿದೆ, ಕಾಂಗ್ರೆಸ್ ಕ್ಷೀಣಗೊಳ್ಳಲು ಇಂತಹ ಹೇಳಿಕೆಗಳೇ ಸಾಕಾಗುತ್ತದೆ ಎಂದವರು ಖೇದ ವ್ಯಕ್ತಪಡಿಸಿದರು.

ಎಲ್ಲರಿಗೂ ಅವಕಾಶ ಸಿಗಬೇಕಾದದ್ದು ಸರಿಯೇ, ಆದರೆ ಪ್ರಸ್ತುತ ದಿನಗಳಲ್ಲಿ ಕಾಂಗ್ರೆಸ್ ನ ಎಲ್ಲ ಸಚಿವರು, ಶಾಸಕರು ಸಿದ್ಧರಾಮಯ್ಯ ಅವರೊಟ್ಟಿಗೆ ನಿಲ್ಲಬೇಕಿದೆ ಎಂದ ಅವರು ವಂಶಪಾರಂಪರ್ಯ ಎಂಬಂತೆ ಒಬ್ಬರಾದ ಬಳಿಕ ಅದೇ ಕುಟುಂಬದ ಇನ್ನೊಬ್ಬರಿಗೆ ಅವಕಾಶ ಕೇಳುವುದೂ ಸರಿ ಅಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.

Related Posts

Leave a Reply

Your email address will not be published.