ತುಳು ಲಿಪಿ ಯುನಿಕೋಡಿಗೆ ಸೇರ್ಪಡೆ ವಿಚಾರ: ತಪ್ಪು ಮಾಹಿತಿಯನ್ನು ಪರಿಷ್ಕರಿಸಿ: ದಯಾನಂದ ಜಿ ಕತ್ತಲ್ ಸಾರ್

ತುಳು ಲಿಪಿ ಯನ್ನು ಯುನಿಕೋಡಿಗೆ ಸೇರಿಸಲಾಗಿದೆ ಎಂದು ಹೆಚ್ಚಿನ ಮಾಧ್ಯಮಗಳಲ್ಲಿ ವರದಿ ಬಂದಿದೆ, ಇದು ಮಾಧ್ಯಮಗಳಿಗೆ ಸಿಕ್ಕಿರುವ ತಪ್ಪು ಮಾಹಿತಿ  ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷರು ದಯಾನಂದ ಜಿ ಕತ್ತಲ್ ಸಾರ್ ಹೇಳಿದರು.

ಗೌರವಾನ್ವಿತ  ವೆಂಕಟರಾಜ ಪುಣಿಚಿತ್ತಾಯರು  1100 ವರ್ಷ ಇತಿಹಾಸವುಳ್ಳ ತುಳು ಲಿಪಿಯ ಬಗ್ಗೆ ಬೆಳಕು ಚೆಲ್ಲಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು 2001 ರಲ್ಲಿ “ತುಳು ಲಿಪಿ”  ಪುಸ್ತಕ ಪ್ರಕಟಿಸಿತು. 2008 ರಲ್ಲಿ  ವೆಂಕಟರಾಜ ಪುಣಿಚಿತ್ತಾಯರ ಶಿಷ್ಯ, ಡಾ| ರಾಧಾಕೃಷ್ಣ ಬೆಳ್ಳೂರು  ಇವರು ತುಳುಲಿಪಿ ಎನ್ನುವ ಪುಸ್ತಕವನ್ನು,  ಆಗಿನ ತುಳು ಅಕಾಡೆಮಿಯ  ಅಧ್ಯಕ್ಷರಾಗಿದ್ದ ” ಎಂ ಕೆ ಸೀತಾರಾಮ್ ಕುಲಾಲ್” ಇವರು ಧರ್ಮಸ್ಥಳದ ಮ್ಯೂಸಿಯಂನಲ್ಲಿರುವ ಲಿಪಿಗೂ, ಉಡುಪಿ ವಿದ್ಯಾಪೀಠದಲ್ಲಿ ಲಿಪಿಗೂ ಸ್ವಲ್ಪ  ಬದಲಾವಣೆ ಕಂಡು, ಅಕಾಡೆಮಿಯಲ್ಲಿ ಕರೆದ ಸಭೆಯಲ್ಲಿ  ಚರ್ಚಿಸಿ, ಏಕರೂಪಕ್ಕೆ ಸರಿಸಮಾನವಾದ ಲಿಪಿಯ ತುಳು ಲಿಪಿ ಪರಿಚಯ ಪುಸ್ತಕವಾಗಿ ಪ್ರಕಟಿಸಿದರು. 2009ರಲ್ಲಿ ತುಳುವೆರೆ ಆಯನ ಕೂಟ  ಬದಿಯಡ್ಕ  “ಪರಿಷ್ಕೃತ ತುಳು ಲಿಪಿ” ಹಾಗೂ “ಗಣಕೀಕೃತ ತುಳು ಲಿಪಿ”  “ಡಾ. ರಾಧಾಕೃಷ್ಣ ಬೆಳ್ಳೂರು” ಲೇಖಕರಾಗಿ ಪ್ರಕಟಿಸಿದರು . 2019 ರಲ್ಲಿ ದಯಾನಂದ ಜಿ. ಕತ್ತಲ್ ಸಾರ್ ಆದ ನಾನು ಅಧ್ಯಕ್ಷನಾಗಿರುವಾಗ ಜೈ ತುಳುನಾಡು ಸಂಘಟನೆ ಸಹಿತ ಒಂದಷ್ಟು ಸಂಘಟನೆಗಳು ತುಳು ಲಿಪಿ ತರಬೇತಿಯನ್ನು  ನೀಡಬೇಕು ಎನ್ನುವ ಆಶಯವನಿಟ್ಟಾಗ, ಲಿಪಿಯಲ್ಲಿ ಏಕರೂಪ ಬರಬೇಕು ಎನ್ನುವ  ಮಾತನ್ನು ಮುಂದಿಟ್ಟಾಗ ಡಾ| ವಿಘ್ನ ರಾಜ್,  ಜಯಕರ ಪೂಜಾರಿ,  ಜಿವಿಎಸ್ ಉಳ್ಳಾಲ್ ದಂಪತಿಗಳು, ಪ್ರವೀಣ್ ರಾವ್, ಟೈಮ್ಸ್ ಆಫ್ ಕುಡ್ಲ ಪತ್ರಿಕೆಯ ಶ್ರೀ ಬಂಡಿ ಮಾರ್ ರವರು, ಡಾ| ರಾಧಾಕೃಷ್ಣಬೆಳ್ಳೂರು ಸಹಿತ ತುಳು ಲಿಪಿ ವಿದ್ವಾಂಸರನ್ನು ಸೇರಿಸಿ, ಅಕಾಡೆಮಿಯ ಸದಸ್ಯರ ಸಮಕ್ಷಮದಲ್ಲಿ ಮುಕ್ತವಾಗಿ ಚರ್ಚಿಸಿ, ಏಕರೂಪದ “ತುಳು ಲಿಪಿ” ಎನ್ನುವ ಪುಸ್ತಕವನ್ನು ಸರ್ವಾನುಮತದಿಂದ ಪ್ರಕಟಿಸಲಾಯಿತು. ಯೂನಿಕೋಡಿಗೆ ಸೇರಿಸುವ ಪ್ರಯತ್ನದ ಬಗೆಗೆ ಚರ್ಚಿಸಿ ಯೂನಿಕೊಡಿಗೆ ಸೇರಿಸುವ ಕಾರ್ಯ 2017 ರಲ್ಲಿ ಆರಂಭ ಗೊಂಡಿದೆ, ಡಾ. ಪವನಜ ಇವರು ಕೆಲಸವನ್ನ  ಮಾಡುತ್ತಿದ್ದಾರೆ ಅವರನ್ನೇ ಮುಂದುವರಿಸುವುದು ಎಂದು ತೀರ್ಮಾನಿಸಿ ಅವರಿಗೆ ಜವಾಬ್ದಾರಿ ಹಾಗೂ ಈ ಬಗೆಗಾಗಿ ಸದಸ್ಯ ಸಂಚಾಲಕರಾಗಿ ಡಾ| ಆಕಾಶ್ ರಾಜ್ ಜೈನ್ ಇವರನ್ನು ನಿಯುಕ್ತಿಗೊಳಿಸಲಾಯಿತು . ಅದಕ್ಕೂ 10 ವರ್ಷಗಳಷ್ಟು ಮೊದಲು ಬ್ರಾಹ್ಮಿ ಲಿಪಿ ಮೂಲದಿಂದ ಉತ್ತರ ಕನ್ನಡ ಭಾಗದಲ್ಲಿ  ಪ್ರಚಲಿತವಿದ್ದ  “ತಿಗಳಾರಿ ಲಿಪಿ” ಯನ್ನು ಯೂನಿಕೋಡಿಗೆ ಸೇರಿಸಲು  “ವೈಷ್ಣವಿ ಮೂರ್ತಿ” “ವಿನೋದ್ ರಾಜ್” ರವರು ಇಟ್ಟ ಬೇಡಿಕೆಯ ಪ್ರಯತ್ನಕ್ಕೆ ಯುನಿಕೋಡ್ ಕನ್ಸೋರ್ಟಿಯಂ ಕ್ಯಾಲಿಫೋರ್ನಿಯಾ” ದಿಂದ ತುಳು ತಿಗಳಾರಿ ಲಿಪಿ ಎಂದು ಅನುಮೋದನೆ  ಈಗ ನೀಡಲಾಗಿದೆ

 ಆದರೆ ಡಾ| ಪವನಜರು ತನ್ನ ವೈಯುಕ್ತಿಕ ಕಾರಣದಿಂದ ಯೂನಿಕೋಡ್ ಗೆ ಕಾರ್ಯವನ್ನು ವಿಳಂಬಿಸಿದಾಗ ಅಕಾಡೆಮಿ ಒತ್ತಾಯಿಸಿದಾಗ, ಅವರು ಜವಾಬ್ದಾರಿಯನ್ನು ಕೈ ಬಿಟ್ಟಾಗ , ಸರ್ವ ಸದಸ್ಯರ ಸಭೆಯಲ್ಲಿ ಇನ್ನುಳಿದವರು  ವೈಯುಕ್ತಿಕವಾಗಿ ಕೊಡುವುದಕ್ಕಿಂತ  , ನೇರವಾಗಿ ಸರಕಾರದ ಭಾಗವಾಗಿರುವ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಯಿಂದಲೇ ಅಕ್ಯಾಡೆಮಿಯ   ಅಧ್ಯಕ್ಷನಾದ ನನ್ನ ಅಧ್ಯಕ್ಷತೆಯಲ್ಲಿ ಸದಸ್ಯ ಸಂಚಾಲಕರಾಗಿರುವ ಡಾ| ಆಕಾಶ್ ರಾಜ್ ಜೈನ್ ಇವರಿಗೆ  ಯೂನಿಕೋಡ್ ನ ಜವಾಬ್ದಾರಿಯನ್ನು ವಹಿಸಿಕೊಡಲಾಯಿತು. ಬಹು ದೊಡ್ಡ ಬೇಡಿಕೆಯಿಂದ ಹಿಂದೆ ಬಿದ್ದಿದ್ದ ಚಟುವಟಿಕೆ ಅತಿ ವೇಗವನ್ನು ಪಡೆಯಿತು. ಜೈ ತುಳುನಾಡು ಸಂಘಟನೆಯ ವಿದ್ವತ್ಪೂರ್ಣ ಯುವಕರ ಸಹಕಾರದಿಂದ ನಿರಂತರ ಸಭೆಗಳನ್ನು ನಡೆಸಿ, ಕನ್ಸೋಟಿಯಂಗೆ ಎಲ್ಲಾ ದಾಖಲೆಗಳನ್ನು ಒದಗಿಸಿ, ಇಲ್ಲದೇ ಇದ್ದ ಹೆಚ್ಚುವರಿ   ಲಿಪಿಯನ್ನು  ಬೆಳ್ಳೂರು ರವರ ಸಹಕಾರದಿಂದ ರಚಿಸಿ, 80 ಪ್ರತಿಶತ ತಲುಪಿಸುವಲ್ಲಿ  ಅಕಾಡೆಮಿ ನಿಯುಕ್ತಿಗೊಳಿಸಿದ   ಈ ತಂಡ ಯಶಸ್ವಿಯಾಯಿತು. ಅಕಾಡೆಮಿಯ ನಮ್ಮ ಸಮಿತಿಯ ಅವಧಿ ಮುಗಿಯಿತು. ಈಗಿನ ಅಧ್ಯಕ್ಷರಾದ ತಾರಾನಾಥ ಗಟ್ಟಿಯವರು ಭರವಸೆಯನ್ನು ನೀಡಿದ್ದಾರೆ.

ಈಗ ಅನುಮೋದನೆ ದೊರೆತಿರುವುದು ತುಳುತಿಗಳಾರಿ ಲಿಪಿಗೆ. ತುಳು ಲಿಪಿಗೂ ಇದಕ್ಕೂ 25 ಶೇಕಡ ವ್ಯತ್ಯಾಸವಿದೆ. ಕನ್ನಡ ಮತ್ತು ತೆಲುಗು ಲಿಪಿಗಳಿಗೆ ಸಾಮ್ಯತೆಗಳಿರುವಂತೆ, ಈ ಎರಡು ಲಿಪಿಗಳಿಗೂ  ಸಾಮ್ಯತೆಗಳಿದೆ.

 ಇಲ್ಲಿ ಗಮನಿಸಬೇಕಾದಂತಹ ಅಂಶಗಳೇನೆಂದರೆ? ಯು ಬಿ ಪವನಜ ಅವರು ಯುನಿಕೋಡಿಗೆ  ಕೇವಲ ಪ್ರಸ್ತಾವನೆಯನ್ನು ಮಾತ್ರ ಕಳುಹಿಸಿರುತ್ತಾರೆ.  ಯಾವುದೇ ಕಾರ್ಯವನ್ನು ಮಾಡಿರುವುದಿಲ್ಲ . 2017 ರಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ನವರ ಇ ಗರ್ವನೆನ್ಸ್ ಕಾರ್ಯದರ್ಶಿಯಾಗಿದ್ದ ಬೇಲೂರು ಸುದರ್ಶನ ರವರ ಸಹಕಾರವನ್ನು ಪಡೆದು ತುಳುಲಿಪಿ ರಾಜ್ಯ ಮತ್ತು ರಾಷ್ಟ್ರಮಾನ್ಯತೆ ಪಡೆಯುವಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ದಯಾನಂದ ಜೀ ಕತ್ತಲ್ ಸರ್ ಆದ ನನ್ನ  ಹಾಗೂ ರಿಜಿಸ್ಟ್ರಾ ರ್ , ಸರ್ವ ಸದಸ್ಯರ ಪರಿಪೂರ್ಣ ಬೆಂಬಲದಿಂದ  ಡಾ|ಆಕಾಶ್ ರಾಜ್ ಜೈನ್ ರವರ ಸತತ ಪರಿಶ್ರಮದಲ್ಲಿ, ಜೈ ತುಳುನಾಡು ಸಂಘಟನೆಯ ಯುವಕರ ಸಹಕಾರದಿಂದ, ಯೂನಿಕೋಡ್ ಕಾರ್ಯವನ್ನು ಮುಂದುವರಿಸಲಾಯಿತು. ಈ ಹಿಂದಿನ ಅಧ್ಯಕ್ಷರುಗಳಾದ ಪ್ರೊ ವಿವೇಕ್ ರೈ ಅವರಿಂದ ಹಿಡಿದು ನಮ್ಮ ಸಮಿತಿಯವರ ವರೆಗೆ ನಿರಂತರ ಪ್ರಯತ್ನದ ಫಲ ಹೊರತಾಗಿ ಇನ್ನುಳಿದವರದ್ದಲ್ಲ. ಪ್ರಸ್ತುತ ತುಳು ಲಿಪಿ ಯೂನಿಕೋಡ್ ಸೇರ್ಪಡೆ ಕಾರ್ಯ ಸಂಪೂರ್ಣಗೊಳ್ಳಲು ಇನ್ನೂ ಸ್ವಲ್ಪ ಕೆಲಸ ಬಾಕಿ ಇದ್ದು, ಆಸಕ್ತರು   ಆಗಿರುವ ಕಾರ್ಯದ ಸಂಪೂರ್ಣ ವಿವರವನ್ನು ಯೂನಿಕೋಡ್ ಕನ್ಸೋರ್ಟಿಯಂ ವೆಬ್ಸೈಟ್ನಲ್ಲಿ ತುಳು ಯುನಿಕೋಡ್  ಆಯ್ಕೆ ಮಾಡಿ ತಿಳಿದುಕೊಳ್ಳಬಹುದು ಎಂದು ಸದಸ್ಯ ಸಂಚಾಲಕರಾಗಿರುವ ಡಾಕ್ಟರ್ ಆಕಾಶ್ ರಾಜ್ ಜೈನ್  ಸ್ಪಷ್ಟವಾಗಿ ತಿಳಿಸುತ್ತಾರೆ . ಮಾಧ್ಯಮ ಮಿತ್ರರು ತಪ್ಪು ಮಾಹಿತಿಯನ್ನು ಪರಿಷ್ಕರಿಸಿ, ಸ್ಪಷ್ಟ ಮಾಹಿತಿಯನ್ನು ನೀಡಬೇಕೆಂದು  ವಿನಂತಿಸಿದ್ದಾರೆ.

Related Posts

Leave a Reply

Your email address will not be published.