HomeFresh Newsಯಕ್ಷ ದೇಗುಲ ಹತ್ತು ಸಮಸ್ತರು 10ನೇ ತೋಕೂರು ನೂತನ ಅಧ್ಯಕ್ಷರಾಗಿ ಮೋಹನ್ ಪೂಜಾರಿ ಆಯ್ಕೆ

ಯಕ್ಷ ದೇಗುಲ ಹತ್ತು ಸಮಸ್ತರು 10ನೇ ತೋಕೂರು ನೂತನ ಅಧ್ಯಕ್ಷರಾಗಿ ಮೋಹನ್ ಪೂಜಾರಿ ಆಯ್ಕೆ

ಯಕ್ಷ ದೇಗುಲ ಹತ್ತು ಸಮಸ್ತರು 10ನೇ ತೋಕೂರು ಇದರ 5ನೇ ವಾರ್ಷಿಕ ಮಹಾಸಭೆಯನ್ನು ದಿನಾಂಕ 01.09.2024 ನೇ ಭಾನುವಾರ ಅಪರಾಹ್ನ ಗಂಟೆ 3.00 ಕ್ಕೆ ಸರಿಯಾಗಿ ಓಂಕಾರೇಶ್ವರಿ ಮಂದಿರದಲ್ಲಿ ಅಧ್ಯಕ್ಷರಾದ ಶ್ರೀ ಸದಾಶಿವ ಸಾಲ್ಯಾನ್ ರವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ಶ್ರೀ ಭಾಸ್ಕರ್ ಅಮೀನ್ ತೋಕೂರುರವರು ವಾರ್ಷಿಕ ಆಯವ್ಯಯದ ಮಂಡನೆಯನ್ನು ಮಂಡಿಸಿ ಅನುಮೋದನೆಯನ್ನು ಪಡೆದರು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು, ಗೌರವಾಧ್ಯಕ್ಷರಾಗಿ ಶ್ರೀ ಜಯಕೃಷ್ಣ ಕೋಟ್ಯಾನ್, ಅಧ್ಯಕ್ಷರಾಗಿ ಶ್ರೀ ಮೋಹನ್ ಪೂಜಾರಿ ಸುಬ್ರಹ್ಮಣ್ಯ ನಗರ, ಉಪಾಧ್ಯಕ್ಷರಾಗಿ ಶ್ರೀ ಸಂಪತ್ ಜೆ ಶೆಟ್ಟಿ ಮತ್ತು ಪದ್ಮರಾಜ್ ಕರ್ಕೇರ, ಪ್ರಧಾನ ಕಾರ್ಯದರ್ಶಿಯಾಗಿ ಸತತ 6ನೇ ಬಾರಿಗೆ ಶ್ರೀ ಭಾಸ್ಕರ್ ಅಮೀನ್ ತೋಕೂರು, ಜೊತೆ ಕಾರ್ಯದರ್ಶಿಗಳಾಗಿ ಶ್ರೀ ಶ್ರೀನಿವಾಸ ಮತ್ತು ಶ್ರೀಮತಿ ಪ್ರೇಮಲತಾ ಯೋಗೀಶ್ ಕೋಶಾಧಿಕಾರಿಯಾಗಿ ಶ್ರೀ ನವೀನ್ ಚಂದ್ರ ಅಮೀನ್, ಆಂತರಿಕ ಲೆಕ್ಕ ಪರಿಶೋಕದ್ದಕರಾಗಿ ಶ್ರೀ ಹಿಮಕರ್ ಟಿ. ಸುವರ್ಣ ಕಲ್ಲಾಡಿ ಮತ್ತು ಸಂಘಟನಾ ಕಾರ್ಯದರ್ಶಿ ಮತ್ತು ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾದ ಶ್ರೀ ಮೋಹನ್ ಪೂಜಾರಿಯವರು ಮಾತನಾಡಿ ಯಕ್ಷಗಾನ ಕಲೆಯನ್ನು ಇನ್ನಷ್ಟು ಉಳಿಸುವ ಪ್ರಯತ್ನ ನಮ್ಮಿಂದ ಆಗಬೇಕಿದೆ ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಉಪಾಧ್ಯಕ್ಷರಾದ ಸಂಪತ್ ಜೆ ಶೆಟ್ಟಿಯವರು ಮಾತನಾಡಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವಲ್ಲಿ ನಮ್ಮೆಲ್ಲರ ಪರಿಶ್ರಮ ಅಗತ್ಯ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶ್ರೀಮತಿ ಕುಸುಮ ರವರು ಪ್ರಾರ್ಥಿಸಿ ಶ್ರೀ ಭಾಸ್ಕರ್ ಅಮೀನ್ ತೋಕೂರು ರವರು ಕಾರ್ಯಕ್ರಮವನ್ನು ನಿರೂಪಿಸಿದರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments