ಎಕ್ಕದ ಟ್ರೇಡ್ ಮಾರ್ಕ್ : ಸುಳ್ಳು ವರದಿ ವಿಚಾರ: ಕಾರ್ಕಳ ಠಾಣೆಯಲ್ಲಿ ದೂರು ದಾಖಲು
ಎಕ್ಕದ ಎಂಬ ರಿಜಿಸ್ಟರ್ಡ್ ಟ್ರೇಡ್ ಮಾರ್ಕ್ ಹೊಂದಿರುವ ಸುಧಾಕರ್ ಎಮ್ ಪೂಜಾರಿಯವರ ಬಗ್ಗೆ ಸುಳ್ಳು ವರದಿಯನ್ನು ಬಿತ್ತರಿಸಿದ ಮೊಹಿದ್ದೀನ್ ಕುಂಜ್ಜಿ ಯಾನೇ ಎಮ್ ಕೆ ಗರ್ಡಾಡಿ ವಿರುದ್ಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾರ್ಕಳ ತಾಲೂಕಿನ ರೆಂಜಾಳ ಗ್ರಾಮದ ಸುಧಾಕರ್ ಎಂ. ಪೂಜಾರಿ ಅವರ ರಿಜಿಸ್ಟರ್ಡ್ ಟ್ರೇಡ್ ಮಾರ್ಕ್ ಹೊಂದಿರುವ “ಎಕ್ಕದ ఎంబ ಟ್ರೇಡ್ ಮಾರ್ಕ್ ಸಂಬಂಧಪಟ್ಟಂತೆ, ಈ ಟ್ರೇಡ್ ಮಾರ್ಕ್ ಉಲ್ಲಂಘಿಸಿ ‘ಎಕ್ಕಮಾಲೆ’ ಎಂಬ ಹೆಸರಿನಲ್ಲಿ ಉತ್ಪಾದನೆ ಮತ್ತು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ ಮೂಡುಬಿದಿರೆಯ ಸಂಜೀವಿನಿ ಆಯುರ್ವೇದಿಕ್ ನ ಮಾಲಕರಾದ ಮೊಹಿದ್ದೀನ್ ಕುಂಜ್ಜಿ ಎಂಬುವರು ಸುಧಾಕರ ಎಮ್ ಪೂಜಾರಿಯವರು ತನಗೆ ಹಾಗೂ ನನ್ನ ಕುಟುಂಬದವರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂಬ ಸುಳ್ಳು ಸುದ್ದಿಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದರ ವಿರುದ್ಧ ಸುಧಾಕರ ಎಮ್ ಪೂಜಾರಿಯವರು ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.