ಕಾನೂನಿನ ಅರಿವಿನ ಬಗ್ಗೆ ತರಬೇತಿ ಶಿಬಿರ – ಕಾಸರಗೋಡು ಕಾನೂನು ಸೇವಾ ಪ್ರಾಧಿಕಾರದಿಂದ ಕಾರ್ಯಕ್ರಮ

ಮಂಜೇಶ್ವರ: ಕಾಸರಗೋಡು ಕಾನೂನು ಸೇವಾ ಪ್ರಾಧಿಕಾರದ ನೇತೃತ್ವದಲ್ಲಿ ಕಾನೂನಿನ ಅರಿವಿನ ಬಗ್ಗೆ ತರಬೇತಿ ಶಿಬಿರ ಹಮ್ಮಿಕೊಳ್ಳಲಾಯಿತು.ಮಂಜೇಶ್ವರ ಗೋವಿಂದ ಪೈ ಗಿಳಿವಿಂಡು ಸಭಾಂಗಣದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಕಾರ್ಯಕಾರಿ ಸಮಿತಿ ಸದಸ್ಯ ಕೆ ಆರ್ ಜಯಾನಂದ ರವರ ಅಧ್ಯಕ್ಷತೆಯಲ್ಲಿ ನಡೆದ ತರಭೇತಿ ಶಿಬಿರವನ್ನು ಜಿಲ್ಲಾ ನ್ಯಾಯಾಧೀಶ ಸಿ ಕೃಷ್ಣ ಕುಮಾರ್ ಉದ್ಘಾಟಿಸಿದರು.

kanunu arivu

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮಕ್ಕಳ ದೌರ್ಜನ್ಯ ಹಾಗೂ ಹಿರಿಯ ನಾಗರಿಕರಿಗೆ ಸಿಗುವ ಸವಲತ್ತುಗಳ ಬಗ್ಗೆ ಅಂಗನವಾಡಿ ಕಾರ್ಯಕರ್ತರಿಗೆ ಹಾಗೂ ಆಶಾ ವರ್ಕರ್ಸ್ ಕಾರ್ಯಕರ್ತೆಯರಿಗೆ ಅಡ್ವಕೇಟ್ ಉದಯ ಕುಮಾರ್ ಗಟ್ಟಿ ತರಬೇತಿ ಶಿಬಿರ ನಡೆಸಿದರು.ಕಾನೂನು ಸೇವಾ ಪ್ರಾಧಿಕಾರದ ಸೆಕ್ಷನ್ ಆಫೀಸರಿಂದ ಕೇರಳ ಹೈ ಕೋರ್ಟು ಅಸಿಸ್ಟೆಂಟ್ ರಿಜಿಸ್ಟಾçರ್ ಆಗಿ ಉದ್ಯೋಗದಲ್ಲಿ ಭಡ್ತಿ ಪಡೆದ ದಿನೇಶ್ ಕೆ. ರವರನ್ನು ವೇದಿಕೆಯಲ್ಲಿ ಶಾಲು ಹಾಕಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭ ಅಧಿಕಾರಿಜ್ಯೋತಿ ಪಿ. ಉಪಸ್ಥರಿದ್ದರು.

Related Posts

Leave a Reply

Your email address will not be published.