ಭೀಮಾ ಜ್ಯೂವೆಲರ್ ನಿಂದ ಬ್ಯಾರಿಕೇಡ್ ಕೊಡುಗೆ -ಉಡುಪಿ ಸಂಚಾರಿ ಪೊಲೀಸ್ ಠಾಣೆಗೆ ಹಸ್ತಾಂತರ

ಉಡುಪಿಯ ಪ್ರತಿಷ್ಠಿತ ಚಿನ್ನಾಭರಣ ಮಳಿಗೆಯಾದ ಭೀಮಾ ಜ್ಯೂವೆಲರ್ ವತಿಯಿಂದ ಉಡುಪಿ ಸಂಚಾರಿ ಪೊಲೀಸ್ ಠಾಣೆಗೆ ಬ್ಯಾರಿಕೇಡ್‌ಗಳ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಉಡುಪಿ ಜಿಲ್ಲೆಯಲ್ಲಿರುವ ಹೆಸರಾಂತ ಚಿನ್ನಾಭರಣ ಸಂಸ್ಥೆಯಾದ ಭೀಮ ಜ್ಯೂವೆಲರ್ ಸಮಾಜಿಕ ಸೇವೆಯಲ್ಲೂ ಮುಂಚೂಣಿಯಲ್ಲಿದೆ. ಇದೀಗ ಉಡುಪಿ ಜಿಲ್ಲೆಯಲ್ಲಿ ಸುಗಮ ಸಂಚಾರದ ದೃಷ್ಟಿಯಿಂದ ಬ್ಯಾರಿಕೇಡ್‌ನ್ನು ಕೊಡುಗೆಯಾಗಿ ನೀಡಿದ್ದಾರೆ.

ಇದೇ ವೇಳೆ ಮಾತನಾಡಿದ ಭೀಮ ಜ್ಯುವೆಲ್ರ‍್ಸ್ನ ಸೀನಿಯರ್ ಮೇನೆಜರ್ ಕಾರ್ಪರೈಟ್ ಅಫೈರ್ಸ್ ಶ್ರೀಪತಿ ಭಟ್ ಅವರು, ಸಂಸ್ಥೆಯಿAದ ಆದಂತಹ ಉಳಿತಾಯದಲ್ಲಿ ಸಾಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಸಂಚಾರಿ ಠಾಣೆಗೆ ಬ್ಯಾರಿಕೇಡ್‌ಗಳನ್ನು ನೀಡಿದ್ದೇವೆ ಎಂದರು.

ಆನoತರ ಟ್ರಾಫಿಕ್ ಇನ್ಸ್ಪೆಕ್ಟರ್ ಅಬ್ದುಲ್ ಖಾದರ್ ಮಾತನಾಡಿ, ಸಂಚಾರಿ ಠಾಣೆಗೆ ಬ್ಯಾರಿಕೇಡ್‌ನ ಅವಶ್ಯಕತೆ ಇತ್ತು. 20 ಬ್ಯಾರಿಕೇಡ್‌ಗಳನ್ನು ಉಡುಪಿ ಸಂಚಾರಿ ಠಾಣೆಗೆ ಭೀಮ ಜ್ಯೂವೆಲರ್ ಸಂಸ್ಥೆಯವರು ಕೊಡುಗೆಯಾಗಿ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತ ನಿತ್ಯನಂದ ಒಳಕಾಡು, ಭೀಮ ಜ್ಯೂವೆಲರ್ ಶೋರೂಂ ಮ್ಯಾನೇಜರ್ ಅಶ್ವಜಿತ್ ರಾವ್, ಅಸೋಸಿಯೆಟ್ ಪ್ರಸನ್ನ ರಾವ್ , ಡೆಪ್ಯೂಟಿ ಮ್ಯಾನೇಜರ್ ಜಿ ರಾಘವೇಂದ್ರ ಭಟ್ ಮತ್ತಿತರರು ಉಪಸ್ಥಿತರಿದ್ದರು.