Home Page 2

ಯಾವುದೇ ಕಾರಣಕ್ಕೂ ಸಾರ್ವಜನಿಕರನ್ನು ಸತಾಯಿಸಬಾರದು ಲೋಕಾಯುಕ್ತ ಉಪ ಅಧೀಕ್ಷಕ ಚೆಲುವರಾಜು ಹೇಳಿಕೆ

ಕಡಬ: ಸಾರ್ವಜನಿಕರಿಗೆ ನಿಷ್ಪಕ್ಷಪಾತ ಸೇವೆ ನೀಡುವುದೇ ಅಧಿಕಾರಿಗಳ ಕೆಲಸ, ಯಾವುದೇ ಕಾರಣಕ್ಕೆ ಸಾರ್ವಜನಿಕರನ್ನು ಸತಾಯಿಸಬಾರದು ಎಂದು ಕರ್ನಾಟಕ ಲೋಕಾಯುಕ್ತ ಪೋಲಿಸ್‌ನ ದ.ಕ. ಜಿಲ್ಲಾ ಉಪ ಅಧೀಕ್ಷಕ ಚೆಲುವರಾಜು ಅವರು ಹೇಳಿದರು ಅವರು ಕಡಬ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಲೋಕಾಯುಕ್ತ ಪೋಲಿಸರಿಂದ ನಡೆದ ಅರಿವು ಜಾಗೃತಿ ಸಪ್ತಾಹದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ

ಅರೆಹೊಳೆಯಲ್ಲಿ ಶ್ರೀ ದುರ್ಗಾಂಬಾ ಟ್ರೇಡರ್ಸ್ ವ್ಯಾಪಾರ ಮಳಿಗೆ

ಕಳೆದ ಹಲವಾರು ವರುಷಗಳಿಂದ ಮಸ್ಕಿಯ ವಿನಾಯಕ ಹೋಟೆಲ್ ಎದುರುಗಡೆ ಕಾರ್ಯನಿರ್ವಹಿಸುತ್ತಿದ್ದ ಶ್ರೀ ದುರ್ಗಾಂಬಾ ಟ್ರೇಡರ್ಸ್ ವ್ಯಾಪಾರ ಮಳಿಗೆಯು ಈಗ ಅವರ ಸ್ವಂತ ವಿಶಾಲ ಜಾಗವಾದ ಅರೆಹೊಳೆಯಲ್ಲಿ ಶುಭಾರಂಭಗೊಂಡಿತು. ನೂತನ ಮಳಿಗೆಯಲ್ಲಿ ಹೊಸ ಹೊಸ ಮಾದರಿಯ ಪಿಠೋಪಕರಣಗಳು, ಸಾನಿಟರಿ ವಸ್ತುಗಳು, ಪೈಂಟ್ಸ್ ಹಾಗೂ ಗುಣಮಟ್ಟದ ಕಟ್ಟಡ ಸಾಮಗ್ರಿಗಳು ಕೈಗೆಟುಕುವ ದರದಲ್ಲಿ

ಬೆಳ್ವೆ ಗುಮ್ಮಹೊಲ ಚರ್ಚ್ ಫಾದರ್ ಬದಲಾವಣೆಗೆ ಆಗ್ರಹ ನ್ಯಾಯ ಸಿಗದಿದ್ದರೆ ಕ್ರೈಸ್ತ ಧರ್ಮ ತೊರೆಯಲೂ ಸಿದ್ಧ

ಕುಂದಾಪುರ: ಬೆಳ್ವೆಯ ಗುಮ್ಮಹೊಲ ಎಂಬಲ್ಲಿನ ಸಂತ ಜೋಸೆಫರ ಚರ್ಚ್ ಧರ್ಮಗುರುಗಳು ಭಕ್ತಾದಿಗಳಿಗೆ ಅವಹೇಳನ ಮಾಡಿ ಜೀವ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಚರ್ಚ್ ಮುಂಭಾಗ ಭಕ್ತರು ಪ್ರತಿಭಟನೆ ನಡೆಸಿದ್ದು, ವಾರದೊಳಗೆ ಧರ್ಮಗುರುಗಳ ಬದಲಾವಣೆ ಮಾಡದಿದ್ದಲ್ಲಿ ಪ್ರತಿಭಟನೆ ಜೊತೆಗೆ ಕ್ರೈಸ್ತ ಧರ್ಮ ತ್ಯಜಿಸುವ ಎಚ್ಚರಿಕೆ ನೀಡಿದ್ದಾರೆ. ಸುಮಾರು 60 ವರ್ಷಗಳ ಇತಿಹಾಸವಿರುವ

ಶ್ರೀಮಂತರನ್ನು ಮತ್ತಷ್ಟು ಶ್ರೀಮಂತಗೊಳಿಸಲು ಸರ್ಕಾರ ಪಣತೊಟ್ಟಂತಿದೆ : ಮಾಜಿ ಸಚಿವ ವಿನಯ ಕುಮಾರ್ ಸೊರಕೆ

ಬೆಲೆ ಏರಿಕೆಯಿಂದ ಜನ ಬೇಸತ್ತು ಜೀವನ ಸಾಗಿಸುವುದು ಕಷ್ಟ ಕರ ಪರಿಸ್ಥಿತಿ ಯಾಗಿದೆ.. ಶ್ರೀಮಂತರನ್ನು ಶ್ರೀಮಂತರಾಗಿಸುವ ಕೆಲಸ ಕಾರ್ಯ ವನ್ನು ಕೇಂದ್ರ ಹಾಗು ರಾಜ್ಯ ಸರಕಾರ ಮಾಡುತಿದೆ.. ಇದೀಗ ಬಿಜೆಪಿ ಪಕ್ಷದ ನಿಲುವು ಜನ ಸಾಮಾನ್ಯರಿಗೆ ಅರಿವಾಗುತ್ತಿದ್ದು ಆ ನಿಟ್ಟಿನಲ್ಲಿ ಕಾಂಗ್ರೆಸ್ ನತ್ತ ಯುವ ಜನರ ಒಲವು ಜಾಸ್ತಿಯಾಗುತಿದ್ದು..ಮುಂದಿನ ದಿನಗಳಲ್ಲಿ ಕಾಂಗ್ರೆಸ್

ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ

ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದದಲ್ಲಿ ಡಿ.21 ರಿಂದ 26 ರ ತನಕ ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ ಭಾನುವಾರ ದೇವಸ್ಥಾನದ ಚಿನ್ಮಯಿ ಸಭಾಂಗಣದಲ್ಲಿ ನಡೆಯಿತು. ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಅವರ ಅವರು ಸಭೆಯ ಅಧ್ಯಕ್ಷತೆ ವಹಿಸಿ, ಕಳೆದ

ಮಾಸಿಕ ವೇತನ ಪಾವತಿ ವಿಳಂಬ : ಕೆಎಸ್‌ಆರ್‌ಟಿಸಿ ಮಜ್ದೂರ್ ಸಂಘದ ಸದಸ್ಯರಿಂದ ಧರಣಿ

ಪುತ್ತೂರು: ಮಾಸಿಕ ವೇತನ ಪಾವತಿ ವಿಳಂಬ ಮತ್ತು ನಿವೃತ್ತ ನೌಕರರ ನಿವೃತ್ತಿ ಸೌಲಭ್ಯ ಬಿಡುಗಡೆ ವಿಳಂಬವನ್ನು ನಡೆಸುತ್ತಿರುವ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿಯ ಅಧಿಕಾರಿಗಳ ಧೋರಣೆಯನ್ನು ಖಂಡಿಸಿ ಪುತ್ತೂರು ವಿಭಾಗ ಕೆಎಸ್‌ಆರ್‌ಟಿಸಿ ಮಜ್ದೂರ್ ಸಂಘದ ಸದಸ್ಯರು ನಡೆಸುತ್ತಿರುವ ಧರಣಿ ಸತ್ಯಾಗ್ರಹ ಶುಕ್ರವಾರ ಎರಡನೇ ದಿನ ತಲುಪಿತು. ಸಂಘದ ಪುತ್ತೂರು ಘಟಕದ ಅಧ್ಯಕ್ಷ

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು-ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮಧ್ಯೆ ಒಡಂಬಡಿಕೆ

ಮೂಡುಬಿದಿರೆ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ನಡುವೆ ತಾಂತ್ರಿಕ ಒಡಂಬಡಿಕೆಗೆ ನಡೆದಿದೆ. ಒಡಂಬಡಿಕೆ ಪ್ರಕಾರ ಗೋವಾ-ಕರ್ನಾಟಕ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕುಂದಾಪುರದಿಂದ ಮುರ್ಡೇಶ್ವರದವರೆಗೆ 73 ಕಿ,ಮೀ ಉದ್ದದ ಹೆದ್ದಾರಿಯ ದತ್ತು ಸ್ವೀಕಾರ ಮತ್ತು ಮಂಗಳೂರು ನಗರ ಹೊರವಲಯದ ಮುಲ್ಕಿ, ಕಿನ್ನಿಗೋಳಿ,

ಮನೆಗೆ ಸಿಡಿಲು ಬಡಿದು ಮೂವರಿಗೆ ಗಾಯ: ಅಳಿಕೆಯ ಕಲ್ಲೆಂಚಿನಪಾದೆಯಲ್ಲಿ ನಡೆದ ಘಟನೆ

ವಿಟ್ಲ: ಮನೆಗೆ ಸಿಡಿಲು ಬಡಿದು ಮೂವರು ಗಾಯಗೊಂಡು ಮನೆ ಹಾನಿಗೊಂಡ ಘಟನೆ ಅಳಿಕೆ ಗ್ರಾಮ ಕಲ್ಲೆಂಚಿನಪಾದೆ ಎಂಬಲ್ಲಿ ಸಂಭವಿಸಿದೆ. ಅಳಿಕೆ ಗ್ರಾಮ ಕಲ್ಲೆಂಚಿನಪಾದೆ ಶೀನ ನಳಿಕೆ ಅವರಿಗೆ ಸೇರಿದ ಮನೆಗೆ ರಾತ್ರಿ ಭಾರೀ ಪ್ರಮಾಣ ಸಿಡಿಲು ಬಡಿದಿದೆ. ಇದರಿಂದ ಶೀನ ನಳಿಕೆ, ಅವರ ಪತ್ನಿ ಸುಶೀಲ, ಮಕ್ಕಳಾದ ವಿದ್ಯಾ ಮತ್ತು ವಿನಯ ಅವರು ಗಾಯಗೊಂಡಿದ್ದಾರೆ. ಘಟನೆಯ ತೀವ್ರತೆಗೆ

ಪುತ್ತೂರಿನಲ್ಲಿ ವಿದ್ಯಾರ್ಥಿಗೆ ಹಲ್ಲೆ ಆರೋಪ: ಬೈಕ್ ಸವಾರರು ಪೊಲೀಸ್ ವಶಕ್ಕೆ

ಪುತ್ತೂರು: ಕಾಲೇಜು ಬಿಟ್ಟು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗೆ ಬೈಕ್ ಡಿಕ್ಕಿ ಹೊಡೆದುದನ್ನು ವಿಚಾರಿಸಿದ ವೇಳೆ ಆತನಿಗೆ ಹಲ್ಲೆ ನಡೆಸಿದ ಮತ್ತು ಇದನ್ನು ವಿಚಾರಿಸಲು ಬಂದಾತನಿಗೂ ಬೈಕ್ ಸವಾರರು ಹಲ್ಲೆ ನಡೆಸಿದ ಘಟನೆ ಅ.21ರಂದು ಸಂಜೆ ವೇಳೆ ಕೊಂಬೆಟ್ಟು ಸ.ಪ.ಪೂ ಕಾಲೇಜು ಬಳಿ ನಡೆದಿದೆ. ತಾರಿಗುಡ್ಡೆ ಅಬ್ದುಲ್ ರಜಾಕ್‍ರವರ ಪುತ್ರ, ಕೊಂಬೆಟ್ಟು

ನಕ್ಸಲ್ ಸಂಬಂಧ ಆರೋಪ ಪ್ರಕರಣ: ವಿಠಲ ಮಲೆಕುಡಿಯ, ಲಿಂಗಣ್ಣ ಮಲೆಕುಡಿಯ ನಿರ್ದೋಷಿ

ವಿಠ್ಠಲ ಮಲೆಕುಡಿಯ ಮತ್ತು ಅವರ ತಂದೆಯವರ ಮೇಲೆ ನಕ್ಸಲೀಯರೆಂದು ಹೂಡಲಾಗಿದ್ದ ಮೊಕದ್ದಮೆಯಲ್ಲಿ ಅವರು ನಿರ್ದೋಷಿಗಳೆಂದು ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯವು ಇಂದು ತೀರ್ಪು ನೀಡಿದೆ. ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿರುವ ಡಿವೈಎಫ್‌ಐ ಕರ್ನಾಟಕ ರಾಜ್ಯ ಸಮಿತಿ ”ಇದು ನ್ಯಾಯಯುತ ಹೋರಾಟಕ್ಕೆ, ಸತ್ಯಕ್ಕೆ ಸಂದ ಜಯ. ಈ ತೀರ್ಪು ಆಳುವ ಸರ್ಕಾರ ಮತ್ತು ಸ್ಥಾಪಿತ