Home Page 3

ಮೀರಾ ಕ್ಲೀನ್ ಪ್ಯೂಯಲ್ ಲಿಮಿಡೆಟ್ ಬಗೆಗೆ ಕಾರ್ಯಾಗಾರ

ಪರಿಸರಸ್ನೇಹಿ ಮತ್ತು ರೈತಸ್ನೇಹಿ ಸಂಸ್ಥೆ ಮೀರಾ ಕ್ಲೀನ್ ಪ್ಯೂಯಲ್ ಲಿಮಿಡೆಟ್ ( ಎಂ.ಸಿ.ಎಲ್) ಘಟಕವನ್ನು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಪರಿಚಯಿಸುವ ಉದ್ದೇಶದಿಂದ ಸ್ವರ್ಣಮಂದಿರದಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ,

ವ್ಯಕ್ತಿ ಕಾನೂನಿನ ಬಗ್ಗೆ ಸಾಮಾನ್ಯ ತಿಳುವಳಿಕೆ ಹೊಂದಿರಬೇಕು: ಹಿರಿಯ ಸಿವಿಲ್ ನ್ಯಾಯಾಧೀಶೆ ಶಿಲ್ಪ ಜಿ ತಿಮ್ಮಾಪುರ ಹೇಳಿಕೆ

ಬಂಟ್ವಾಳ: ಕಾನೂನಿನ ಅರಿವಿಲ್ಲದೆ ಮಾಡಿದ ತಪ್ಪುಗಳಿಗೆ ಶಿಕ್ಷೆಯಿಂದ ವಿನಾಯಿತಿ ಇರುವುದಿಲ್ಲ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಕಾನೂನಿನ ಬಗ್ಗೆ ಸಾಮಾನ್ಯ ತಿಳುವಳಿಕೆಯನ್ನು ಹೊಂದಿರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಶಿಲ್ಪ ಜಿ ತಿಮ್ಮಾಪುರ ಹೇಳಿದರು. ಅವರು ತುಂಬೆ ಗ್ರಾಮ ಪಂಚಾಯತಿ, ತಾಲೂಕು ಕಾನೂನುಗಳ ಸೇವಾ ಸಮಿತಿ ಬಂಟ್ವಾಳ, ಶಿಶು ಅಭಿವೃದ್ಧಿ ಯೋಜನೆ

ಪ್ಯಾಸೆಂಜರ್ ರೈಲುಗಳನ್ನು ಪುನಃರಾರಂಭಿಸಬೇಕು : ಎಐಟಿಯುಸಿ ಮಂಜೇಶ್ವರ ಮಂಡಲ ಸಮಿತಿಯಿಂದ ಪ್ರತಿಭಟನೆ

ಮಂಜೇಶ್ವರ: ಕೇಂದ್ರ ಸರಕಾರವು ರೈಲ್ವೆ ಇಲಾಖೆಯನ್ನು ಖಾಸಗಿಕರಣಗೊಳಿಸುವುದನ್ನು ನಿಲ್ಲಿಸಿ, ಪ್ಯಾಸಂಜರ್ ರೈಲುಗಳನ್ನು ಪುನಃರಾರಂಬಿಸಬೇಕು. ಹೆಚ್ಚಿಸಿದ ರೈಲ್ವೆ ಪ್ಲಾಟ್ ಫಾರ್ಮ್ ಶುಲ್ಕ ರದ್ದುಗೊಳಿಸಬೇಕು, ಸೀಸನ್ ಟಿಕೆಟ್ ಮತ್ತು ಯಾತ್ರಾ ಸೌಲಭ್ಯಗಳನ್ನು ಪುನಃ ಸ್ಥಾಪಿಸಬೇಕು ಮೊದಲಾದ ಬೇಡಿಕೆಗಳನ್ನು ಒತ್ತಾಯಿಸಿ ಎಐಟಿಯುಸಿ ಮಂಜೇಶ್ವರ ಮಂಡಲ ಸಮಿತಿ ವತಿಯಿಂದ

ಪಿಎಂ ಕೇರ್ಸ್ ಯೋಜನೆ ಪಾರದರ್ಶಕತೆ ಹೊಂದಿರಲಿಲ್ಲ: ಕಾಂಗ್ರೆಸ್ ಮುಖಂಡ ವೀರಪ್ಪ ಮೊಯ್ಲಿ

ಕಾರ್ಕಳ: ಕೋವಿಡ್ ಸಂದರ್ಭ ದೇಣಿಗೆ ಸಂಗ್ರಹಕ್ಕೆ ಬಳಸಿದ ವೇದಿಕೆ ಪಿಎಂ ಕೆರ್ಸ್ ಯೋಜನೆಯು ಪಾರದರ್ಶಕತೆಯನ್ನು ಹೊಂದಿರಲಿಲ್ಲ. ಹಣ ಸಂಗ್ರಹ ಹಾಗೂ ಖರ್ಚುಗಳ ಲೆಕ್ಕ ವಿ ಡದ ಈ ನಿಧಿಯ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಪ್ರತಿಬಿಂಬಿಸುತ್ತದೆ. ಕೇಂದ್ರದ ಮಾಜಿ ಸಚಿವ ಮಾಜಿ ಮುಖ್ಯಮಂತ್ರಿ ಯಂ. ವೀರಪ್ಪ ಮೊಯ್ಲಿ ಟೀಕಿಸಿದರು   ಕಾರ್ಕಳ ಪ್ರವಾಸಿ

ಸಂಬಳ ನೀಡುವಂತೆ ಒತ್ತಾಯಿಸಿ ಪುತ್ತೂರು ಕೆ.ಎಸ್.ಆರ್.ಟಿ.ಸಿ ನೌಕರರ ಧರಣಿ ಸತ್ಯಾಗ್ರಹ….

ಸಂಬಳ ನೀಡದೆ ಸತಾಯಿಸುತ್ತಿರುವ ಕೇಂದ್ರ ಕಛೇರಿಯ ಅಧಿಕಾರಿಗಳ ವಿರುದ್ಧ ಕೆ.ಎಸ್.ಆರ್.ಟಿ.ಸಿ ನೌಕರರು ಧರಣೆ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ. ಪುತ್ತೂರು ಕೆ.ಎಸ್.ಆರ್.ಟಿ.ಸಿ ಘಟಕದ ಸಿಬ್ಬಂದಿಗಳು ಬಿಎಂಎಸ್ ಸಂಘಟನೆಯ ನೇತೃತ್ವದಲ್ಲಿ ಈ ಪ್ರತಿಭಟನೆಯನ್ನು ಆರಂಭಿಸಿದ್ದು, ಪುತ್ತೂರಿನ ಅಮರ್ ಜವಾನ್ ಜ್ಯೋತಿ ಬಳಿ ಈ ಧರಣಿ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ.

ಭತ್ತ ಕಟಾವು ಯಂತ್ರ ಬಾಡಿಗೆ ದರಕ್ಕೆ ಬೇಸತ್ತ ರೈತರು

ಭತ್ತ ಕಟಾವಿಗೆ ಯಂತ್ರ ಬಂದಿದ್ದು ಗಂಟೆಯೊಂದಕ್ಕೆ 2,500 ರೂ ದುಬಾರಿ ದರ ವಿಧಿಸುತ್ತಿದ್ದು, ಮುಂದಿನ ಬಾರಿ ಭತ್ತದ ಬೇಸಾಯ ಮಾಡಬೇಕೋ ಬೇಡವೋ ಎಂಬ ಚಿಂತೆ ಕಾಡುತ್ತಿದೆ ಎಂದು ಮಟ್ಟು ಭಾಗದ ರೈತರು ತಮ್ಮ ಹತಾಶಾ ಭಾವನೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಒಂದೆಡೆ ಗದ್ದೆಗಳನ್ನು ಹಡಿಲು ಬಿಟ್ಟಲ್ಲಿ ಸರಕಾರ ಕ್ರಮ ತೆಗೆದುಕೊಳ್ಳುವ ಭೀತಿ, ಬೇಸಾಯ ಕೈಗೊಂಡರೆ ನಷ್ಟವನ್ನು

ಗೌರಿ ಕೊರಗ ಅವರಿಗೆ ವಾಲ್ಮೀಕಿ ಪ್ರಶಸ್ತಿ ಪ್ರಧಾನ

ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ನೀಡಲಾಗುವ ಪ್ರತಿಷ್ಠಿತ ಮಹರ್ಷೀ ವಾಲ್ಮೀಕಿ ಪ್ರಶಸ್ತಿ ಪ್ರಧಾನ ಸಮಾರಂಭವು ಇಂದು ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 2020 ಹಾಗೂ 2021 ರ ಸಾಲಿನಲ್ಲಿ ಒಟ್ಟು 11 ಮಂದಿಯನ್ನು ಈ ಪ್ರಶಸ್ತಿಗೆ ಸರಕಾರ ಆಯ್ಕೆ ಮಾಡಿತ್ತು. ಮೈಸೂರು

ಐವನ್ ಡಿಸೋಜಾ ನಿವಾಸಕ್ಕೆ ಬಜರಂಗದಳದಿಂದ ಮುತ್ತಿಗೆಗೆ ಯತ್ನ

ಕಾಂಗ್ರೆಸ್ ಮುಖಂಡ ಐವಾನ್ ಡಿಸೋಜಾ ಅವರ ನಗರದ ವೆಲೆನ್ಸಿಯಾದಲ್ಲಿರುವ ಮನೆಗೆ ಬಜರಂಗದಳದ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಮನೆಗೆ ನುಗ್ಗಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೇಸರಿ ಬಣ್ಣ ಮತ್ತು ಕೇಸರಿ ಶಾಲಿನ ಬಗ್ಗೆ ಐವನ್ ಡಿಸೋಜ ಅವಹೇಳನಕಾರಿಯಾಗಿ ಮಾತಾಡಿದ್ದಾರೆ ಎಂದು ಬಜರಂಗದಳ ಕಾರ್ಯಕರ್ತರ ಆಕ್ರೋಶ

ಮನೆ ಟೆರೇಸ್‍ನಲ್ಲಿ ಆಟವಾಡುತಿದ್ದ ಬಾಲಕ ವಿದ್ಯುತ್ ಶಾಕ್ ತಗಲಿ ಮೃತ್ಯು

ಮಂಜೇಶ್ವರ: ಮನೆ ಟೆರೇಸ್ ನಲ್ಲಿ ಆಟವಾಡುತಿದ್ದ ಹತ್ತು ವರ್ಷದ ಬಾಲಕನೊಬ್ಬ ವಿದ್ಯುತ್ ಶಾಕ್ ತಗಲಿ ಸಾವನ್ನಪ್ಪಿದ್ದಾನೆ. ಮೀಂಜ ಮೊರತ್ತಣೆ ಆಟೋ ಚಾಲಕ ಸದಾಶಿವ ಶೆಟ್ಟಿ- ಯಶೋಧ ದಂಪತಿಗಳ ಪುತ್ರ ಮೊಕ್ಷಿತ್ ರಾಜ್ ಸಾವನ್ನಪ್ಪಿದ ದುರ್ದೈವಿ. ತಲೇಕ್ಕಲ ಸರಕಾರಿ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿಯಾಗಿರುವ ಮೋಕ್ಷಿತ್ ರಾಜ್ ಆಟವಾಡುತಿದ್ದ ಟೆರೇಸ್ ಮೇಲಿನಿಂದ ಪಕ್ಕದ

ಅಕಾಲಿಕ ಮಳೆಯಿಂದಾಗಿ ಎಲ್ಲೆಡೆ ಭತ್ತದ ಪೈರುಗಳ ನಾಶ-ಅಪಾರ ಬೆಳೆ ಹಾನಿ

ಅಕಾಲಿಕ ಮಳೆಯಿಂದಾಗಿ ಬೈಲು ಸಾಲಿನ ಭತ್ತದ ಗದ್ದೆಗಳಲ್ಲಿ ಮಳೆ ನೀರು ಸಂಗ್ರಹವಾಗಿದ್ದು ಕಾಪು ತಾಲೂಕಿನ ವಿವಿಧೆಡೆ ಬೆಳೆದು ನಿಂತ ಭತ್ತದ ಪೈರುಗಳು ಗದ್ದೆಯಲ್ಲಿ ನಾಶಗೊಂಡ ಪರಿಣಾಮ ರೈತರು ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿ ಭೀತಿಯನ್ನು ಎದುರಿಸುವಂತಾಗಿದೆ. ಕರಾವಳಿಯಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಭತ್ತದ ಗದ್ದೆಗಳಲ್ಲಿ ಬೆಳೆದು