HomeFresh Newsಉಡುಪಿ: ಸೆ.2 ಮತ್ತು 3ರಂದು ’ಏರ್‌ಬ್ರಷ್ ಮೇಕಪ್ ಟ್ರೇನಿಂಗ್’ ಕಾರ್ಯಾಗಾರ

ಉಡುಪಿ: ಸೆ.2 ಮತ್ತು 3ರಂದು ’ಏರ್‌ಬ್ರಷ್ ಮೇಕಪ್ ಟ್ರೇನಿಂಗ್’ ಕಾರ್ಯಾಗಾರ

ಅಖಿಲ ಕರ್ನಾಟಕ ವುಮೆನ್ಸ್ ಪಾರ್ಲರ್ ಅಸೋಸಿಯೇಷನ್ ಉಡುಪಿ ಜಿಲ್ಲೆ ವತಿಯಿಂದ ಬ್ಯೂಟಿ ರಂಗದ ಮಹಿಳೆಯರಿಗಾಗಿ ಎರಡು ದಿನಗಳ ವಿಶೇಷ ’ಏರ್‌ಬ್ರಷ್ ಮೇಕಪ್ ಟ್ರೇನಿಂಗ್’ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

ಸೌಂದರ್ಯ ವರ್ಧನೆ ಕ್ಷೇತ್ರದಲ್ಲಿ ಪ್ರತಿದಿನವೂ ಹೊಸ ತಂತ್ರಜ್ಞಾನ ಹಾಗೂ ಹೊಸ ಕೌಶಲ್ಯಗಳು ಕಾಲಿಡುತ್ತಿವೆ. ಈ ಆಧುನಿಕ ಮೇಕಪ್ ಟ್ರೆಂಡ್‌ಗೆ ತಕ್ಕಂತೆ ಉಡುಪಿ ಜಿಲ್ಲೆಯ ಬ್ಯೂಟಿಷಿಯನ್‌ಗಳನ್ನು ಸಜ್ಜುಗೊಳಿಸಲು ಅಖಿಲ ಕರ್ನಾಟಕ ವುಮೆನ್ಸ್ ಪಾರ್ಲರ್ ಅಸೋಸಿಯೇಷನ್ ಮುಂಚೂಣಿಯಲ್ಲಿದೆ.

ಸಂಸ್ಥಾಪಕ ಅಧ್ಯಕ್ಷರು ಹಾಗೂ ಸಮಿತಿಯ ಪ್ರಮುಖ ನೇತೃತ್ವದಲ್ಲಿ ಬ್ಯೂಟಿ ಉದ್ಯಮಕ್ಕೆ ಹೊಸ ಆಯಾಮ ನೀಡುವ ಉದ್ದೇಶದಿಂದ ಸೆಪ್ಟೆಂಬರ್ 2 ಮತ್ತು 3 ರಂದು ಎರಡು ದಿನಗಳ ಏರ್‌ಬ್ರಷ್ ಮೇಕಪ್ ಟ್ರೇನಿಂಗ್ ಹಮ್ಮಿಕೊಳ್ಳಲಾಗಿದೆ. ಖ್ಯಾತ ಮೇಕಪ್ ಆರ್ಟಿಸ್ಟ್ ಮಿಸ್ ಅಮಿಷಾ ಸಾಲುಂಖೆ ಅವರು ಈ ಕಾರ್ಯಾಗಾರವನ್ನು ನಡೆಸಿಕೊಡಲಿದ್ದು, ಆಧುನಿಕ ಏರ್‌ಬ್ರಷ್ ತಂತ್ರಜ್ಞಾನದ ಸೂಕ್ಷ್ಮತೆಗಳನ್ನು ಪ್ರಾಯೋಗಿಕವಾಗಿ ತರಬೇತಿ ನೀಡಲಿದ್ದಾರೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಗಿರುವ ಏರ್‌ಬ್ರಷ್ ಮೇಕಪ್ ಕೌಶಲ್ಯ ಕಲಿಕೆ.ತರಬೇತಿಯ ಎರಡು ದಿನಗಳಲ್ಲಿ ಭಾಗವಹಿಸುವವರಿಗೆ ’ಏರ್‌ಬ್ರಷ್ ಮೇಕಪ್ ಮೆಷಿನ್’ ಮೇಲೆ ಬರೋಬ್ಬರಿ 50% ರಿಯಾಯಿತಿ ಸಿಗಲಿದೆ.

ನಿಮ್ಮ ಬಳಿ ಈಗಾಗಲೇ ಇರುವ ಸಾಮಾನ್ಯ ಫೌಂಡೇಶನ್‌ನ್ನೇ ತಂದುAIRBRUSH MAKEUP TECHNIQUEಅನ್ನು ಪ್ರಾಕ್ಟಿಕಲ್ TRAINING ಮೂಲಕ ಕಲಿಯಬಹುದು.
ನಿಮ್ಮದೇ ಫೌಂಡೇಶನ್ ಬಳಸಿ ಹೊಸ ತಂತ್ರಜ್ಞಾನವನ್ನು ಕಲಿಯಿರಿ, ನಿಮ್ಮ ಮೇಕಪ್ ಕೌಶಲ್ಯವನ್ನು ಇನ್ನಷ್ಟು ಅಭಿವೃದ್ಧಿಪಡಿಸಿಕೊಳ್ಳಿ ಮತ್ತು ನಿಮ್ಮBEAUTY BUSINESS ಗೆ PROFESSIONAL TOUCH ನೀಡಿ.

AIRBRUSH MAKEUP MACHINE ಅನ್ನು ಕೇವಲ3,500ಕ್ಕೆ ಪಡೆಯುವ ವಿಶೇಷ ಅವಕಾಶವಿದೆ.

ನಿಮ್ಮ ಬ್ಯೂಟಿ ಬಿಸಿನೆಸ್‌ಗೆ ಹೊಸ ಯಶಸ್ಸು ನೀಡಲು ಮತ್ತು ಸ್ವಾವಲಂಬನೆಯ ಕನಸಿಗೆ ರೆಕ್ಕೆ ಕಟ್ಟಲು ಇದು ನಿಜಕ್ಕೂ ಸುವರ್ಣಾವಕಾಶ. ಸೆಪ್ಟೆಂಬರ್ 2 ಮತ್ತು 3 ರಂದು ನಡೆಯಲಿರುವ ಈ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಬ್ಯೂಟಿಷಿಯನ್ ಹಾಗೂ ಆಸಕ್ತ ಮಹಿಳೆಯರು ಭಾಗವಹಿಸಿ ಇದರ ಸೌಲಭ್ಯ ಪಡೆಯಬಹುದಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments