ನೇತ್ರ ಜ್ಯೋತಿ ಕಾಲೇಜಿನಲ್ಲಿ ಉಪನ್ಯಾಸಕರಿಗೆ ಪ್ರಶಿಕ್ಷಣ ಕಾರ್ಯಾಗಾರ
ಉಡುಪಿಯ ಪ್ರತಿಷ್ಠಿತ ನೇತ್ರ ಜ್ಯೋತಿ ಅಲೈಡ್ ಹೆಲ್ತ್ ಸೈನ್ಸಸ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಉಪನ್ಯಾಸಕರಿಗೆ ಪ್ರಶಿಕ್ಷಣ ಕಾರ್ಯಗಾರವನ್ನು ಏರ್ಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಉಡುಪಿಯ ಡಾ. ಜಿ. ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತರ ವಿಭಾಗದ ಮುಖ್ಯಸ್ಥರಾದ ಡಾ. ನಿಕೇತನ ರವರು ಆಗಮಿಸಿ, ಶಿಕ್ಷಕ ವೃತ್ತಿ ಶ್ರೇಷ್ಠವಾದ ವೃತ್ತಿ ಶಿಕ್ಷಕರು ನಿರಂತರ ಅಧ್ಯಯನಶೀಲರಾಗಿರಬೇಕು, ಧೈರ್ಯ, ತಾಳೆ, ಸಮಯ ಪಾಲನೆ, ಮತ್ತು ಸ್ವೀಕರಿಸುವ ಗುಣಗಳನ್ನು ರೂಡಿಸಿಕೊಂಡರೆ ಶ್ರೇಷ್ಠ ಶಿಕ್ಷಕರಾಗಲು ಸಾಧ್ಯ ಎಂದು ಉದಾಹರಣೆ ಸಹಿತ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸಿಓಓ ಡಾ. ಗೌರಿ ಪ್ರಭು, ಪ್ರಾಚಾರ್ಯರಾದ ರಾಜೀಬ್ ಮಂಡಲ್, ಎಚ್.ಆರ್. ಶ್ರೀಮತಿ ತಾರಾ ಶಶಿಧರ್, ಕಾರ್ಡಿನೇಟರ್ ಗಳಾದ ಶ್ರೀ ಮಾಧವ್ ಪೂಜಾರಿ, ಶ್ರೀ ಸಚಿನ್ ಶೇಟ್ ಹಾಗೂ ಉಪನ್ಯಾಸ ವರ್ಗದವರು ಹಾಜರಿದ್ದರು. ಮೊದಲಿಗೆ ಕು. ವಿಜೇತ ಬಂಗೇರ ಸ್ವಾಗತಿಸಿ, ಕು. ಆಯಿಷ್ ವಂದಿಸಿದರು. ಕು. ಸಂಪ್ರೀತ ಕಾರ್ಯಕ್ರಮವನ್ನು ನಿರ್ವಹಿಸಿದರು.