HomeFresh Newsರಾಂಕ್ ಸ್ಟೂಡೆಂಟ್ ಕಡಿಮೆ ಮಾರ್ಕ್ ಬಂದಿದ್ದಕ್ಕೆ ಆತ್ಮಹತ್ಯೆ

ರಾಂಕ್ ಸ್ಟೂಡೆಂಟ್ ಕಡಿಮೆ ಮಾರ್ಕ್ ಬಂದಿದ್ದಕ್ಕೆ ಆತ್ಮಹತ್ಯೆ

ರಾಂಕ್ ಸ್ಟೂಡೆಂಟ್ ಪರೀಕ್ಷೆಯಲ್ಲಿ ಕಡಿಮೆ ಮಾರ್ಕ ಪಡೆದಳೆಂದು ಕಾಲೇಜಿನಲ್ಲಿ ಅವಮಾನಿಸಿದ್ದಕ್ಕೆ ವಿಧ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿಯ ಪೆರ್ಡೂರಿನಲ್ಲಿ ನಡೆದಿದೆ. ಪೆರ್ಡೂರು ನಿವಾಸಿ ಸುರೇಶ್ ಮೆಂಡನ್ ಪುತ್ರಿ ತೃಪ್ತಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.

ವಿದ್ಯಾರ್ಥಿನಿಯು ಖಾಸಗಿ ಸಂಸ್ಥೆಯಲ್ಲೇ ಪ್ರೌಢಶಿಕ್ಷಣ ಪಡೆದು ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ಹಿನ್ನೆಲೆ ಪಿಯುಸಿ ವಿಜ್ಞಾನ ವಿಭಾಗಕ್ಕೆ ಕಾಲೇಜಿನಿಂದ ಫ್ರೀ ಸೀಟ್ ಪಡೆದಿದ್ದರು. ಆದರೆ ಈ ಬಾರಿಯ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ಕಾರಣ ಆಡಳಿತ ಮಂಡಳಿ ತೃಪ್ತಿಯನ್ನು ಬೈದಿದ್ದಾರೆ ಎಂದು ಹೇಳಲಾಗಿದ್ದು, ಕಡಿಮೆ ಮಾರ್ಕ್ ಬಂದಿದ್ದಕ್ಕೆ ಫೈನ್ ಹಾಗೂ ಸಂಪೂರ್ಣ ಫೀಸ್ ಕಟ್ಟಬೇಕೆಂದಿದ್ದಾರೆ ಎಂದು ಕಳೆದ ಮೂರು ದಿನಗಳ ಹಿಂದೆ ತೃಪ್ತಿ ತಂದೆಯ ಬಳಿ ವಿಧ್ಯಾರ್ಥಿನಿ ಹೇಳಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಈ ಹಿನ್ನಲೆ ಮಾನಸಿಕವಾಗಿ ನೊಂದ ತೃಪ್ತಿ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ವಿದ್ಯಾರ್ಥಿನಿಯ ತಂದೆ ಸುರೇಶ್ ಮೆಂಡನ್ ಅವರು ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments