ಫೆಬ್ರವರಿ 14: ಶಿವಪಾಡಿಯಲ್ಲಿ ಪುಂಗನೂರು ಗೋವುಗಳೊಂದಿಗೆ ಗೋವು ಆಲಿಂಗನ ದಿನಾಚರಣೆ

ಫೆಬ್ರವರಿ 14 ನ್ನು ಗೋವು ಆಲಿಂಗನ ದಿನವಾಗಿ ಮಣಿಪಾಲದ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಆಚರಿಸಲಾಗುತ್ತಿದೆ. ಕಾರ್ಯಕ್ರಮವು ಬೆಳಿಗ್ಗೆ 9.30ರಿಂದ ವಿಶಿಷ್ಟ ಮತ್ತು ಧಾರ್ಮಿಕ ಮಹತ್ವದ ಪುಂಗನೂರು ಗೋವುಗಳ ಆಲಿಂಗನದ ಮೂಲಕ ಆರಂಭವಾಗುವುದು. ಗೋವು ಪ್ರಿಯರು ಮತ್ತು ಆಸ್ತಿಕ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಗೋವು ಆಲಿಂಗನ ದಿನಾಚರಣೆಯನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಲಾಗಿದೆ.

ಪುಂಗನೂರು ತಳಿಯ ಗೋವುಗಳು ಜಗತ್ತಿನಲ್ಲೇ ಅತಿ ಸುಂದರ, ಗಿಡ್ಡದಾದ ಮತ್ತು ಅತಿ ಹೆಚ್ಚು ಔಷಧೀಯ ಗುಣದ ಹಾಲು ನೀಡುತ್ತವೆ ಮತ್ತು ಧಾರ್ಮಿಕವಾಗಿಯೂ ಮಹತ್ವ ಹೊಂದಿವೆ. ಆಂಧ್ರಪ್ರದೇಶದ ಚಿತ್ತೂರು ಮೂಲದ ತಳಿ ಅಳಿವಿನಂಚಿನಲ್ಲಿದ್ದು, ಕೆಲವೇ ನೂರರಷ್ಟು ಹಸುಗಳು ಈಗ ಭಾರತದಲ್ಲಿ ಉಳಿದುಕೊಂಡಿವೆ. ತಿರುಪತಿಯ ಶ್ರೀನಿವಾಸನಿಗೆ ನಿತ್ಯ ಅಭಿಷೇಕ, ನೈವೇದ್ಯಕ್ಕೆ ಸಲ್ಲಿಕೆಯಾಗುವ ಹಾಲೂ ಇದೇ ತಳಿಯದ್ದು. ಇಂತಹ ಶ್ರೇಷ್ಠತೆಗಳನ್ನು ಹೊಂದಿದ ಅತ್ಯಪರೂಪದ ತಳಿಯ 4 ಗೋವುಗಳನ್ನು ಅತಿರುದ್ರಯಾಗ ಕ್ಕೆ ಪೂರ್ವಭಾವಿಯಾಗಿ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ತರಿಸಲಾಗಿದೆ. ಅತಿರುದ್ರ ಮಹಾಯಾಗವು ಶ್ರೀ ಕ್ಷೇತ್ರ ಶಿವಪಾಡಿಯಲ್ಲಿ ಫೆಬ್ರವರಿ 22 ರಿಂದ ಮಾರ್ಚ್ 5 ರವರೆಗೆ ಜರುಗಲಿದೆ.

Related Posts

Leave a Reply

Your email address will not be published.