HomeFresh Newsಫಾಸ್ಟ್ ಫುಡ್ ವ್ಯಾಪಾರ ನಡೆಸುತ್ತಿದ್ದ ಸ್ನೇಹಿತೆಯರ ಅಂಗಡಿ ಆಕಸ್ಮಿಕವಾಗಿ ಬೆಂಕಿಗಾಹುತಿ 

ಫಾಸ್ಟ್ ಫುಡ್ ವ್ಯಾಪಾರ ನಡೆಸುತ್ತಿದ್ದ ಸ್ನೇಹಿತೆಯರ ಅಂಗಡಿ ಆಕಸ್ಮಿಕವಾಗಿ ಬೆಂಕಿಗಾಹುತಿ 

ಉಳ್ಳಾಲ: ಅಗ್ನಿ ಆಕಸ್ಮಿಕ ನಡೆದ ಪರಿಣಾಮ ಫಾಸ್ಟ್ ಫುಡ್ ಅಂಗಡಿಯೊಂದು ಸುಟ್ಟು ಕರಕಲಾದ ಘಟನೆ ಕುಂಪಲ ಬಾಲಕೃಷ್ಣ ಮಂದಿರದ ಬಳಿ ನಡೆದಿದೆ. ಶಾರ್ಟ್ ಸರ್ಕ್ಯುಟ್ ನಿಂದ ಅಂಗಡಿಗೆ ಬೆಂಕಿ ತಗುಲಿರುವುದಾಗಿ ಶಂಕಿಸಲಾಗಿದೆ. ಕುಂಪಲ ಆಶ್ರಯ ಕಾಲನಿಯ ನಿವಾಸಿಗಳು ಸ್ನೇಹಿತೆಯರಾದ ಮೋಹಿನಿ ಮತ್ತು ದೀಕ್ಷಿತ ಜತೆಯಾಗಿ ಸಾಲ ಮಾಡಿ ಸಂಜೆ ಹೊತ್ತಲ್ಲಿ ಫಾಸ್ಟ್ ಫುಡ್ ವ್ಯಾಪಾರ ನಡೆಸುತ್ತಿದ್ದರು.ಫಾಸ್ಟ್ ಫುಡ್ ವ್ಯಾಪಾರದಲ್ಲೇ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದ ಸ್ನೇಹಿತೆಯರೀಗ ಬೀದಿಗೆ ಬಿದ್ದಿದ್ದಾರೆ.

ಬೆಂಕಿ ಅನಾಹುತದಲ್ಲಿ ಅಂಗಡಿಯೊಳಗಿದ್ದ ರೆಫ್ರಿಜರೇಟರ್ನ ಗ್ಯಾಸ್ ಸಿಲಿಂಡರ್ ಸಿಡಿದಿದ್ದು ಕಟ್ಟಡದ ಗೋಡೆ ಬಿರುಕು ಬಿಟ್ಟಿದೆ.ಸ್ಥಳೀಯರೆ ಸೇರಿ ತಕ್ಷಣ ಬೆಂಕಿಯನ್ನ ಆರಿಸಿದ್ದಾರೆ.ಸ್ಥಳಕ್ಕೆ ಬಂದ ಅಗ್ನಿ ಶಾಮಕದಳದ ಸಿಬ್ಬಂದಿ ಬೆಂಕಿ ವ್ಯಾಪಿಸದಂತೆ ಕಾರ್ಯಾಚರಣೆ ನಡೆಸಿದ್ದಾರೆ.ಘಟನೆಯಿಂದ ಸುಮಾರು ಒಂದು ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ.ಸೋಮೇಶ್ವರ ಪುರಸಭಾ ಅಧಿಕಾರಿಗಳು ಮತ್ತು ಉಳ್ಳಾಲ ಠಾಣಾ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments