HomeFresh Newsಉಳ್ಳಾಲ: ನಿದ್ರೆ ಮಂಪರಿನಲ್ಲಿ ಬಾವಿಗೆ ಬಿದ್ದು ವ್ಯಕ್ತಿ ಸಾವು

ಉಳ್ಳಾಲ: ನಿದ್ರೆ ಮಂಪರಿನಲ್ಲಿ ಬಾವಿಗೆ ಬಿದ್ದು ವ್ಯಕ್ತಿ ಸಾವು

ಉಳ್ಳಾಲ:  ನಿದ್ರೆ ಮಂಪರಿನಲ್ಲಿದ್ದ ವೃದ್ಧರೋರ್ವರು ಬಾವಿಯೊಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ತೊಕ್ಕೊಟ್ಟು ಸಮೀಪದ ಕಲ್ಲಾಪು ಎಂಬಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದೆ.

ಘಟನೆ ದೃಶ್ಯ ಮನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಲ್ಲಾಪು ನಿವಾಸಿ ವಾಲ್ಟರ್ ಮೊಂತೆರೋ(65) ಮೃತ ದುರ್ದೈವಿ ವಾಲ್ಟರ್ ಶನಿವಾರ ಸಂಜೆ ತೊಕ್ಕೊಟ್ಟಿನ ಚರ್ಚ್‌ಗೆ ತೆರಳಿ ಪೂಜೆಯಲ್ಲಿ ಪಾಲ್ಗೊಂಡು ಮನೆಗೆ ಹಿಂತಿರುಗಿದ್ದರು. ರಾತ್ರಿ 7.23 ರ ಹೊತ್ತಿಗೆ ವಾಲ್ಟರ್ ಅವರು ಮನೆಯಂಗಳದ ಬಾವಿಯ ಕಟ್ಟೆಯಲ್ಲಿ ನಿದ್ರೆಯ ಮಂಪರಲ್ಲಿ ಕುಳಿತಿದ್ದಾಗ ಹಠಾತ್ತಾಗಿ ಉರುಳಿ ಬಾವಿಯೊಳಗೆ ಬಿದ್ದಿದ್ದಾರೆ. ಕೂಡಲೇ ಮನೆ ಮಂದಿ ಆಳ ಇಲ್ಲದ ಬಾವಿಗೆ ಏಣಿ ಇಳಿಸಿ ವಾಲ್ಟರ್ ಅವರನ್ನ ಮೇಲಕ್ಕೆತ್ತಿದ್ದು ತಲೆಗೆ ಗಂಭೀರಗೊಂಡ ಪರಿಣಾಮ ಸಾವನ್ನಪ್ಪಿದ್ದಾರೆ. ಘಟನೆಯ ದೃಶ್ಯಾವಳಿ ಮನೆಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಮೃತರು ಪತ್ನಿ ,ಇಬ್ಬರು ಗಂಡು ಮಕ್ಕಳನ್ನ ಅಗಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments