ಉಳ್ಳಾಲ: ಪಜೀರು ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ

ಉಳ್ಳಾಲ ತಾಲೂಕಿನ ಪಜೀರು ಗ್ರಾಮದ ಜನತೆ ಚಿರತೆಯೊಂದನ್ನ ಕಂಡಿದ್ದು ಈ ಕುರಿತು ಅರಣ್ಯ ಇಲಾಖೆಗೆ ನೀಡಿದ ಮಾಹಿತಿ ಮೇರೆಗೆ ಚಿರತೆ ಹಿಡಿಯಲು ಬೋನು ಇಡಲಾಗಿದೆ.

ಪಜೀರು ಗ್ರಾಮದ ಅಂಗಡಿಕೆರೆ, ಗುಂಪಕಲ್ಲು, ಉಜ್ಜೊಟ್ಟು, ಮಲಾರ್ ಪರಿಸರದಲ್ಲಿ ಎ.13 ರಂದು ಸಂಜೆ ಹೊತ್ತಿಗೆ  ಚಿರತೆ ಮರಿಗಳನ್ನು ಕಂಡಿದ್ದೇವೆ ಎಂದು ಪ್ರತ್ಯಕ್ಷದರ್ಶಿಗಳು ದೂರಿಕೊಂಡಿದ್ದರು. ಚಿರತೆ ಗುಮ್ಮದಿಂದ ಸ್ಥಳೀಯರು, ಮಕ್ಕಳು, ದೊಡ್ಡವರು ಪ್ರದೇಶದಲ್ಲಿ ಆತಂಕದಿಂದಲೇ ಸುತ್ತಾಡುತ್ತಿದ್ದಾರೆ. ಚಿರತೆ ಆಗಿದ್ದಲ್ಲಿ ಯಾವ ಸಮಯದಲ್ಲಿ ಬೇಕಾದರೂ ದಾಳಿ ಮಾಡಬಹುದು. ಈ ನಿಟ್ಟಿನಲ್ಲಿ ಗ್ರಾಮಸ್ಥರಿಗೆ ರಕ್ಷಣೆ ಒದಗಿಸುವಂತೆ  ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರಿಕೊಂಡಿದ್ದರು. ಸ್ಥಳಕ್ಕಾಗಮಿಸಿದ ಅರಣ್ಯ ಅಧಿಕಾರಿಗಳು ಪರಿಶೀಲನೆ ನಡೆಸಿ ಒಂದು ಬೋನನ್ನು ಇಟ್ಟಿದ್ದಾರೆ‌ .

ಕಾರ್ಯಾಚರಣೆ ಮೊದಲೇ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕೋಟೆಕಾರು ಶಾಖೆ ಉಪವಲಯ ಅರಣ್ಯಾಧಿಕಾರಿ ಮಹಾಬಲ ಅವರು ವಿವಿಧ ತಳಿಯ ಬೆಕ್ಕುಗಳು ಚಿರತೆಯಂತೆ ಕಂಡುಬರುತ್ತವೆ. ಪಜೀರು ಭಾಗದಲ್ಲಿ ಈವರೆಗೆ ಚಿರತೆಗಳು ಬಂದಿರುವ ದಾಖಲೆಗಳು ಇಲ್ಲ. ಸ್ಥಳದಲ್ಲಿ ಹೆಜ್ಜೆ ಗುರುತುಗಳು ಚಿರತೆಯಂತೆ 
ಗೋಚರಿಸುತ್ತದೆ, ಆದರೆ ಸ್ಪಷ್ಟವಾಗಿ ಗೋಚರಿಸುತ್ತಿಲ್ಲ. ಮುಂಜಾಗ್ರತಾ ಕ್ರಮವಾಗಿ ಬೋನನ್ನು ಇಟ್ಟಿದ್ದೇವೆ. ಸ್ಥಳದಲ್ಲಿ ನಾಯಿಯನ್ನೂ ಕಟ್ಟಲಾಗಿದೆ ಎಂದಿದ್ದಾರೆ. 

Related Posts

Leave a Reply

Your email address will not be published.