HomeFresh Newsಉಳ್ಳಾಲ: ಕರೆಂಟ್ ಎಲೆಕ್ಟ್ರಿಕಲ್ಸ್ ಸೇಲ್ಸ್ & ಸರ್ವೀಸ್ ಎಲೆಕ್ಟ್ರಿಕಲ್ಸ್ ಮತ್ತು ಪ್ಲಂಬಿಂಗ್‌ನ ಮಳಿಗೆ ಶುಭಾರಂಭ

ಉಳ್ಳಾಲ: ಕರೆಂಟ್ ಎಲೆಕ್ಟ್ರಿಕಲ್ಸ್ ಸೇಲ್ಸ್ & ಸರ್ವೀಸ್ ಎಲೆಕ್ಟ್ರಿಕಲ್ಸ್ ಮತ್ತು ಪ್ಲಂಬಿಂಗ್‌ನ ಮಳಿಗೆ ಶುಭಾರಂಭ

ಉಳ್ಳಾಲ ಬೈಲ್‌ನ ಮಾತಾ ಕಾಂಪ್ಲೆಕ್ಸ್‌ನಲ್ಲಿ ಕರೆಂಟ್ ಎಲೆಕ್ಟ್ರಿಕಲ್ಸ್ ಸೇಲ್ಸ್ ಮತ್ತು ಸರ್ವೀಸ್ ಎಲೆಕ್ಟ್ರಿಕಲ್ಸ್ ಮತ್ತು ಪ್ಲಂಬಿಂಗ್‌ನ ಉದ್ಘಾಟನಾ ಸಮಾರಂಭ ನಡೆಯಿತು.

ಸರ್ಫ್‌ರಾಝ್ ಮತ್ತು ಅಬ್ದುಲ್ ಲತೀಫ್ ಅವರ ಮಾಲಕತ್ವದಲ್ಲಿ ಕರೆಂಟ್ ಎಲೆಕ್ಟ್ರಿಕಲ್ಸ್ ಸೇಲ್ಸ್ ಮತ್ತು ಸರ್ವೀಸ್ ಮಳಿಗೆ ನೂತನವಾಗಿ ಶುಭಾರಂಭಗೊಂಡಿತು. ವಿಧಾನಸಭೆಯ ಸ್ಪೀಕರ್ ಮತ್ತು ಶಾಸಕರಾದ ಯು.ಟಿ. ಖಾದರ್ ಸಹಿತ ಗಣ್ಯರು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು.

ಇದೇ ವೇಳೆ ಮಾತನಾಡಿದ ಸ್ಪೀಕರ್ ಯು.ಟಿ. ಖಾದರ್ ಅವರು, ಸರ್ಪರಾಝ್ ಮತ್ತು ಅಬ್ದುಲ್ ಲತೀಫ್ ಅವರು ಹೊಸದಾಗಿ ಎಲೆಕ್ಟ್ರಿಕಲ್ಸ್ ಸೇಲ್ಸ್ ಮತ್ತು ಸರ್ವೀಸ್ ಮಳಿಗೆಯನ್ನು ಪ್ರಾರಂಭಿಸಿದ್ದಾರೆ. ಇವರ ಪ್ರಾಮಾಣಿಕ ಮತ್ತು ಭದ್ಧತೆಯಿಂದಾಗಿ ಈ ಊರಿನ ಸರ್ವ ಜನರ ವಿಶ್ವಾಸವನ್ನು ಪಡೆದುಕೊಂಡು ಮುಂದಿನ ದಿನಗಳಲ್ಲಿ ಈ ಮಳಿಗೆ ಜನಪ್ರಿಯಾ ಆಗಲಿದೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.

ಇದೇ ವೇಳೆ ಮಾಲಕರಾದ ಅಬ್ದುಲ್ ಲತೀಫ್ ಅವರು ಮಾತನಾಡಿ, ಎಲೆಕ್ಟ್ರಿಕಲ್ಸ್ ಮತ್ತು ಪ್ಲಂಬಿಂಗ್‌ನಲ್ಲಿ ೪೦ ವರ್ಷದ ಅನುಭವ ಇದೆ. ಎಲ್ಲರ ಸಹಕಾರ ನಮಗೆ ಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಲಕರಾದ ಸರ್ಫ್‌ರಾಜ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಉಮ್ಮರ್ ಯು.ಹೆಚ್. ಬಿಜೆಪಿ ಮುಖಂಡರಾದ ಚಂದ್ರಹಾಸ ಉಚ್ಚಿಲ, ಚಂದ್ರಹಾಸ್ ಉಳ್ಳಾಲ್, ಸದರ್ ಬಜಾರ್ ಮಾಲೀಕರಾದ ಅಹಮದ್ ಬಾವ ಹಾಜಿ, ಮಸ್ದೀದ್ ಹುದಾ ಕಡಪರ ಜರ ಹಿಮಾಮಂ ದರ್ಗಾ ಅಧ್ಯಕ್ಷ ಹನೀಫ್ ಹಾಜಿ, ರೆಹಮಾನಿಯಾ ಜುಮ್ಮಾ ಮಸೀದಿಯ ಅಧ್ಯಕ್ಷ ಉಳ್ಳಾಲ ಪೇಟೆ ಮೊಯ್ದಿನ್ ಹಸನಬ್ಬ, ಉಳ್ಳಾಲ ದರ್ಗಾ ಮಾಜಿ ಮಂಡಲ ಅಧ್ಯಕ್ಷ ರಾಶೀದ್ ಹಾಜಿ, ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments