ಉಳ್ಳಾಲ: ಮಸೀದಿಗೆ ನುಗ್ಗಿ ಕಾಣಿಕೆ ಡಬ್ಬಿ ಒಡೆದು ನಗದು ಕಳವು

ಮಸೀದಿಗೆ ನುಗ್ಗಿದ ಕಳ್ಳರು ಆರು ಕಾಣಿಕೆ ಡಬ್ಬಿಗಳನ್ನು ಒಡೆದು ನಗದು ದೋಚಿರುವ ಘಟನೆ ಇಂದು ನಸುಕಿನ ಜಾವ ಸಂಭವಿಸಿದೆ.
ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಅರ್ಕಾನ ಬದ್ರಿಯಾ ಜುಮಾ ಮಸೀದಿ ಯಲ್ಲಿ ಘಟನೆ ನಡೆದಿದೆ. ಮಸೀದಿ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು ಪಿಕ್ಕಾಸು ಬಳಸಿ ಕಾಣಿಕೆ ಡಬ್ಬಿಗಳನ್ನು ಒಡೆದು ನಗದು ದೋಚಿದ್ದಾರೆ. ಮಸೀದಿ ವಠಾರದಲ್ಲಿ ಅಳವಡಿಸಿದ್ದ ಆರು ಕಾಣಿಕೆ ಡಬ್ಬಿಗಳನ್ನು ಒಡೆದು ಹಾಕಲಾಗಿದೆ.

ಮಸೀದಿಯನ್ನು ದೋಚುವulala ಮುನ್ನ ಅಥವಾ ನಂತರ ಕಳ್ಳರು ಶಾಲೆಯೊಳಗಡೆ ಕುಳಿತು ಪಾರ್ಟಿ ಮಾಡಿರುವ ಸೊತ್ತುಗಳು ಪತ್ತೆಯಾಗಿದೆ. ಮುಖಗವಚ, ಚಿಕನ್ ಟಿಕ್ಕಾ ಮಾಡುವ ಯಂತ್ರಉಪ್ಪು ಹುಡಿ, ಖಾರದ ಹುಡಿ, ಗ್ಯಾಸ್ ಲೈಟರ್ ಎಲ್ಲವೂ ಶಾಲೆಯ ವಠಾರದಲ್ಲಿ ಕಂಡು ಬoದಿದೆ.ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನಾ ಸ್ಥಳಕ್ಕೆ ವಿಪಕ್ಷ ಉಪನಾಯಕ ಶಾಸಕ ಯು.ಟಿ ಖಾದರ್ ಭೇಟಿ ನೀಡಿ ತಕ್ಷಣವೇ ಆರೋಪಿಗಳನ್ನು ಪತ್ತೆಹಚ್ಚುವಂತೆ ಪೊಲೀಸ್ ಸೂಚಿಸಿದ್ದಾರೆ. ಪ್ರಕರಣ ಕುರಿತು ಪೊಲೀಸ್ ಕಮೀಷನರ್ ಜೊತೆಗೆ ಚರ್ಚಿಸುವುದಾಗಿಯೂ ತಿಳಿಸಿದರು.

Related Posts

Leave a Reply

Your email address will not be published.