HomeUncategorizedಡೆತ್ ನೋಟು ಬರೆದಿಟ್ಟು ಯುವಕ ನೇಣು ಬಿಗಿದು ಆತ್ಮಹತ್ಯೆ

ಡೆತ್ ನೋಟು ಬರೆದಿಟ್ಟು ಯುವಕ ನೇಣು ಬಿಗಿದು ಆತ್ಮಹತ್ಯೆ

ಉಳ್ಳಾಲ:ಯುವಕನೋರ್ವ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದು ಆತ್ಮ ಹತ್ಯೆಗೈದ ಘಟನೆ ತೊಕ್ಕೊಟ್ಟು ಸಮೀಪದ ಕಾಪಿಕಾಡು,ಸತ್ಯನಾರಾಯಣ ಕಂಪೌಂಡ್ ನಲ್ಲಿ ನಡೆದಿದೆ.
ಕಾಪಿಕಾಡು,ಸತ್ಯನಾರಾಯಣ ಕಂಪೌಂಡ್ ನಿವಾಸಿ ನಿತಿನ್ ಪೂಜಾರಿ(36)ಆತ್ಮ‌ ಹತ್ಯೆಗೈದ ಯುವಕ.ನಿತಿನ್. ಮನೆಯ ಕೋಣೆಯೊಳಗೆ ಸೇರಿದ್ದನೆನ್ನಲಾಗಿದೆ.ನೆರೆಯ ಮನೆಯಲ್ಲಿ ಬೀಡಿ ಕಟ್ಟುತ್ತಿದ್ದ ಆತನ ತಾಯಿ ಬಂದು ಕೋಣೆಯ ಬಾಗಿಲು ಬಡಿದಿದ್ದು ಬಾಗಿಲ ಎಡೆಯಿಂದ ನೋಡಿದಾಗ ಮಗ ಫ್ಯಾನಿಗೆ ನೇಣು ಬಿಗಿದ ವಿಚಾರ ತಿಳಿದಿದೆ.

ಮೃತ ನಿತಿನ್ ಡೆತ್ ನೋಟ್ ಒಂದನ್ನ ಬರೆದಿದ್ದು ಅದರಲ್ಲಿ ನನ್ನ ಸಾವಿಗೆ ಪ್ರವೀಣ್ ಶೆಟ್ಟಿ ಚೆಂಬುಗುಡ್ಡೆ ನೇರ ಕಾರಣ. ಇವರಿಂದ ಮಾನಸಿಕವಾಗಿ ಮನನೊಂದು ಆತ್ಮ ಹತ್ಯೆ ಮಾಡಿಕೊಂಡಿರುತ್ತೇನೆ.ಇವರಿಗೆ ಕಠಿಣ ಶಿಕ್ಷೆಯನ್ನ ನೀಡಬೇಕಾಗಿ ವಿನಂತಿ ಎಂದು ಉಲ್ಲೇಖಿಸಿದ್ದಾರೆ. ಮೃತ ನಿತಿನ್ ಈ ಮೊದಲು ಮಾಂಡೊವಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು,ಈಗ ಸಿಕ್ಕಿದ ಸಣ್ಣ,ಪುಟ್ಟ ಕೆಲಸಕ್ಕೆ ತೆರಳುತ್ತಿದ್ದನಂತೆ.ನಿತಿನ್ ಅಕ್ಕ,ಬಾವ,ಅಮ್ಮನನ್ನ ಅಗಲಿದ್ದಾರೆ. ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸರು ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾಣಿಸಿದ್ದು ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿ ಕೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments