ಅಮೆರಿಕ ಸಂಯುಕ್ತ ಸಂಸ್ಥಾನದ ಎಲ್ಲ ವಿಶ್ವವಿದ್ಯಾನಿಲಯಗಳಲ್ಲೂ ಪ್ಯಾಲೆಸ್ತೀನ್ ಬೆಂಬಲಿಸಿ, ಇಸ್ರೇಲ್ ದಾಳಿ ಖಂಡಿಸಿ ಚಳವಳಿ ಮುಂದುವರಿದಿದೆ. ಇಂದು ಸಿಟಿ ಕಾಲೇಜಿನ 300 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
ನ್ಯೂಯಾರ್ಕಿನ ಪೋಲೀಸರು ಕೊಲಂಬಿಯಾ ವಿಶ್ವವಿದ್ಯಾನಿಲಯದ ಸಿಟಿ ಕಾಲೇಜಿನ 300 ವಿದ್ಯಾರ್ಥಿಗಳನ್ನು ಗುರುವಾರ ಪ್ರತಿಭಟನೆ ಸಂಘಟಿಸಿದ್ದಕ್ಕಾಗಿ ಬಂಧಿಸಿದರು. ಎಲ್ಲ ವಿವಿ ಕ್ಯಾಂಫಸ್‍ಗಳಲ್ಲೂ ಟೆಂಟ್ ಹಾಕಿ ಪ್ರತಿಭಟನೆ ನಡೆಸುವುದು ವ್ಯಾಪಕಗೊಂಡಿದೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಪ್ರತಿಭಟನೆಯಲ್ಲಿ ಘರ್ಷಣೆ ಉಂಟಾಗಿ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡರೆಂದು ತಿಳಿದು ಬಂದಿದೆ. ತಕ್ಷಣವೇ ಯುದ್ಧ ನಿಲ್ಲಿಸಬೇಕು ಎನ್ನುವುದು ವಿದ್ಯಾರ್ಥಿಗಳ ಒತ್ತಾಯವಾಗಿದೆ.

