ಯುಎಸ್ಎಯ ಫುಲ್ಲರ್ಟನ್ನಲ್ಲಿ ನಡೆದ ಅಮೆರಿಕನ್ ಓಪನ್ ಬ್ಯಾಡ್ಮಿಂಟನ್ನಲ್ಲಿ ಭಾರತದ ಕಿದಂಬಿ ಶ್ರೀಕಾಂತ್ ರನ್ನರ್ ಅಪ್ ಆಗಿ ರಜತ ಪದಕ ಗೆದ್ದರು.
ಫೈನಲಿನಲ್ಲಿ ತೈವಾನಿನ ಸು ಲಿ ಯಾಂಗ್ ವಿರುದ್ಧದ ಪಂದ್ಯದಲ್ಲಿ ಕಿದಂಬಿ ಶ್ರೀಕಾಂತ್ ಹೋರಾಡಿದರು. ಅಂತಿಮವಾಗಿ ಸೋಲುಂಡರು. ಮೂರು ರೌಂಡಿನಲ್ಲಿ ಅವರು ಮೊದಲಿನದನ್ನು ಸೋತು, ಎರಡನೆಯ ರೌಂಡ್ ಗೆದ್ದರಾದರೂ ಮೂರನೆಯ ಸುತ್ತು ಸುಲಭವಾಗಿ ಬಿಟ್ಟುಕೊಟ್ಟರು.


46ನೇ ರ್ಯಾಂಕಿನ ತೈವಾನಿನ ಯಾಂಗ್ರಿಗೆ ಇದು ಮೊದಲ ಬಿಡಬ್ಲ್ಯುಎಫ್ ವಿಶ್ವ ಟೂರ್ ಪ್ರಶಸ್ತಿಯಾಗಿದೆ. 2014-2017ರ ನಡುವೆ ಹಲವು ಪ್ರಶಸ್ತಿ ಕಂಡ 33ರ ಪ್ರಾಯದ ಕಿದಂಬಿ ಶ್ರೀಕಾಂತ್ ಇತ್ತೀಚಿನ ವರುಷಗಳಲ್ಲಿ ಪ್ರಶಸ್ತಿಯ ಕ್ಷಾಮ ಕಾಣುತ್ತಿದ್ದಾರೆ. ಕಳೆದ ವರುಷ ಮಲೇಶಿಯಾ ಮಾಸ್ಟರ್ 500, ಸಯ್ಯದ್ ಮೋದಿ ಇಂಟರ್ನ್ಯಾಶನಲ್ ಸೂಪರ್ 300 ಪಂದ್ಯಗಳಲ್ಲೂ ಅವರು ಫೈನಲಿನಲ್ಲಿ ಸೋತು ಎರಡನೆಯವರಾಗಿದ್ದರು.

