ಪಡುಬಿದ್ರಿ: ಶಿವಾಯ ಫೌಂಡೇಶನ್ (ರಿ.) ವತಿಯಿಂದ ‘ವಿದ್ಯಾ ಪ್ರೇರಣಾ 2026’ ಶೈಕ್ಷಣಿಕ ಸಹಾಯ, ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವು ಸೆಪ್ಟೆಂಬರ್ 27ರಂದು ಭಾನುವಾರ ಪಡುಬಿದ್ರಿಯ ಕೃಷ್ಣ ಸುಧಾಮ ಸಭಾಂಗಣ, ಬಂಟರ ಭವನದಲ್ಲಿ ನಡೆಯಲಿದೆ.
ಮಧ್ಯಾಹ್ನ 2 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಾಯ ಫೌಂಡೇಶನ್ನ ಗೌರವಾಧ್ಯಕ್ಷ ನವೀನ್ ಚಂದ್ರ ಜೆ. ಶೆಟ್ಟಿ ವಹಿಸಲಿದ್ದು, ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

ಬಂಟ್ಸ್ ವೆಲ್ವೇರ್ ಟ್ರಸ್ಟ್ ಹಾಗೂ ಬಂಟರ ಸಂಘ ಪಡುಬಿದ್ರಿಯ ಅಧ್ಯಕ್ಷ ಡಾ. ವೈ.ಎನ್. ಶೆಟ್ಟಿ ದೀಪ ಪ್ರಜ್ವಲನೆ ನೆರವೇರಿಸಲಿದ್ದಾರೆ. ಬಂಟರ ಸಂಘ ಪಡುಬಿದ್ರಿಯ ಅಧ್ಯಕ್ಷ ಡಾ. ದೇವಿ ಪ್ರಸಾದ್ ಶೆಟ್ಟಿ, ಬೆಳಪು ಮುಖ್ಯ ಅತಿಥಿಯಾಗಿ, Yathartha ಸಂಸ್ಥೆಯ Founder ಈಶ್ವರ್ ಶೆಟ್ಟಿ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಶಿವಾಯ ಫೌಂಡೇಶನ್ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಪಲಿಮಾರು ಗೌರವ ಉಪಸ್ಥಿತರಿರುವರು. ಮಾಜಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ, ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ಹರಿಪ್ರಸಾದ್ ರೈ, ಉದ್ಯಮಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದಲ್ಲಿ ಬಿ. ವಿಠಲ್ ಶೆಟ್ಟಿ ಹಾಗೂ ಸಂತೋಷ್ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು.
ಸಮಾಜಮುಖಿ ಸೇವೆಯಲ್ಲಿ ಶಿವಾಯ ಫೌಂಡೇಶನ್
2018ರಲ್ಲಿ ಸ್ಥಾಪನೆಯಾದ ಶಿವಾಯ ಫೌಂಡೇಶನ್ ವೈದ್ಯಕೀಯ ನೆರವು, ಶೈಕ್ಷಣಿಕ ಸಹಾಯ, ಅನ್ನದಾನ ಸೇರಿದಂತೆ ವಿವಿಧ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ‘ಶಿವಾಯ ಫುಡ್ ಡ್ರೈವ್’ ಮೂಲಕ ಮುಂಬೈನ ಟಾಟಾ ಕ್ಯಾನ್ಸರ್ ಆಸ್ಪತ್ರೆ, ಕೆ.ಇ.ಎಂ. ಮುನ್ಸಿಪಲ್ ಆಸ್ಪತ್ರೆ ಪರಿಸರ ಹಾಗೂ ರಸ್ತೆ ಬದಿಯ ನಿರ್ಗತಿಕರಿಗೆ ಅನ್ನದಾನ ಮಾಡಲಾಗುತ್ತಿದೆ.
ವಿಧವಾ ವೇತನ, ವಿದ್ಯಾರ್ಥಿವೇತನ ವಿತರಣೆ, ವಿಶೇಷ ಚೇತನ ಶಾಲೆಗಳಿಗೆ ಆರ್ಥಿಕ ನೆರವು, ಅಂಗವಿಕಲರಿಗೆ ವೀಲ್ಚೇರ್ ವಿತರಣೆ, ರಕ್ತದಾನ ಶಿಬಿರ, ಪಡಿತರ ವಿತರಣೆ ಹಾಗೂ ವೃದ್ಧಾಶ್ರಮ–ಅನಾಥಾಶ್ರಮಗಳಲ್ಲಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ಫೌಂಡೇಶನ್ ನಡೆಸುತ್ತಿದೆ.
ಸಭಾ ಕಾರ್ಯಕ್ರಮದ ಬಳಿಕ ಡೀಮ್ ಬಾಯ್ಸ್ ಡಾನ್ಸ್ ಗ್ಯಾಲರಿ, ಕಾವೂರು, ಮಂಗಳೂರು ಇವರಿಂದ ‘ಗಾನ ನೃತ್ಯ ವೈಭವ’ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಮಧ್ಯಾಹ್ನ ಪ್ರೀತಿ ಭೋಜನದ ವ್ಯವಸ್ಥೆ ಮಾಡಲಾಗಿದೆ ಎಂದು
ಶಿವಾಯ ಫೌಂಡೇಶನ್ನ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಹಾಗೂ ಸರ್ವ ಸದಸ್ಯರು ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಆಗಮಿಸುವಂತೆ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


