HomeFresh Newsಪೌರಾಡಳಿತ ಸಚಿವ ಎಚ್. ಸಿ. ಬಾಲಕೃಷ್ಣ ಅವರಿಂದ ಶ್ರೀ ಕ್ಷೇತ್ರ ಉಚ್ಚಿಲಕ್ಕೆ ಭೇಟಿ

ಪೌರಾಡಳಿತ ಸಚಿವ ಎಚ್. ಸಿ. ಬಾಲಕೃಷ್ಣ ಅವರಿಂದ ಶ್ರೀ ಕ್ಷೇತ್ರ ಉಚ್ಚಿಲಕ್ಕೆ ಭೇಟಿ

ಉಚ್ಚಿಲ, ಕರ್ನಾಟಕ ಸರ್ಕಾರದ ಪೌರಾಡಳಿತ ಸಚಿವರಾದ ಮಾನ್ಯ ಶ್ರೀ ಎಚ್. ಸಿ. ಬಾಲಕೃಷ್ಣ ಅವರು ಇಂದು, ದಿನಾಂಕ 17.09.2026ರ ಗುರುವಾರ ಬೆಳಿಗ್ಗೆ 11.00 ಗಂಟೆಗೆ, ಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರ ಉಚ್ಚಿಲಕ್ಕೆ ಭೇಟಿ ನೀಡಿ ಶ್ರೀ ಮಹಾಲಕ್ಷ್ಮೀ ದೇವಿಯ ದರ್ಶನ ಪಡೆದರು.ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ವತಿಯಿಂದ ಸಚಿವರನ್ನು ಶಾಲು ಹೊದಿಸಿ, ಸ್ಮರಣಿಕೆ ಹಾಗೂ ಶ್ರೀ ದೇವರ ಪ್ರಸಾದ ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷರಾದ ಗಿರಿಧರ್ ಸುವರ್ಣ ಮೂಳೂರು, ನಾರಾಯಣ ಸಿ. ಕರ್ಕೇರ, ದಿನೇಶ್ ಎರ್ಮಾಳ್, ಮೋಹನ್ ಬಂಗೇರ ಕಾಪು, ಶೇಖರ್ ಪುತ್ರನ್ ಎರ್ಮಾಳ್, ಪುರೋಹಿತರಾದ ಶ್ರೀಪತಿ ಉಪಾಧ್ಯಾಯ ಸೇರಿದಂತೆ ಆಡಳಿತ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments