ವಿಟ್ಲ ಚಂದಳಿಕೆ ಸರ್ಕಾರಿ ಶಾಲೆಯ ವಾರ್ಷಿಕೋತ್ಸವ

ವಿಟ್ಲ: ಚಂದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಂಭ್ರಮ ಶನಿವಾರ ನಡೆಯಿತು.

ಎಸ್ ಎಲ್ ವಿ ಬುಕ್ ಕಂಪೆನಿಯ ದಿವಾಕರದಾಸ್ ನೇರ್ಲಾಜೆ ಮಾತನಾಡಿ ಹಿರಿಯ ಶಿಕ್ಷಕರು ಭದ್ರ ಅಡಿಪಾಯ ಇಟ್ಟುಕೊಟ್ಟ ಕಾರಣದಿಂದ ಶಾಲೆಯೂ ಇಂದು ಉತ್ತಮವಾಗಿ ಅಭಿವೃದ್ಧಿ ಹೊಂದಿದೆ. ಶಾಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಶಿಕ್ಷಕರ,  ಹಳೆ ವಿದ್ಯಾರ್ಥಿಗಳ ಕಾರ್ಯ ಶ್ಲಾಘನೀಯ ಎಂದರು.

ವಜ್ರಮಹೋತ್ಸವ ಸಮಿತಿ ಅಧ್ಯಕ್ಷ ದೇಜಪ್ಪ ಪೂಜಾರಿ ನಿಡ್ಯ  ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿಟ್ಲ ಪಟ್ಟಣ ಪಂಚಾಯತ್ ಸದಸ್ಯೆ ರಕ್ಷಿತಾ ಸನತ್ ಹಸ್ತಾ ಪತ್ರಿಕೆ ಬಿಡುಗಡೆಯನ್ನು  ಬಿಡುಗಡೆಗೊಳಿಸಿದರು.

ಚಂದಳಿಕೆ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಭವಾನಿ ಟೀಚರ್, ಲಯನ್ಸ್ ಕ್ಲಬ್ ಅಧ್ಯಕ್ಷ ಸುದೇಶ್ ಭಂಡಾರಿ ಎರ್ಮೆನಿಲೆ, ಅರಮನೆಯ ಕೃಷ್ಣಯ್ಯ ಕೆ,ಬಂಟ್ವಾಳ ಶಿಕ್ಷಕರ ಸಂಘದ ಕಾರ್ಯದರ್ಶಿ ಯತೀಶ್ ಪಾದೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ,  ಎಸ್ ಡಿ ಎಂ ಸಿ ಅಧ್ಯಕ್ಷೆ ಸುಮತಿ ಶಾಲಾ ಮುಖ್ಯೋಪಾಧ್ಯಾಯ ವಿಶ್ವನಾಥ, ಮೊದಲಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.