ಮಂಗಳೂರಿನಲ್ಲಿ ಎಲ್‌ ಕೋಡ್ ಟೆಕ್ನಾಲಾಜೀಸ್ ಸಾಫ್ಟ್‌ವೇರ್ ಸಂಸ್ಥೆ ಶುಭಾರಂಭ

ಡಿಜಿಟಲ್ ಕ್ಷೇತ್ರದಲ್ಲಿ ಗ್ರಾಹಕ ಸೇವೆಯಲ್ಲಿ ನಿರತವಾಗಿರುವ ಎಲ್‌ಕೋಡ್ ಟೆಕ್ನಾಲಾಜೀಸ್ ಸಾಫ್ಟ್‌ವೇರ್ ಸಂಸ್ಥೆಯ ನೂತನ ಕಚೇರಿಯನ್ನು ಬಿಜೈ ಕಾಪಿಕಾಡ್‌ಅಜಂತಾ ಬಿಸ್‌ನೆಸ್ ಸೆಂಟರ್‌ನಲ್ಲಿ ಶುಭಾರಂಭಗೊಂಡಿತ್ತು.

ನೂತನ ಎಲ್‌ಕೋಡ್ ಟೆಕ್ನಾಲಜೀಸ್ ಸಾಫ್ಟ್‌ವೇರ್ ಸಂಸ್ಥೆಯ ನೂತನ ಕಚೇರಿಯನ್ನು ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್.ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಈಗ ಇರುವ ಡಿಜಿಟಲ್ ವ್ಯವಸ್ಥೆಯ ಕುರಿತಂತೆ ದಶಕಗಳ ಹಿಂದೆ ನಮಗೆ ಸಣ್ಣ ಅರಿವು ಕೂಡಾ ಇರಲಿಲ್ಲ. ಆದರೆ ಇಂದು ಡಿಜಿಟಲ್ ಕ್ಷೇತ್ರದ ವ್ಯಾಪ್ತಿ ವಿಸ್ತಾರವಾಗಿದ್ದು, ಮುಂದಿನ ‘ವಿಷ್ಯ ಡಿಜಿಟಲ್‌ನಲ್ಲೇ ಅಡಗಿದೆ. ಇಂದು ಬ್ಯಾಂಕ್‌ಗಳ ಕುರಿತಂತೆ ಇರುವ ವ್ಯಾಖ್ಯಾನ ಇಂದು ಬದಲಾಗಿದ್ದು, ಬ್ಯಾಂಕ್‌ಗಳು ಬ್ಯಾಂಕಿಂಗ್ ಪರವಾನಗಿ ಹೊಂದಿರುವ ಟೆಕ್ನಾಲಜಿ ಕಂಪೆನಿಗಳು ಎನ್ನಬಹುದು. ಎಲ್‌ಕೋಡ್‌ನಂತಹ ಸಂಸ್ಥೆಗಳು ಬ್ಯಾಂಕಿಂಗ್ ವ್ಯವಸ್ಥೆಯ ಬೆನ್ನೆಲುಬಾಗಿ, ಎರಡೂ ಕ್ಷೇತ್ರಗಳು ಬಲಿಷ್ಠವಾಗಲು ಕಾರಣವಾಗಿವೆ ಎಂದು ಅವರು ಹೇಳಿದರು.

ಸಂಸ್ಥೆಯ ಸಲಹೆಗಾರ ಮತ್ತು ಮೆಂಟರ್, ಎ.ಡಿ.ಗೋಪಾಲ್ ಅವರು ಮಾತನಾಡಿ, ಕರ್ಣಾಟಕ ಬ್ಯಾಂಕ್‌ನೊಂದಿಗೆ ಸಂಸ್ಥೆ ಡಿಜಿಟಲ್ ಬ್ಯಾಂಕಿಂಗ್ ಕ್ಷೇತ್ರದಲ್ಲಿ ನೀಡುತ್ತಿರುವ ಸಹಕಾರ ಮುಂದಿನ ದಿನಗಳಲ್ಲೂ ಮುಂದುವರಿಯಲಿದ್ದು, ಉತ್ಸಾಹಿ ಯುವ ಟ್ಯಾಲೆಂಟ್‌ಗಳೊಂದಿಗೆ ಹೊಸ ಉತ್ಪನ್ನಗಳನ್ನು ರಚಿಸಿ ಉತ್ತಮ ಸೇವೆ ನೀಡಲಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ನಿರ್ದೇಶಕ ಮತ್ತು ಸಿಇಒ ರಾಜೇಂದ್ರ ಶೆಣೈ ಅವರು, ಹತ್ತು ವರ್ಷಗಳ ಹಿಂದೆ ಐದು ಮಂದಿಯ ತಂಡದೊಂದಿಗೆ ಆರಂವಾದ ಸಂಸ್ಥೆ ಇಂದು ೧೪೦ ಮಂದಿ ಸಿಬಂದಿಯೊಂದಿಗೆ ಮಂಗಳೂರು ಮತ್ತು ಚೆನ್ನೈಯನ್ನು ಕೇಂದ್ರವಾಗಿ ಕಾರ್ಯಾಚರಿಸುತ್ತಿದೆ. ಡಿಜಿಟಲ್ ಬ್ಯಾಂಕಿಂಗ್ ಮತ್ತು ಡಿಜಿಟಲ್ ಲ್ಯಾಂಡಿಂಗ್ ಕ್ಷೇತ್ರದಲ್ಲಿ ಸುಮಾರು 40 ಗ್ರಾಹಕರಿಗೆ ಸಂತೃಪ್ತ ಸೇವೆ ನೀಡುತ್ತಿದೆ ಎಂದು ಅವು ಹೇಳಿದರು. ವೇಳೆ

ಕರ್ಣಾಟಕ ಬ್ಯಾಂಕ್‌ಡಿಜಿಎಂ ವಿನಯ್ ಕುಲಕರ್ಣಿ, ಸಹ ಸಂಸ್ಥಾಪಕರಾದ ಪ್ರಕಾಶ್ ಗಣೇಶನ್, ನಟರಾಜನ್ ಅರುಚಾಮಿ, ಗೋಪಾಲಕೃಷ್ಣ ಪೈ, ಎ.ಜಿ.ಕಾರ್ತಿಕ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.