ವಿಟ್ಲ: ರೈಲ್ವೆ ಬ್ರಿಡ್ಜ್ ಸೇಫ್ಟಿ ಗಾರ್ಡ್‌ಗೆ ಕಂಟೈನರ್ ಢಿಕ್ಕಿ, ಹಾನಿ

ವಿಟ್ಲ: ರೈಲ್ವೆ ಬ್ರಿಡ್ಜ್ ಸೇಫ್ಟಿ ಗಾರ್ಡ್ ಗೆ ಕಂಟೈನರ್ ಡಿಕ್ಕಿ ಹೊಡೆದ ಘಟನೆ ಮುಂಜಾನೆ ಮಿತ್ತೂರಿನಲ್ಲಿ ನಡೆದಿದೆ.

ಮಿತ್ತೂರು ರೈಲ್ವೆ ಬ್ರಿಡ್ಜ್ ಸೇಫ್ಟಿ ಗಾರ್ಡ್ ಗೆ ಕಾರು ಕೊಂಡೊಯ್ಯುವ ಕಂಟೈನರ್ ಡಿಕ್ಕಿ ಹೊಡೆದಿದ್ದು, ಘಟನೆಯಿಂದಾಗಿ ರೈಲ್ವೆ ಬ್ರಿಡ್ಜ್ ಸೇಫ್ಟಿ ಗಾರ್ಡ್ ಹಾನಿಗೊಳಗಾಗಿದೆ.

ಮಂಗಳೂರಿನಿಂದ ಬೆಂಗಳೂರಿಗೆ ಕಾರು ಕೊಂಡೊಯ್ಯುತ್ತಿದ್ದ ಕಂಟೈನರ್ ಮಾಣಿ ಬಳಿ ದಾರಿ ತಪ್ಪಿ ಪುತ್ತೂರು ರಸ್ತೆಯಲ್ಲಿ ಬಂದಿದ್ದು, ಈ ವೇಳೆ ಮಿತ್ತೂರಿನಲ್ಲಿ ರೈಲ್ವೆ ಬ್ರಿಡ್ಜ್ ಸೇಫ್ಟಿ ಗಾರ್ಡ್ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.ಘಟನೆಯಿಂದಾಗಿ ಜನರಿಗೆ ಯಾವುದೇ ಅಪಾಯ ಸಂಭವಿಸಿಲ್ಲ.