ಬಿರುಸಿನಿಂದ ನಡೆಯುತ್ತಿರುವ ನೈಋತ್ಯ ಶಿಕ್ಷಕರ ಪದವೀಧರ ಕ್ಷೇತ್ರದ ಮತದಾನ

ನಗರದ ಹಂಪನಕಟ್ಟೆ ವಿಶ್ವವಿದ್ಯಾಲಯ ಕಾಲೇಜಿನ ಐದು ಮತಗಟ್ಟೆಗಳಲ್ಲಿ ಮತದಾರರು ಸರದಿಯಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 8,189 ಮತದಾರರು ಇದ್ದು, ಅವರಲ್ಲಿ 5,539 ಪುರುಷರು, 2,650 ಮಹಿಳೆಯರು ಇದ್ದಾರೆ. ಪದವೀಧರ ಕ್ಷೇತ್ರದಲ್ಲಿ ಒಟ್ಟು 19,971 ಮತದಾರರು ಇದ್ದು, ಅವರಲ್ಲಿ 11,596 ಮಹಿಳೆಯರು ಹಾಗೂ 8,375 ಪುರುಷ ಮತದಾರರು ಈ ಬಾರಿ ಮತದಾನಕ್ಕೆ ಅರ್ಹರಾಗಿದ್ದಾರೆ.ವಿಧಾನಪರಿಷತ್‌ನ ನೈರುತ್ಯ ಪಧವೀಧರ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆಗೆ ಹಂಪನಕಟ್ಟೆಯ ವಿಶ್ವವಿದ್ಯಾಲಯದ ಮತಗಟ್ಟೆಯಲ್ಲಿ ಬೆಳಗ್ಗಿನಿಂದಲೇ ಬಿರುಸಿನಿಂದಲೇ ಮತದಾನ ನಡೆಯುತ್ತಿದೆ.

ಮುಂಜಾನೆಯಿಂದಲೇ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ. ಬೆಳಗ್ಗೆ ಮೋಡಕವಿದ ವಾತಾವರಣವಿದ್ದರೂ, ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಆದರೆ, 11 ಗಂಟೆಯಾಗುತ್ತಲೇ ಧಾರಾಕಾರವಾಗಿ ಮಳೆ ಸುರಿಯಲಾರಂಭಿಸಿದೆ. ಪರಿಣಾಮ ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತಿರುವ ಮತದಾರರು, ಬೂತ್ ನಲ್ಲಿ ಕುಳಿತುಕೊಳ್ಳುವ ಏಜೆಂಟ್ ಗಳು ಕೊಂಚ ತೊಂದರೆ ಅನುಭವಿಸಿದರು.

mangalore university

ಮಂಗಳೂರು ವಿಶ್ವ ವಿದ್ಯಾಲಯ ಕಾಲೇಜಿನ ಮತಗಟ್ಟೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮೊದಲಾದ ರಾಜಕೀಯ ಗಣ್ಯರು ತಮ್ಮ ಹಕ್ಕು ಚಲಾಯಿಸಿದರು.

ನೈಋತ್ಯ ಪದವೀಧರ ಕ್ಷೇತ್ರದಲ್ಲಿ 19971 ಮತದಾರರಿದ್ದು, ಇದರಲ್ಲಿ 8375 ಪುರುಷರು, 11596 ಮಹಿಳೆಯರಿದ್ದಾರೆ. ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ದ.ಕ ಜಿಲ್ಲೆಯಲ್ಲಿ 8189 ಮತದಾರರಿದ್ದು, ಇದರಲ್ಲಿ 2,656 ಪುರುಷರು 5,539 ಮಹಿಳೆಯರಿದ್ದಾರೆ.

govt women polytechnic

Related Posts

Leave a Reply

Your email address will not be published.