ಆ.22;ವೆನ್ಲಾಕ್ ಆಸ್ಪತ್ರೆಯು ಸಮುದಾಯ ವಾಚನಾಲಯ ಉದ್ಘಾಟನಾ ಕಾರ್ಯಕ್ರಮ

ಮಂಗಳೂರು;ವೆನ್ಲಾಕ್ ಆಸ್ಪತ್ರೆ ಮಂಗಳೂರು.ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದ.ಕ ಜಿಲ್ಲೆ. ಯುವ ರೆಡ್ ಕ್ರಾಸ್ ಘಟಕ ಮಂಗಳೂರು ವಿಶ್ವ ವಿದ್ಯಾನಿಲಯ,ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ(ರಿ)ಇದರ ಸಂಯುಕ್ತ ಆಶ್ರಯದಲ್ಲಿ ದಿನಾಂಕ22-8-2022.
ಸೋಮವಾರ ಬೆಳಿಗ್ಗೆ 10ಗಂಟೆಗೆ. ವೆನ್ಲಾಕ್ ಆಸ್ಪತ್ರೆ ಮಂಗಳೂರು ಆವರಣದಲ್ಲಿಸಮುದಾಯ ವಾಚನಾಲಯದಲ್ಲಿ
ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ದಕ್ಷಿಣ ಕನ್ನಡ ಸೇರಿದಂತೆ ನೆರೆಹೊರೆಯ ಜಿಲ್ಲೆ ಗಳಿಂದ ವೆನ್ಲಾಕ್ ಆಸ್ಪತ್ರೆಗೆ ಸಾಕಷ್ಟು ರೋಗಿಗಳು ಚಿಕಿತ್ಸೆ ಗಾಗಿ ಬರುತ್ತಾರೆ,ಅವರ ಜೊತೆ ಅವರ ಸಹಾಯ ಕ್ಕಾಗಿ ಅವರ ಕುಟುಂಬದ ಸದಸ್ಯರು ಬರುತ್ತಾರೆ. ಕೆಲವೊಮ್ಮೆ ಅಪಘಾತದಲ್ಲಿ ಮೂಳೆ ಮುರಿತಕ್ಕೆ ಒಳಗಾದ ರೋಗಿಗಳು ಸಾಕಷ್ಟು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಗಾಗಿ ಉಳಿಯ ಬೇಕಾಗುತ್ತದೆ.ಅವರಿಗೆ ದಿನ ಪತ್ರಿಕೆ ಗಳು,ಉಪಯುಕ್ತ ನಿಯತಕಾಲಿಕೆಗಳು, ಪುಸ್ತಕಗಳನ್ನು ಒದಗಿಸುವುದು.ಓದುವ ಹವ್ಯಾಸ ಕ್ಕೆ ಪ್ರೋತ್ಸಾಹ ನೀಡುವ ಉದ್ದೇಶ ದಿಂದ ದಾನಿಗಳು ಸಂಸ್ಥೆ ಗಳ ನೆರವಿನಿಂದ ಈ ಸಮುದಾಯ ವಾಚನಾಲಯ ಆರಂಭಿಸಲು ಸಮನ್ವಯ ಸಮಿತಿ ಮುತುವರ್ಜಿ ವಹಿಸಿತು. ಈ ರೀತಿ ರೂಪುಗೊಂಡ ವಿಶಿಷ್ಟ ಯೋಜನೆ ಆ.22ರಂದು ಸಾರ್ವಜನಿಕ ಓದುಗರಿಗೆ ದೊರೆಯಲಿದೆ. ಕಾರ್ಯಕ್ರಮದ ಉದ್ಘಾಟಕರಾಗಿ -ಡಾ.ರಾಜೇಂದ್ರ ಕೆ.ವಿ.ಐಎಎಸ್ ಜಿಲ್ಲಾ ಧಿಕಾರಿ ಗಳು ದ.ಕ.ಜಿಲ್ಲೆ ಭಾಗವಹಿಸಲಿದ್ದಾರೆ.

ಅಧ್ಯಕ್ಷತೆ :- ಶ್ರೀ ವೇದವ್ಯಾಸ ಕಾಮತ್ ಶಾಸಕ ರು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ. ದಾನಿಗಳಿಗೆ ಗೌರವಾರ್ಪಣೆ :-ಶ್ರೀ ಪ್ರೇಮಾನಂದ ಶೆಟ್ಟಿ ಮಹಾ ಪೌರರು ಮಂಗಳೂರು ಮಹಾನಗರ ಪಾಲಿಕೆ. ಮುಖ್ಯ ಅತಿಥಿ:-ಡಾ.ಶಾಂತರಾಮ ಶೆಟ್ಟಿ ಸಹ ಕುಲಾಧಿಪತಿ ಗಳು ನಿಟ್ಟೆ (ಪರಿಗಣಿತ)ವಿಶ್ವ ವಿದ್ಯಾನಿಲಯ. ಅತಿಥಿ ಗಳು -ಡಾ.ಕುಮಾರ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದ.ಕ.ಜಿ.ಪಂಚಾಯತ್.
.ಶ್ರೀ ಅಕ್ಷಯ್ ಶ್ರೀ ಧರ್ ಆಯಕ್ತರು ಮಂಗಳೂರು ಮಹಾನಗರ ಪಾಲಿಕೆ. ಪ್ರೊ.ಪಿ.ಎಸ್. ಯಡಪಡಿತ್ತಾಯ ಕುಲಪತಿಗಳು ಮಂಗಳೂರು ವಿಶ್ವ ವಿದ್ಯಾನಿಲಯ.ಐಕಳ ಹರೀಶ್ ಶೆಟ್ಟಿ ಅಧ್ಯಕ್ಷರು ಜಾಗತಿಕ ಬಂಟರ ಸಂಘಟನೆ ಗಳ ಒಕ್ಕೂಟ.ಶ್ರೀ ಸಾಂಬ ಶಿವರಾವ್ ಆಡಳಿತ ನಿರ್ದೇಶಕ ರು ಅನಘ ರಿಫೈನರಿ ಪ್ರೈವೇಟ್ .ಲಿ.ಶ್ರೀ ಮುರುಗೇಶ್ ಹಿರಿಯ ಪ್ರಬಂಧಕರು ಕೆಐಒಸಿಎಲ್ (ಎಚ್ .ಆರ್ &ಕೊ ಆರ್ಡಿನೇಶನ್ ) ಮತ್ತು ಸಮುದಾಯ ವಾಚನಾಲಯದ ಸಮನ್ವಯ ಸಮಿತಿಯ ಸದಸ್ಯ ರಾದ ಡಾ.ಸದಾಶಿವ (ಜಿಲ್ಲಾ ಶಸ್ತ್ರ ಚಿಕಿತ್ಸಕರು ಮತ್ತು ಅಧೀಕ್ಷಕ ರು ವೆನ್ ಲಾಕ್ ಆಸ್ಪತ್ರೆ)ಶ್ರೀ ಶಾಂತಾರಾಮ ಶೆಟ್ಟಿ ಸಿ.ಎ (ಚಯರ್ ಮ್ಯಾನ್ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದ.ಕ ಜಿಲ್ಲೆ)ಶ್ರೀ ಶ್ರೀನಿವಾಸ ನಾಯಕ್ ಇಂದಾಜೆ (ಅಧ್ಯಕ್ಷ ರು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ(ರಿ). ಡಾ.ಗಣಪತಿ ಗೌಡ (ನೋಡಲ್ ಅಧಿಕಾರಿ ಯೂತ್ ರೆಡ್ ಕ್ರಾಸ್ ಘಟಕ ಮಂಗಳೂರು ವಿಶ್ವ ವಿದ್ಯಾನಿಲಯ) ಭಾಗವಹಿಸಲಿದ್ದಾರೆ ಎಂದು ಸಮುದಾಯ ವಾಚನಾಲಯ ಮಂಗಳೂರು. ದ.ಕ.ಜಿಲ್ಲೆಯ ಸಮನ್ವಯ ಸಮಿತಿಯ ಪ್ರಕಟಣೆ ತಿಳಿಸಿದೆ.