ಲಿಂಗ ಸಮಾನತೆಯಲ್ಲಿ ಎರಡು ಸ್ಥಾನ ಕೆಳಕ್ಕೆ ಜಾರಿದ ಭಾರತ
ವಿಶ್ವ ಸಂಸ್ಥೆಯ ಡಬ್ಲ್ಯೂ ಈ ಫ್- ಲೋಕ ಆರೋಗ್ಯ ವೇದಿಕೆ ಹೊರಗಿಟ್ಟಿರುವ ಹೊಸ ಸೂಚ್ಯಂಕದಂತೆ ಭಾರತವು ಲಿಂಗ ಸಮಾನತೆಯಲ್ಲಿ ಕಳೆದ ವರುಷ ಇದ್ದ 127ರಿಂದ 129ನೇ ಸ್ಥಾನಕ್ಕೆ ಕುಸಿದಿದೆ.ಕ್ರಮವಾಗಿ ಮೊದಲ ಐದು ಸ್ಥಾನಗಳಲ್ಲಿ ಐಸ್‌ಲ್ಯಾಂಡ್, ಫಿನ್ಲ್ಯಾಂಡ್, ನಾರ್ವೆ, ನ್ಯೂಜಿಲ್ಯಾಂಡ್ ಮತ್ತು ಸ್ವೀಡನ್‌ಗಳು ಇವೆ. ಬ್ರಿಟನ್ 14ನೇ ಸ್ಥಾನದಲ್ಲಿದ್ದರೆ ಅಮೆರಿಕ ಸಂಯುಕ್ತ ಸಂಸ್ಥಾನವು 43ನೇ ಸ್ಥಾನದಲ್ಲಿದೆ.ತೆಂಕಣ ಏಶಿಯಾದಲ್ಲಿ ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಭೂತಾನ್ ಬಳಿಕದ ಸ್ಥಾನದಲ್ಲಿದೆ ಭಾರತ.
ಜಗತ್ತಿನಲ್ಲಿ ಲಿಂಗ ತಾರತಮ್ಯದ ಅಂತರ ಇನ್ನೂ 68.5 ಶೇಕಡಾ ಉಳಿದಿದೆ. ಈ ರೀತಿ ಸಾಗಿದರೆ ಲಿಂಗ ಸಮಾನತೆ ಸಾಧಿಸಲು ಇನ್ನೂ 134 ವರುಷ ಬೇಕಾಗುತ್ತದೆ. ಹೆಣ್ಣುಮಕ್ಕಳು 2158ನೇ ಇಸವಿಯವರೆಗೆ ಕಾಯಲಾಗದು. ಸರಕಾರಗಳು ಏನಾದರೂ ರಚನಾತ್ಮಕ ಯೋಜನೆ ರೂಪಿಸಬೇಕು ಎಂದು ಡಬ್ಲ್ಯೂ ಈ ಫ್ ವ್ಯವಸ್ಥಾಪಕ ನಿರ್ವಹಕಿ ಸಾದಿಯ ಜಾಹಿತಿ ಒತ್ತಾಯ ಮಾಡಿದ್ದಾರೆ.