ಯೋಗ ಜೀವನ ಸಾಧನೆಗೆ ಪ್ರೇರಣೆಯಾಗಲಿ…ಶ್ರೀ ಮಹೇಶ್.ಜೆ.

ಆವಿಷ್ಕಾರ ಯೋಗ ಮಂಗಳೂರು ಹಾಗೂ ದಕ್ಷಿಣ ಕನ್ನಡ ಯೋಗಾಸನ ಸ್ಪೋರ್ಟ್ ಅಸೋಸಿಯೇಶನ್ ಸಹಯೋಗದಲ್ಲಿ ನಡೆದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಯೋಗಾಸನ ಸ್ಪರ್ಧೆಯನ್ನು ಪಂಪವೆಲ್ ಗಣೇಶೋತ್ಸವದ ಸಮುಖ ಸಭಾಭವನದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ಮಹೇಶ್ ಜೆ. ಉಪಪ್ರಧಾನ ವ್ಯವಸ್ಥಾಪಕರು ಮತ್ತು ಪ್ರಾದೇಶಿಕ ಮುಖ್ಯಸ್ಥರು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇವರು ಮಾತನಾಡುತ್ತಾ ಯೋಗ ಒಂದು ಉತ್ತಮ ಜೀವನ ಸಾಧನೆ. ಯೋಗದ ಕ್ಷೇತ್ರ ತುಂಬಾ ಉನ್ನತವಾಗಿ ಬೆಳೆದಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ಡಾ| ಕೆ. ಕೃಷ್ಣ ಶರ್ಮ ಮುಖ್ಯಸ್ಥರು ಯೋಗ ವಿಜ್ಞಾನ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯ ಇವರು ಮಾತನಾಡುತ್ತಾ ದೇಹ ಮತ್ತು ಮನಸ್ಸಿನ ಕ್ಲೇಶಗಳನ್ನು ತೊಡೆಯಲು ಯೋಗ ಸಾಧನೆ ಸಹಕಾರಿ ಎಂದರು

. ದಕ್ಷಿಣ ಕನ್ನಡ ಪತ್ರಕರ್ತ ಸಂಘದ ಅಧ್ಯಕ್ಷ ಶ್ರೀ ಶ್ರೀನಿವಾಸ ಇಂದಾಜೆ, ಶ್ರೀ ಮಹಾಬಲ ಕೊಟ್ಟಾರಿ ಅಧ್ಯಕ್ಷ ಸಿವಿಲ್ ಕಾಂಟ್ರಾಕ್ಟರ್ಸ್ ಅಸೋಸಿಯೇಷರಿ, ಶ್ರೀ ಎಂ. ಆರ್ ನಾಯಕ್ ಅಧ್ಯಕ್ಷರು ಯೋಗ ವಿದ್ಯಾ ಟ್ರಸ್ಟ್ (ರಿ) ಮಂಗಳೂರು, ಯೋಗ ಗುರು ಯೋಗರತ್ನ ಗೋಪಾಲ ಕೃಷ್ಣ ದೇಲಂಪಾಡಿ, ಶ್ರೀ ಹರಿ ಪ್ರಸಾದ್ ಕೆ. ಅಧ್ಯಕ್ಷರು ಲಯನ್ಸ್ ಮಂಗಳೂರು ಸ್ಮಾರ್ಟ್ ಸಿಟಿ, ಉಪಸ್ಥಿತರಿದ್ದರು.

ಆವಿಷ್ಕಾರ ಯೋಗ ಸ್ಥಾಪಕ, ದ.ಕ.ಜಿ ಯೋ.ಸ್ಫೋ.ಅ.(ರಿ) ನ ಅಧ್ಯಕ್ಷರು ಕುಶಾಲಪ್ಪ ಗೌಡ ಎನ್. ಪ್ರಸ್ತಾವಿಕ ಮಾತನಾಡುತ್ತಾ ಯೋಗ ಪ್ರತಿಭೆಗಳನ್ನು ಗುರುತಿಸಿವುದು ಹಾಗೂ ಯೋಗ ಸಾಧಕರಿಗೆ ಪ್ರೇರಣೆ ಮಾಡುವುದು ಸ್ವರ್ಧೆಯ ಉದ್ದೇಶ ಎಂದರು. ಯೋಗ ಗುರು ಶ್ರೀ ಜಗದೀಶ ಶೆಟ್ಟಿ ಹಾಗೂ ಶ್ರೀಮತಿ ರೂಪ ಶ್ರೀ ಜಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಮತಿ ಸಂಜನಾ ಕೃಷ್ಣ ಮೂರ್ತಿ ಧನ್ಯವಾದ ಗೈದರು.
