HomeFresh Newsಯುವವಾಹಿನಿ ಪುತ್ತೂರು ಘಟಕ : ಜುಲೈ 9ರಂದು ಬಿಲ್ಲವ ವಧು-ವರಾನ್ವೇಷಣೆ ಕಾರ್ಯಕ್ರಮ

ಯುವವಾಹಿನಿ ಪುತ್ತೂರು ಘಟಕ : ಜುಲೈ 9ರಂದು ಬಿಲ್ಲವ ವಧು-ವರಾನ್ವೇಷಣೆ ಕಾರ್ಯಕ್ರಮ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕ ಇವರ ಆಶ್ರಯದಲ್ಲಿ ಬಿಲ್ಲವ ವಧು-ವರಾನ್ವೇಷಣೆ ಕಾರ್ಯಕ್ರಮವು ಜುಲೈ 9ರಂದು ಪುತ್ತೂರು ಬಪ್ಪಳಿಗೆಯ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸಭಾಭವನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಜುಲೈ 9ರ ಭಾನುವಾರದಂದು ಬೆಳಿಗ್ಗೆ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿ ಅವರು ಉದ್ಘಾಟಿಸಲಿದ್ದಾರೆ.

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಘಟಕದ ಅಧ್ಯಕ್ಷರಾದ ಉಮೇಶ್ ಬಾಯಾರು ಅವರು ವಹಿಸಲಿದ್ದು, ಬಲ್ನಾಡು ದಂಡನಾಯಕ ಶ್ರೀ ಉಳ್ಳಾಲ್ತಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ನಾರಾಯಣ ಪೂಜಾರಿ ನೆಕ್ಕರೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅದೇ ದಿನ ಮಧ್ಯಾಹ್ನ ಸಮಾರೋಪ ಸಮಾರಂಭವು ನಡೆಯಲಿದೆ. ವಧು ವರಾನ್ವೇಷಣೆ 2023ರ ಸಂಚಾಲಕರಾದ ಜಯರಾಮ ಬಿ.ಎನ್ , ಸಮಾಜ ಸೇವಾ ನಿರ್ದೇಶಕರಾದ ಮೋಹನ ಶಿಬಿರ, ಕಾರ್ಯದರ್ಶಿ ಅಣ್ಣಿ ಪೂಜಾರಿ, ಅಧ್ಯಕ್ಷರಾದ ಉಮೇಶ್ ಬಾಯಾರು ಅವರು ಕಾರ್ಯಕ್ರಮಕ್ಕೆ ಸಹಕರಿಸಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರಾದ ಉಮೇಶ್ ಬಾಯಾರ್ 9449332896 , 9900654940 ಕಾರ್ಯದರ್ಶಿ ಅಣ್ಣಿ ಪೂಜಾರಿ 9900383315 ಹಾಗೂ ಸಂಚಾಲಕರಾದ ಜಯರಾಮ್ ಬಿ.ಎನ್ 9901724973 ಅವರನ್ನು ಸಂಪರ್ಕಿಸಬಹುದು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments