ಪಡುಬಿದ್ರಿ ಜಂಕ್ಷನ್ ನಲ್ಲಿ ಟ್ಯಾಂಕರ್ ಕಂಟೈನರ್ ಡಿಕ್ಕಿ : ಸಂಚಾರ ಅಸ್ತವ್ಯಸ್ತ
ಪಡುಬಿದ್ರಿಯ ಕಾರ್ಕಳ ರಸ್ತೆಯ ತಿರುವಲ್ಲಿ, ಟ್ಯಾಂಕರ್ ಚಾಲಕನ ಅವಸರದ ಚಾಲನೆಯಿಂದಾಗಿ ಕಂಟೈನರ್‌ವೊಂದಕ್ಕೆ ಡಿಕ್ಕಿಯಾದ ಪರಿಣಾಮ ರಸ್ತೆ ತಿರುವಲ್ಲಿದ್ದ ರಿಂಗ್ ಹಾಗೂ ವಾಹನಗಳೆರಡು ಒಂದಕ್ಕೊಂದು ಅಂಟಿಕೊಂಡ ಪರಿಣಾಮ ಸುಮಾರು ಒಂದು ಗಂಟೆಗಳ ಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತ ಗೊಂಡಿದೆ.
ಮಂಗಳೂರು ಕಡೆಯಿಂದ ಬಂದ ಕಂಟೈನರ್ ಜಂಕ್ಷನ್‌ನಲ್ಲಿ ಕಾರ್ಕಳ ರಸ್ತೆಗೆ ತಿರುಗುತ್ತಿದ್ದ ವೇಳೆ, ಹಿಂದಿನಿಂದ ಇಂಧನ ಏರಿಕೊಂಡು ಬಂದ ಟ್ಯಾಂಕರ್ ಚಾಲಕ, ಟ್ಯಾಂಕರನ್ನು ಕಂಟೈನರ್ ನ ಎಡಬದಿಯಿಂದ ತೂರಿಸಿ ಕಂಟೈನರ್‌ಗೆ ಡಿಕ್ಕಿಯಾದ ಪರಿಣಾಮ ಎರಡೂ ವಾಹನಗಳು ಒಂದಕ್ಕೊಂದು ಸಿಲುಕಿಕೊಂಡು ಹಿಂದೆ ಮುಂದೆ ಚಲಿಸದ ಸ್ಥಿತಿಯಲ್ಲಿತ್ತು ಬಳಿಕ ಒಂದು ಗಂಟೆ ಕಳೆದ ಬಳಿಕ ಸಾರ್ವಜನಿಕರ ನೆರವಿನಿಂದ ವಾಹನಗಳ ತೆರವು ಕಾರ್ಯ ನಡೆದಿದೆ.