HomeFresh Newsಲೇಖಕರ ಸಂಘದ ಅಧ್ಯಕ್ಷರಾಗಿ ಉಮರ್ ಯು.ಹೆಚ್. ಪುನರಾಯ್ಕೆ

ಲೇಖಕರ ಸಂಘದ ಅಧ್ಯಕ್ಷರಾಗಿ ಉಮರ್ ಯು.ಹೆಚ್. ಪುನರಾಯ್ಕೆ

ಮುಸ್ಲಿಮ್ ಲೇಖಕರ ಸಂಘದ ಕೇಂದ್ರ ಸಮಿತಿ ಅಧ್ಯಕ್ಷರಾಗಿ ಸಾಮಾಜಿಕ ಕಾರ್ಯಕರ್ತ, ಅಂಕಣಕಾರ, ಕರಿಯರ್ ಕೌನ್ಸಿಲರ್ ಉಮರ್ ಯು.ಹೆಚ್. ಪುನರಾಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಂಘದ ಮಹಾಸಭೆ ಮತ್ತು  ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಆಯ್ಕೆ ನಡೆದಿದ್ದು, ಉಪಾಧ್ಯಕ್ಷರಾಗಿ ಆಲಿ ಕುಂಞಿ ಪಾರೆ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎ. ಮುಹಮ್ಮದ್ ಅಲಿ, ಕಾರ್ಯದರ್ಶಿಯಾಗಿ ರಿಯಾಝ್ ಅಹ್ಮದ್, ಕೋಶಾಧಿಕಾರಿಯಾಗಿ ಮುಹಮ್ಮದ್ ಮುಹ್ಸಿನ್ ಆಯ್ಕೆಯಾಗಿದ್ದಾರೆ.
ಏ.ಕೆ. ಕುಕ್ಕಿಲ, ಹುಸೈನ್ ಕಾಟಿಪಳ್ಳ, ಶೌಕತ್ ಅಲಿ, ಸಈದ್ ಇಸ್ಮಾಈಲ್, ಬಿ.ಎ. ಸಲೀಮ್ ಬೋಳಂಗಡಿ ಮತ್ತು ಯಾಕುಬ್ ಕಲ್ಲರ್ಪೆ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments