ವೈರಲ್ ಆಗ್ತಿರೋ ವಿಡಿಯೋ ನನ್ನದಲ್ಲ: ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರಲಿದೆ- ನಳಿನ್ ಕುಮಾರ್ ಕಟೀಲ್
ನಾಯಕತ್ವ ಬದಲಾವಣೆ ಕುರಿತಂತೆ ವೈರಲ್ ಆಗಿರುವ ವಿಡಿಯೋಗೂ ನನಗೂ ಸಂಬಂಧವಿಲ್ಲ. ಮುಖ್ಯಮಂತ್ರಿಗಳಿಗೆ ಈ ಪತ್ರ ಬರೆಯುತ್ತೇನೆ ಹಾಗೂ ತನಿಖೆಗೆ ಆಗ್ರಹಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಆಡಿಯೋ ವೈರಲ್ ಕುರಿತಾಗಿ ಮಂಗಳೂರಲ್ಲಿ ಮಾತನಾಡಿದ್ರು. ತನಿಖೆಯ ಬಳಿಕ ಆಡಿಯೋದ ಸತ್ಯಾಸತ್ಯತೆ ಹೊರ ಬರಲಿದೆ. ನಾಯಕತ್ವದ ಬದಲಾವಣೆ ಕುರಿತು ನಮ್ಮಲ್ಲಿ ಯಾವುದೇ ಚರ್ಚೆಗಳಿಲ್ಲ.ನಮ್ಮ ಪಾರ್ಟಿಗೆ ಆತ್ಮ ಯಡಿಯೂರಪ್ಪ. ಅವರೇ ನಮ್ಮ ಸರ್ವ ಸಮ್ಮತದ ನಾಯಕ.ಈಶ್ವರಪ್ಪ, ಜಗದೀಶ್ ಶೆಟ್ಟರ್ ಪಾರ್ಟಿಯ ಎರಡು ಕಣ್ಣುಗಳು ಇದ್ದಂತೆ.ತನಿಖೆಯಾಗದೇ ಯಾರ ಬಗ್ಗೆಯೂ ಸಂಶಯ ವ್ಯಕ್ತಪಡಿಸುವುದು ಸರಿಯಲ್ಲ.ತನಿಖೆ ಮೂಲಕ ಸತ್ಯ ಹೊರಬರಲಿದೆ.ಎಲ್ಲದಕ್ಕೂ ತನಿಖೆಯ ಬಳಿಕ ಉತ್ತರ ನೀಡ್ತೇನೆ.ನ್ಯಾಯಾಲಯದ ಮೊರೆ ಹೋಗುವ ಬಗ್ಗೆಯೂ ಚಿಂತನೆ ನಡೆಸಿದ್ದೇನೆ ಎಂದವರು ತಿಳಿಸಿದರು.