ಮೂಡುಬಿದರೆ: ದಸರಾ ಯೋಗೋತ್ಸವ ಸಮಾರೋಪ

ಮೂಡುಬಿದಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ (ರಿ), ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಪಿ.ಟ್ರಸ್ಟ್ (ರಿ), ಮೂಡುಸಿದಿರೆ ಇವುಗಳ ವತಿಯಿಂದ ತಾಲೂಕಿನ ೮೦ ಕೇಂದ್ರಗಳಲ್ಲಿ 7 ದಿನಗಳ ಕಾಲ ಏಕಕಾಲದಲ್ಲಿ ಅನುಭವಿ ಯೋಗ ಶಿಕ್ಷಕರಿಂದ ನಡೆದ ಯೋಗ ಶಿಬಿರ ದಸರಾ ಯೋಗೋತ್ಸವ’ವು ಪಾಲಡ್ಕ, ಬ್ರಹ್ಮಶ್ರೀ ನಾರಾಯಣಗುರು ಜಿಲ್ಲವ ಸಂಘದಲ್ಲಿ ಶನಿವಾರ ಸಮಾಪನಗೊಂಡಿತು.

ಶ್ರೀ ಕ್ಷೇತ್ರದ ಗ್ರಾ.ಯೋಜನೆಯ ದ.ಕ.ಜಿಲ್ಲಾ ಯೋಜನಾ ನಿರ್ದೇಶಕ ಸತೀಶ್ ಶೆಟ್ಟಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಶಾಲಾ ಮಟ್ಟದಲ್ಲಿ ಆರಂಭಗೊಂಡ ಯೋಗ ಕಾರ್ಯಕ್ರಮಗಳು ಇಂದು ಗ್ರಾಮ ಮಟ್ಟಕ್ಕೆ ತಲುಪಿದೆ, ಪ್ರತಿನಿತ್ಯ ಯೋಗವನ್ನು ಮಾಡುವುದರಿಂದ ಉತ್ತಮ ಆರೋಗ್ಯದೊಂದಿಗೆ ನೆಮ್ಮದಿಯ ಬದುಕನ್ನು ಕಟ್ಟಲು ಸಾಧ್ಯವಿದೆ. ಹಲವಾರು ಜನರು ಅನಾರೋಗ್ಯಕ್ಕೆ ತುತ್ತಾಗಿ ಹಣವನ್ನು ತಮ್ಮ ಜೀವನವ ನ್ನು ಕಳೆದುಕೊಂಡಿದ್ದಾರೆ. ತಾವು ಯಾವುದೇ ಸಂದರ್ಭದಲ್ಲಿ ಒತ್ತಡಕ್ಕೆ ಒಳಗಾಗದೆ, ಧೈರ್ಯಗೆಡದೆ ಸಂತೋಷದಿದ ಜೀವನವನ್ನು ಸಾಗಿಸಬೇಕಾಗಿದೆ ಇದಕ್ಕಾಗಿ ಪ್ರತಿನಿತ್ಯ ಅರ್ಧ ಗಂಟೆ ಕಾಲ ಯೋಗ ಮಾಡುವುದನ್ನು ರೂಢಿಸಿಕೊಂಡರೆ ಉತ್ತಮ ಎಂದು ಸಲಹೆ ನೀಡಿದರು.

ಕಡಂದಲೆ ಬ್ರಹ್ಮ ಶ್ರೀ ಅಲ್ಲವ ಸಂಘದ ಅಧ್ಯಕ್ಷ ಸುಧಾಕರ್ ಅಂಚನ್ ಅಧ್ಯಕ್ಷತೆ ವಹಿ ಸಿದ್ದರು. ಪಾಲಡ್ಕ ಗ್ರಾ.ಪಂ.ಅಧ್ಯಕ್ಷ ದಿನೇಶ್ ಕಾಂಗ್ಲಾ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಯೋಗ ಮಾಡಿ ಉತ್ತಮ ಜೀವನ ಪದ್ಧತಿಯನ್ನು ಮೈಗೂಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಸುಭಾಶ್ಚಂದ್ರ ಚೌಟ, ಸಂಪಿಗೆ ವಲಯದ ಸ್ಟ ಸ.ಸಂಘಗಳ ಒಕ್ಕೂಟದ ಅಧ್ಯಕ್ಷ ಜಗದೀಶ್ ಕೋಟ್ಯಾನ್ ಉಪಸ್ಥಿತರಿದ್ದರು.

ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಮೂಡುಬಿದಿರೆ ತಾಲೂಕಿನ ಯೋಜನಾಧಿಕಾರಿ ನಾರಾಯಣ ಶೆಟ್ಟಿ ಸ್ವಾಗತಿಸಿದರು. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ.ವಿ. ಶಶಿಕಾಂತ್ ಟ್ರೈನ್ ಪ್ರಾಸ್ತಾವಿಕವಾಗಿ ಮಾತನಾಡಿ ಈಗಾಗಲೇ ಎರಡು ಲಕ್ಷದ ಮೂವತ್ತು ಸಾವಿರ ಜನರಿಗೆ ಈಗಾಗಲೇ ತರಬೇತಿಯನ್ನು ನೀಡಲಾಗಿದೆ. ಮೂಡುವಿರೆ ತಾಲೂಕಿ ಕೇಂದ್ರಗಳಲ್ಲಿ ನಡೆದ ಶಿಬಿರದಲ್ಲಿ ೧೮೫೦ ಮಂದಿ ಪಾಲ್ಗೊಂಡು ಅಧಿಕೃತವಾಗಿ ಯೋಗ ಶಿಕ್ಷಣವನ್ನು ಪಡೆದುಕೊಂಡಿದ್ದಾರೆಂದು ತಿಳಿಸಿದ ಅವರು ನಮ್ಮ ಆರೋಗ್ಯ ನಮ್ಮ ಕೈಯಲ್ಲಿರಬೇಕಾದರೆ ಯೋಗ ಮಾಡಿ ಇಲ್ಲದಿದ್ದರೆ ನಮ್ಮ ಆರೋಗ್ಯ ವೈದ್ಯರ ಕೈಯಲ್ಲಿರುತ್ತದೆ ಎಂದು ಹೇಳಿದರು. ಸವಿತಾ ಟಿ.ಎನ್ ಮತ್ತು ಪದ್ಮನಾಭ ಅವರು ಅನಿಸಿಕೆಯನ್ನು ಹಂಚಿಕೊಂಡರು.

ಯೋಜನೆಯ ಬೆಳುವಾಯಿ ವಲಯದ ಮೇಲ್ವಿಚಾರಕಿ ಸುಮಲತಾ, ಬೆಳುವಾಯಿ ವಲಯದ ಸುಮಲತಾ ಹಾಗೂ ಅಲಂಗಾರು ವಲಯದ ಮೇಲ್ವಿಚಾರಕ ವಿಠಲ ಅವರನ್ನು ಗುರುತಿಸಲಾಯಿತು, ಸಂಪಿಗೆ, ವಲಯದ ಮೇಲ್ವಿಚಾರಕಿ ಪುಷ್ಪಾ ಕಾರ್ಯಕ್ರಮ ನಿರೂಪಿಸಿದರು. ರಾಜ್ಯ ಯೋಗ ಸಂಘಟಕ ಶೇಖರ ಕಡ್ತಲ ವಂದಿಸಿದರು.

Related Posts

Leave a Reply

Your email address will not be published.