ಸಿಕ್ಕಿಂನಲ್ಲಿ ಎಸ್‌ಕೆಎಂ, ರಾಷ್ಟ್ರೀಯ ಪಕ್ಷಗಳು ಔಟ್:ಅರುಣಾಚಲ ಪ್ರದೇಶ ಮತ್ತೆ ಬಿಜೆಪಿ ಕೈವಶ

ವಿಧಾನ ಸಭಾ ಚುನಾವಣೆಯಲ್ಲಿ ಸಿಕ್ಕಿಂನಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಮತ್ತು ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಎರಡನೆಯ ಬಾರಿ ಅಧಿಕಾರದ ಗದ್ದುಗೆಗೆ ಏರಿವೆ.
ಎಸ್‌ಕೆಎಂ- ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾವು ಎರಡನೆಯ ಬಾರಿ ಏಕೈಕ ಪಕ್ಷವಾಗಿ ಅಧಿಕಾರಕ್ಕೆ ಏರಿದೆ. ಅದು ವಿಧಾನ ಸಭೆಯ 32ರಲ್ಲಿ 31 ಸ್ಥಾನ ಗೆದ್ದುಕೊಂಡಿತು. ರಾಷ್ಟ್ರೀಯ ಪಕ್ಷಗಳಿಗೆ ಸಿಕ್ಕಿಂ ಮಣೆ ಹಾಕಿಲ್ಲ.

ಅರುಣಾಚಲ ಪ್ರದೇಶದಲ್ಲಿ ಬಿಜೆಪಿಯು 46 ಸ್ಥಾನಗಳಲ್ಲಿ ಗೆಲುವು ಕಂಡು ಮತ್ತೆ ಅಧಿಕಾರಕ್ಕೆ ಬಂದಿದೆ. 60 ಕ್ಷೇತ್ರಗಳಲ್ಲಿ 10 ಕಡೆ ಬಿಜೆಪಿ ಅವಿರೋಧವಾಗಿ ಗೆದ್ದಿತ್ತಾದ್ದರಿಂದ 50 ಕಡೆ ಮಾತ್ರ ಮತದಾನ ನಡೆದಿತ್ತು. ಎನ್‌ಪಿಪಿ 5, ಎನ್‌ಸಿಪಿ 3 ಮತ್ತು ಕಾಂಗ್ರೆಸ್ 1 ಕಡೆ ಗೆಲುವು ಕಂಡಿವೆ. ಇಂಡಿಯಾ ಮೈತ್ರಿಯಲ್ಲಿ ಕಾಂಗ್ರೆಸ್ ಗಿಂತ ಶರದ್ ಪವಾರ್ ಅವರ ಎನ್‌ಸಿಪಿ ಮುಂದಿರುವುದು ವಿಶೇಷ. ಉಳಿದವು ಹಂಚಿ ಹೋಗಿವೆ. ಕಾಂಗ್ರೆಸ್ ಪ್ರತಿಪಕ್ಷ ಆಗುವುದನ್ನು ತಡೆಯಲು 5 ಕ್ಷೇತ್ರಗಳ ಫಲಿತಾಂಶ ತಡ ಮಾಡಲಾಗಿದೆ ಎಂದು ಆಪಾದಿಸಲಾಗಿದೆ.
