ಅಕ್ಷರ ಸಂತನ ಮನೆಗೆ ವೃಕ್ಷಮಾತೆ ಭೇಟಿ
ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರ ಮನೆಗೆ ಪದ್ಮಶ್ರೀ ಪುರಸ್ಕೃತೆ ವೃಕ್ಷಮಾತೆ ತುಳಸೀ ಗೌಡ ಅವರು ಹರೇಕಳದ ನ್ಯೂಪಡ್ಪು ಮನೆಯಲ್ಲಿ ಭೇಟಿ ನೀಡಿದರು. ಇಂದು ಬೆಳಗ್ಗೆ ಭೇಟಿ ನೀಡಿದ ತುಳಸಿ ಗೌಡ ಅವರು ಹಾಜಬ್ಬರ ಜೊತೆ ಉಪಹಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಹರೇಕಳ ಗ್ರಾಮಸ್ಥರಿಂದ ತುಳಸಿ ಗೌಡ ಅವರನ್ನು ಅಭಿನಂದಿಸಲಾಯಿತು.