ಅಪಾಯದ ಎಚ್ಚರಿಕೆ ನೀಡಿದ ಹಿಮನದಿಗಳು

ಉತ್ತರಾಖಂಡ, ಹಿಮಾಚಲ ಪ್ರದೇಶಗಳು ಹಲವು ನದಿ ಮೂಲಗಳು. ಅವಕ್ಕೆ ಹಿಮಾಲಯವು ನೀರಿನ ಮೂಲ. ಮಾನವನು ಇಂದು ಪ್ರವಾಸೋದ್ಯಮ ಎಂದು ಅವುಗಳನ್ನು ಮುಳುಗಿಸುತ್ತಿದ್ದಾನೆ.ಹಿಮಾಲಯದ ಹಿಮನದಿಗಳು 40 ವರುಷಗಳಲ್ಲಿ ಹತ್ತು ಪಟ್ಟು ವೇಗದಿಂದ ಚಲಿಸುವುದಾಗಿ ಸಯನ್ಸ್ ಎಡ್ವಾನ್ಸಸ್ ಕಳೆದ ವರಷ ವರದಿ ಮಾಡಿತ್ತು. ಮಾನವ ಚಟುವಟಿಕೆ ಭೂಬಿಸಿಯನ್ನು ಹೆಚ್ಚಿಸಿದರೆ, ಭೂಬಿಸಿಯು ಹಿಮ ಹಾಸು ಮತ್ತು ಹಿಮನದಿಗಳನ್ನು ಹೆಚ್ಚು ವೇಗವಾಗಿ ಕರಗಿಸುತ್ತಿದೆ.
70 ವರುಷ ಹಿಂದೆ ದಿನಕ್ಕೆ ಒಂದೆರಡು ಮೀಟರ್‌ನಷ್ಟು ಚಲಿಸುತ್ತಿದ್ದ ಹಿಮಾಲಯದ ಹಿಮನದಿಗಳು ಈಗ ದಿನಕ್ಕೆ 30 ಮೀಟರ್ ಇಲ್ಲವೇ 98 ಅಡಿ ವೇಗದಲ್ಲಿ ಹರಿಯುತ್ತಿವೆ.

ಜಾಕೋಬ್‌ಶೋನ್ ಇಸಾಬ್ರ್ ಅವರು ಗ್ರೀನ್‌ಲ್ಯಾಂಡಿನಲ್ಲಿ ಸಂಶೋಧನೆ ಮಾಡಿ ಅಲ್ಲಿನ ಹಿಮನದಿಗಳು ದಿನಕ್ಕೆ ಅರ್ಧ ಮೀಟರಿಗೂ ಕಡಿಮೆ ವೇಗ ಇದ್ದವು ಈಗ ದಿನಕ್ಕೆ 3 ಮೀಟರ್‌ನಷ್ಟು ವೇಗವಾಗಿ ಹರಿಯುವುದಾಗಿ ತಿಳಿಸಿದ್ದಾರೆ.
ಜಗತ್ತಿನಲ್ಲಿ ವೇಗವಾಗಿ ಕರಗುತ್ತಿರುವ ಹಿಮನದಿ ಎಂದರೆ ಪಡುವಣ ಅಂಟಾರ್ಕ್ಟಿಕಾದ ’ದ ವೀಕ್ ಅಂಡರ್‌ಬೆಲ್ಲಿ.’ 160 ಮೈಲು ಉದ್ದದ ಇದು ಈಗ ದಿನಕ್ಕೆ 12 ಮೀಟರ್‌ನಷ್ಟು ವೇಗವಾಗಿ ಹರಿಯುತ್ತಿದ್ದು, ಸಾಗರ ಮಟ್ಟ ಏರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಲಿದೆ.

add - Haeir

Related Posts

Leave a Reply

Your email address will not be published.