ಸುಳ್ಯ: ದಿ. ಅಟಲ್ ಬಿಹಾರಿ ವಾಜಪೇಯಿ ಪುಣ್ಯ ದಿನ ಆಚರಣೆ

ಅಟಲ್ ಜಿ ಚಾರಿಟೇಬಲ್ ಟ್ರಸ್ಟ್ ಸುಳ್ಯ ಇದರ ವತಿಯಿಂದ ಸುಳ್ಯದ ನರೇಂದ್ರ ವಿಹಾರದಲ್ಲಿ ಮಾಜಿ ಪ್ರಧಾನಿ, ಅಜಾತಶತ್ರು ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯ ದಿನವನ್ನು ಆಚರಿಸಲಾಯಿತು.


ಈ ಸಭೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಪ್ರಮುಖರು ಹಾಗೂ ಟ್ರಸ್ಟಿನ ಕೋಶಾಧಿಕಾರಿಗಳಾದ ಎ ವಿ ತೀರ್ಥರಾಮ, ಮಾನ್ಯ ಶಾಸಕರು ಹಾಗೂ ಟ್ರಸ್ಟಿಗಳಾದ ಕು. ಭಾಗೀರಥಿ ಮುರುಳ್ಯ ಮತ್ತು ಭಾರತೀಯ ಜನತಾ ಪಾರ್ಟಿಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಟ್ರಸ್ಟಿಗಳಾದ ವಿನಯ್ ಕುಮಾರ್ ಕಂದಡ್ಕರವರು ವಾಜಪೇಯಿಯವರ ನಾಯಕತ್ವದ ಗುಣಗಾನವನ್ನು ಮಾಡಿ, ನಾವೆಲ್ಲರೂ ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಾಗಿದೆ ಎಂದರು. ಟ್ರಸ್ಟಿನ ಅಧ್ಯಕ್ಷರಾದ ಹರೀಶ ಕಂಜಿಪಿಲಿಯವರು ಎಲ್ಲರನ್ನು ಸ್ವಾಗತಿಸಿದರು. ಪಾರ್ಟಿಯ ಜಿಲ್ಲಾ ಸಮಿತಿ ಸದಸ್ಯರು ಹಾಗೂ ಟ್ರಸ್ಟಿಗಳಾದ ವೆಂಕಟ್ ದಂಬೆಕೋಡಿಯವರು ವಂದಿಸಿದರು ಮತ್ತು ಟ್ರಸ್ಟ್ ಕಾರ್ಯದರ್ಶಿಗಳಾದ ಸುಭೋದ್ ಶೆಟ್ಟಿ ಮೇನಾಲ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಸತೀಶ್ ನೆಡಿಲು ಇವರಿಗೆ ಧನಸಹಾಯ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಉಪಾಧ್ಯಕ್ಷರು ಹಾಗೂ ಟ್ರಸ್ಟಿಗಳಾದ ರಾಕೇಶ್ ರೈ ಕೆಡಂಜಿ, ಭಾರತೀಯ ಜನತಾ ಪಾರ್ಟಿಯ ಸುಳ್ಯ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪ್ರದೀಪ್ ರೈ ಮನವಳಿಕೆ, ಯುವ ಮೋರ್ಚಾ ಅಧ್ಯಕ್ಷರಾದ ಶ್ರೀಕಾಂತ್ ಮಾವಿನಕಟ್ಟೆ, ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ಇಂದಿರಾ ಬಿ.ಕೆ., ಯುವ ಮೋರ್ಚ ಕಾರ್ಯದರ್ಶಿಗಳಾದ ಪ್ರದೀಪ್ ಕೋಲ್ಲರಮೂಲೆ, ಡಿಸಿಸಿ ಬ್ಯಾಂಕ್ ನಿರ್ದೇಶಕರು ಹಾಗೂ ಟ್ರಸ್ಟಿಗಳಾದ ಎಸ್.ಎನ್.ಮನ್ಮಥ, ಟ್ರಸ್ಟಿಗಳಾದ ಕೇಶವ ಭಟ್ ಮುಳಿಯ, ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು, ಪಾರ್ಟಿಯ ಪ್ರಮುಖರಾದ ಸುನಿಲ್ ಕೇರ್ಪಳ, ಜಿನ್ನಪ್ಪ ಪೂಜಾರಿ, ಆಶಾ ರೈ, ನಾಗೇಶ್ ಪಿಆರ್, ಕೌಶಲ್, ತೀರ್ಥೇಶ್, ಪ್ರಸಾದ್ ಕಾಟೂರು, ಧೀರೇಶ್, ಚಂದ್ರಶೇಖರ ನೆಡಿಲು ಮುಂತಾದವರು ಉಪಸ್ಥಿತರಿದ್ದರು.

add - Haeir

Related Posts

Leave a Reply

Your email address will not be published.