ಅಫ್ಘಾನ್ ತಾಲಿಬಾನ್ ವಶದ ಬೆನ್ನಲ್ಲೇ ಭಾರತದ ಡ್ರೈ ಫ್ರೂಟ್ ಉದ್ಯಮಕ್ಕೆ ಹೊಡೆತ..!

ಜಾಗತಿಕವಾಗಿ ಡ್ರೈ ಫ್ರೂಟ್ ಮಾರಾಟ ಕ್ಷೇತ್ರದಲ್ಲಿ ಅಫ್ಘಾನಿಸ್ತಾನ ಪಾರುಪತ್ಯ ಹೊಂದಿದೆ. ಅಲ್ಲದೇ ಭಾರತದಲ್ಲಿ ಅಫ್ಘಾನಿಸ್ತಾನದ ಡ್ರೈ ಫ್ರೂಟ್‍ಗೆ ಎಲ್ಲಿಲ್ಲದ ಬೇಡಿಕೆ ಕೂಡ ಇದೆ ಆದರೆ ಈಗ ಅಫ್ಘಾನಿಸ್ತಾನ ತಾಲಿಬಾನ್ ವಶಕ್ಕೆ ಹೋಗಿ ಶಾಂತವಾಗಿದ್ದ ನೆಲ ನಲುಗಿ ಹೋಗಿದ್ದು. ಭಾರತದ ಡ್ರೈ ಫ್ರೂಟ್ ಉದ್ಯಮ ಅಕ್ಷರಶಃ ನೆಲಕಚ್ಚಿದಂತಾಗಿದೆ.

ಹೌದು ಅಫ್ಘಾನಿಸ್ತಾನ ತಾಲಿಬಾನ್ ವಶ ಪಡಿಸಿಕೊಂಡ ನಂತರ ಶಾಂತವಾಗಿದ್ದ ಅಫ್ಘಾನ್ ನೆಲ ನಲುಗಿ ಹೋಗಿದೆ. ಇನ್ನು ಅಫ್ಗಾನ್ ನೆಲದಲ್ಲಿ ಬದುಕು ಕಟ್ಟಿಕೊಂಡಿದ್ದ ಸಾವಿರಾರು ಭಾರತೀಯರು ಈಗಾಗಲೇ ತಾಯ್ನಾಡು ಸೇರಿದ್ದಾರೆ. ಈ ನಡುವೆ ಅಫ್ಘಾನಿಸ್ತಾನದ ಜೊತೆಗೆ ಹಲವಾರು ವರ್ಷಗಳಿಂದ ಭಾರತ ವ್ಯಾವಹಾರಿಕವಾಗಿಯೂ ಒಂದೊಳ್ಳೆ ಸಂಬಂಧ ಹೊಂದಿತ್ತು. ಅದರಲ್ಲಿ ಮುಖ್ಯವಾದದ್ದು. ಡ್ರೈ ಫ್ರೂಟ್ ಉದ್ಯಮ ಆದರೆ ಆ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಇಡೀ ಭಾರತಕ್ಕೆ ಅಫ್ಘಾನಿಸ್ತಾನದ ಡ್ರೈ ಫ್ರೂಟ್ ಪೂರೈಕೆ ಮಾಡುವ ಮಂಗಳೂರಿನ ರೀಮ್ ಟ್ರೇಡರ್ಸ್ ಸಂಸ್ಥೆಯ ವ್ಯವಹಾರದಲ್ಲಿ ಭಾರೀ ವ್ಯತ್ಯಯ ಆಗಿದೆ…. ಅಫ್ಘಾನಿಸ್ತಾನ ತಾಲಿಬಾನ್ ವಶವಾದ ಹಿನ್ನೆಲೆ ಮಂಗಳೂರಿಗೆ ಅಪ್ಘಾನ್ ಡ್ರೈ ಫ್ರೂಟ್ ಆಮದು ಸಂಪೂರ್ಣ ಸ್ಥಗಿತಗೊಂಡಿದೆ. 1918 ರಿಂದಲೇ ದಕ್ಷಿಣ ಭಾರತದ ಅತೀ ದೊಡ್ಡ ಡ್ರೈ ಫ್ರೂಟ್ ಆಮದು ಸಂಸ್ಥೆ ರೀಮ್ ಟ್ರೇಡರ್ಸ್ ವ್ಯವಹಾರ ವ್ಯತ್ಯಯವಾಗಿದ್ದು, ಬೇಡಿಕೆಯಿದ್ದರೂ ಆಮದು ಬಂದ್ ಅಗಿರೋ ಕಾರಣ ವ್ಯವಹಾರ ನಿಂತು ಹೋಗಿದೆ… ಮಂಗಳೂರಿನ ಬಂದರು ಪ್ರದೇಶದಲ್ಲಿರುವ ರೀಮ್ ಟ್ರೇಡರ್ಸ್ ಮಾಲೀಕರಾದ ಮೊಹಮ್ಮದ್ ಮುಖ್ತಾರ್ ಹೇಳುವಂತೆ, ಡ್ರೈ ಫ್ರೂಟ್ ಆಮದು ಸ್ಥಗಿತ ಬೆನ್ನಲ್ಲೇ 15-20% ದರದಲ್ಲಿ ಭಾರೀ ಹೆಚ್ಚಳವಾಗಿದ್ದು, ಇದರ ನೇರ ಪರಿಣಾಮ ಗ್ರಾಹಕರಿಗೆ ತಟ್ಟಿದೆ. ಅಫ್ಘಾನಿಸ್ತಾನದ ಅಂಜೀರ್(ಫಿಗ್), ಅಪ್ರಿಕೋಟ್, ಅಫ್ಘಾನ್ ದ್ರಾಕ್ಷಿ, ಫೈನ್ ನಟ್ಸ್, ಬಾದಾಮ್, ಬ್ಲಾಕ್ ದ್ರಾಕ್ಷಿ ಬೆಲೆಗಳಲ್ಲಿ ಏರಿಕೆ ಕಂಡು ಬಂದಿದ್ದು, ಇವುಗಳನ್ನು ಅಫ್ಘಾನ್ ಹೊರತುಪಡಿಸಿ ಬೇರೆಲ್ಲಿಂದಲೂ ಆಮದು ಮಾಡಿಕೊಳ್ಳಲು ಆಗಲ್ಲ. ಹಬ್ಬಗಳ ಸೀಝನ್ ಹಿನ್ನೆಲೆ ಭಾರೀ ಬೇಡಿಕೆಯಿದ್ದರೂ ಪೂರೈಕೆಯಾಗದೇ ಡ್ರೈ ಫ್ರೂಟ್ಸ್ ಕೊರತೆ ಉಂಟಾಗಿದೆ.

ಸದ್ಯ ಅಫ್ಘಾನಿಸ್ತಾನ ತಾಲಿಬಾನ್ ವಶವಾದ ಹಿನ್ನೆಲೆ ಬ್ಯಾಂಕಿಂಗ್ ವ್ಯವಹಾರ ಸಂಪೂರ್ಣ ಸ್ಥಗಿತದಿಂದ ಪೂರೈಕೆ ಬಂದ್ ಆಗಿದೆ….ಅಫ್ಘಾನ್ ಬಿಕ್ಕಟ್ಟಿನಿಂದ ಸಾಗಾಣಿಕೆಗೂ ತಡೆ ಉಂಟಾಗಿ ಡ್ರೈ ಫ್ರೂಟ್ ವ್ಯವಹಾರಕ್ಕೆ ಹೊಡೆತ ಬಿದ್ದಿದೆ. ಇನ್ನು ಈ ರೀಮ್ ಟ್ರೇಡರ್ಸ್ ದಕ್ಷಿಣ ಭಾರತದ ಅತೀ ದೊಡ್ಡ ಡ್ರೈ ಫ್ರೂಟ್ ಉದ್ಯಮವಾಗಿದ್ದು, ಅಫ್ಘಾನ್ ನಿಂದ ಆಮದು ಮಾಡಿ ದಕ್ಷಿಣ ಭಾರತದ ಏಳು ರಾಜ್ಯಗಳ ಜೊತೆ ಉತ್ತರ ಭಾರತಕ್ಕೂ ಪೂರೈಕೆ ಮಾಡುತ್ತದೆ. ಭಾರತದ ಹತ್ತಾರು ರಾಜ್ಯಗಳಿಗೆ ಅಫ್ಘಾನ್ ಡ್ರೈ ಫ್ರೂಟ್ ಪೂರೈಸುವ ಮಂಗಳೂರು ರೀಮ್ ಟ್ರೇಡರ್ಸ್ ಗೆ ಕಳೆದ ಕೆಲ ದಿನಗಳಿಂದ ಅಫ್ಘಾನ್ ಡ್ರೈ ಪ್ರೂಟ್ ಪೂರೈಕೆ ನಿಂತಿದೆ. ಇನ್ನು ಭಾರತದ ಡ್ರೈ ಫ್ರೂಟ್ ಮಾರುಕಟ್ಟೆಯಲ್ಲಿ ಅಫ್ಘಾನಿಸ್ತಾನದ ಒಣಹಣ್ಣುಗಳದ್ದೇ ಪಾರುಪತ್ಯವಿದ್ದು, ಕೆ.ಜಿಗೆ ಐದಾರು ಸಾವಿರ ರೂ ಬೆಲೆಯ ಡ್ರೈ ಪ್ರೂಟ್ ಗಳು ಕೂಡ ಭಾರತದಲ್ಲಿ ಬೃಹತ್ ಮಾರುಕಟ್ಟೆ ಹೊಂದಿದೆ. ಇನ್ನು ಇದೇ ರೀತಿ ಮುಂದುವರೆದ್ರೆ ಅಫ್ಘಾನ್ ಡ್ರೈ ಪ್ರೂಟ್ ಮಾರುಕಟ್ಟೆ ಬಂದ್ ಆಗೋ ಆತಂಕ ಎದುರಾಗಿದ್ದು, ಸದ್ಯದಲ್ಲೇ ಎಲ್ಲವೂ ಪರಿಹಾರವಾಗಿ ಸಮಸ್ಯೆ ಪರಿಹಾರವಾಗೋ ಆಶಾವಾದ ಮಂಗಳೂರಿನ ಉದ್ಯಮಿಗಳದ್ದು. ಒಟ್ನಲ್ಲಿ ಭಾರತಕ್ಕೂ ಅಫ್ಘಾನಿಸ್ತಾನಕ್ಕೂ ವ್ಯವಹಾರಿಕವಾಗಿ ಬಹುದೊಡ್ಡ ಸಂಬಂಧವಿದೆ. ಉಭಯ ದೇಶಗಳ ಮಧ್ಯೆ ಆಮದು-ರಫ್ತು ವ್ಯವಹಾರ ಜೋರಾಗಿದ್ದ ಕಾರಣ ಅಲ್ಲಿನ ಬಿಕ್ಕಟ್ಟು ಎರಡೂ ದೇಶಗಳ ಮಧ್ಯೆ ವ್ಯವಹಾರಿಕ ಸಂಚಲನಕ್ಕೂ ಕಾರಣವಾಗಿರೋದು ಸತ್ಯ…..

 

Related Posts

Leave a Reply

Your email address will not be published.