ಅಮೆರಿಕನ್ನರ ಗಮನ ಸೆಳೆದ ಮಮತಾ ಪುಟ್ಟಸ್ವಾಮಿ
ಅಮೆರಿಕಾದಲ್ಲಿ ನೆಲೆಸಿರುವ ಮೈಸೂರು ಮೂಲದ ಶಿಕ್ಷಕಿ ಮಮತಾ ಪುಟ್ಟಸ್ವಾಮಿ ಅವರು ತನ್ನ ಪ್ರತಿಭೆಯ ಮೂಲಕ ಅಮೆರಿಕಾದ ಭಾರತೀಯರ ಗಮನ ಸೆಳೆದಿದ್ದಾರೆ. ಅಮೆರಿಕಾದ ವಿವಿಧ ಭಾರತೀಯ ಸಂಘಟನೆಗಳು ಆಯೋಜಿಸಿರುವ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಸೌಂಧರ್ಯ ಸ್ಫರ್ಧೆಯಲ್ಲಿ ಮಮತಾ ಪುಟ್ಟಸ್ವಾಮಿ ಅವರು ಪ್ರಶಸ್ತಿ ಪಡೆಯುವ ಮೂಲಕ ತನ್ನ ಪ್ರತಿಭೆಯನ್ನು ಮೆರೆದಿದ್ದಾರೆ.
ಮಿಸೆಸ್ ಇಂಡಿಯಾ ಕನೆಕ್ಟಿಕಟ್ 2018 ರ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸುವ ಮೂಲಕ ಮಮತಾ ಪುಟ್ಟಸ್ವಾಮಿ ಅವರು ಅಮೆರಿಕಾದ ಭಾರತೀಯರ ನಡುವೆ ಮಿಂಚಿದ್ದರು.2019 ರಲ್ಲಿ ಮಿಸಸ್ ಇಂಡಿಯಾ ಕನೆಕ್ಟ್ ಕ್ವಿಟ್ ಕಿರೀಟವನ್ನು ಗೆದ್ದಿದ್ದರು. 2020 ನೇ ಸಾಲಿನಲ್ಲಿ ಐಎಓಸಿಸಿ ಸಂಸ್ಥೆಯು ಅಂತರಾಷ್ಟ್ರಿಯ ಮಹಿಳಾ ದಿನಾಚರಣೆ ಅಂಗವಾಗಿ ಮಮತಾ ಅವರ ಸಾಧನೆಯನ್ನು ಗುರುತಿಸಿ ಗೌರವಿಸಿತ್ತು.
ಅಮೆರಿಕಾದಲ್ಲಿನ ಭಾರತೀಯ ಮೂಲದವರ ಜಾಗತಿಕ ಸಂಘಟನೆ ಜಿಓಪಿಐಓ ಇತ್ತೀಚೆಗೆ ಆಯೋಜಿಸಿದ ಹೋಲಿ ಆಚರಣೆ ಕಾರ್ಯಕ್ರಮದಲ್ಲಿ ಮಮತಾ ಪುಟ್ಟಸ್ವಾಮಿ ಅವರು ಹಿಂದಿ ಸಿನಿಮಾ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಗಮನಸೆಳೆದಿದ್ದರು. ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಮಮತಾ ಅವರು ಅಮೆರಿಕಾದಲ್ಲಿಯೂ ಶಿಕ್ಷಕಿ ವೃತ್ತಿಯನ್ನು ಮುಂದುವರಿಸಿದ್ದು, ತನ್ನ ಪ್ರತಿಭೆಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಬೀತು ಪಡಿಸಿದ್ದಾರೆ.